Adi Chunchanagiri Jatra2024: ಆದಿ ಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ಸಡಗರ, ಭಕ್ತರ ಸಮಾಗಮ photos
- ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಸಡಗರ. ಒಂದು ವಾರದಿಂದ ನಾನಾ ಚಟುವಟಿಕೆಗಳು ನಡೆದಿದ್ದು, ಕಾಲಭೈರವೇಶ್ವರ ರಥೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದೆ. ಜಾತ್ರಾಮಹೋತ್ಸವದ ಈ ಬಾರಿಯ ಧಾರ್ಮಿಕ ಚಟುವಟಿಕೆಗಳ ನೋಟ ಇಲ್ಲಿದೆ.
- ಮಂಡ್ಯ ಜಿಲ್ಲೆಯ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಸಡಗರ. ಒಂದು ವಾರದಿಂದ ನಾನಾ ಚಟುವಟಿಕೆಗಳು ನಡೆದಿದ್ದು, ಕಾಲಭೈರವೇಶ್ವರ ರಥೋತ್ಸವವೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದೆ. ಜಾತ್ರಾಮಹೋತ್ಸವದ ಈ ಬಾರಿಯ ಧಾರ್ಮಿಕ ಚಟುವಟಿಕೆಗಳ ನೋಟ ಇಲ್ಲಿದೆ.
(1 / 11)
ಕರ್ನಾಟಕ ಮಾತ್ರವಲ್ಲದೇ ನಾನಾ ಭಾಗಗಳಿಂದಲೂ ಆಗಮಿಸಿದ್ದ ಭಕ್ತರ ಜಯಘೋಷಗಳ ನಡುವೆ ಆದಿಚುಂಚನಗಿರಿ ಶ್ರೀ ಕ್ಷೇತ್ರದಲ್ಲಿ ಕಾಲಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಸಡಗರದಿಂದ ನೆರವೇರಿತು.
(2 / 11)
ಕಾಲಭೈರವೇಶ್ವರ ರಥೋತ್ಸವದ ವೇಳೆ ದೇವರ ಉತ್ಸವ ಮೂರ್ತಿ ಬಂದಾಗ ಅಲ್ಲಿ ನೆರೆದಿದ್ದ ಭಕ್ತರು ನಮಸ್ಕರಿಸಿ ಪುನೀತರಾದರು.
(3 / 11)
ಆದಿ ಚುಂಚನಗಿರಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ದಿನ ಶ್ರೀ ಕಾಲಭೈರವಸ್ವಾಮಿಯವರಿಗೆ ವಿಶೇಷ ಪುಷ್ಪಾಲಂಕಾರ ನೆರವೇರಿಸಲಾಗುತ್ತದೆ. ಮಂಗಳವಾರ ಕಂಡು ವಿಶೇಷ ಅಲಂಕಾರದ ಕ್ಷಣ,
(4 / 11)
ಆದಿಚುಂಚನಗಿರಿ ಜಾತ್ರಾ ಮಹೋತ್ಸವ* ದ ಪ್ರಯುಕ್ತ *ಸಿದ್ಧಸಿಂಹಾಸನ ಪೂಜೆ, ಜ್ವಾಲಾಪೀಠಾರೋಹಣ ಹಾಗೂ ಷೋಡಶೋಪಚಾರ ಪೂಜೆಯು* ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ *ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರಿಗೆ ನೆರವೇರಿದವು.
(5 / 11)
ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಕುಟುಂಬ ಸಮೇತರಾಗಿ ಆಗಮಿಸಿರುವ ಭಕ್ತರು ಸೆಲ್ಪಿ ತೆಗೆದುಕೊಂಡು ಖುಷಿ ಪಟ್ಟರು.
(6 / 11)
ಜಾತ್ರಾ ಮಹೋತ್ಸವ ಅಂಗವಾಗಿ ಆದಿಚುಂಚನಗಿರಿಯಲ್ಲಿ ನಡೆದ ಮೆರವಣಿಗೆಯಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಹಿತ ಹಲವರು ಭಾಗಿಯಾದರು.
(7 / 11)
ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಭಾಗವಾಗಿ *ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಗಂಗಾಧರೇಶ್ವರಸ್ವಾಮಿ ಮಹಾರಥೋತ್ಸವ ಹಾಗೂ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರ ಅಡ್ಡಪಾಲಕಿ ಉತ್ಸವ* ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
(8 / 11)
ಆದಿಚುಂಚನಗಿರಿ ಜಾತ್ರಾ ಮಹೋತ್ಸವ* ದ ಪ್ರಯುಕ್ತ *ಶ್ರೀ ಕಾಲಭೈರವೇಶ್ವರ ಪುಷ್ಕರಣಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ತೆಪ್ಪೋತ್ಸವ ಧಾರ್ಮಿಕ ಪೂಜಾ ಕಾರ್ಯಕ್ರಮವು ಮಠದ *ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳವರ ಸಾನಿಧ್ಯದಲ್ಲಿ ನೆರವೇರಿತು.ಈ ಸಂದರ್ಭದಲ್ಲಿಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಸ್ವಾಮೀಜಿಗಳವರು ಹಾಗೂ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಭಕ್ತರು ಭಾಗಿಯಾದರು,
(9 / 11)
ಆದಿಚುಂಚನಗಿರಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ದಾಸೋಹವನ್ನು ಅರಿಶಿನಕುಂಟೆ ರಾಜಮ್ಮ ಮತ್ತು ರಾಮಕೃಷ್ಣಪ್ಪ ಕುಟುಂಬದವರು ಹಾಗೂ ಶ್ರೀ ಕಾಲಭೈರವೇಶ್ವರ ಜಾತ್ರಾ ಮಹೋತ್ಸವ ಅನ್ನಸಂತರ್ಪಣಾ ಸೇವಾ ಟ್ರಸ್ಟ್ ವತಿಯಿಂದ* ಆಯೋಜಿಸಲಾಗಿರುವ ಪ್ರಸಾದ ವಿತರಣೆಯನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು* ಭಕ್ತರಿಗೆ ಪ್ರಸಾದ ವಿತರಿಸಿ ಚಾಲನೆ ನೀಡಿದರು.
(10 / 11)
ಜಾತ್ರಾ ಮಹೋತ್ಸವ ಅಂಗವಾಗಿ ಕಾಲಭೈರವೇಶ್ವರ ಸ್ವಾಮಿ ಹಾಗೂ ಗಂಗಾಧರೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿದವು. ಈ ವೇಳೆ ಅಲಂಕಾರ ಗಮನ ಸೆಳೆಯಿತು.
ಇತರ ಗ್ಯಾಲರಿಗಳು