Mysore Dasara 2024: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅದ್ಧೂರಿ ಜಂಬೂಸವಾರಿಯ ಫೋಟೊಸ್ ನೋಡಿ
- ಮೈಸೂರು ದಸರಾ 2024: ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿ ಹೇಗಿತ್ತು, ಕಿಕ್ಕಿರದು ಸೇರಿದ್ದ ಜನ ಸಾಗರದ ನಡುವೆ ಕ್ಯಾಪ್ಟನ್ ಅಭಿಮನ್ಯು ಅಂಬಾರಿಯನ್ನು ಹೊತ್ತು ಸಾಗಿದ ಮರೆಯಲಾರದ ಕ್ಷಣಗಳು ಹೇಗಿದ್ದವು ನೋಡಿ. 2024ರ ಮೈಸೂರು ದಸರಾ ಜಂಬೂಸವಾರಿಯ ಫೋಟೊಸ್ ಇಲ್ಲಿವೆ.

(1 / 7)
ವಿಶ್ವವಿಖ್ಯಾತ ಮೈಸೂರು ದಸದಾ ಜಂಬೂ ಸವಾರಿ ಆರಂಭಕ್ಕೂ ಮುನ್ನ ಅಂಬಾರಿಯನ್ನು ಹೊತ್ತ ಕ್ಯಾಪ್ಟನ್ ಅಭಿಮನ್ಯು ಕಿಕ್ಕಿರಿದು ಸೇರಿದ್ದ ಜನರ ನಡುವೆ ಸಾಗಿ ಬಂದನು. ಈ ವೇಳೆ ಅಭಿಮನ್ಯುಗೆ ಲಕ್ಷ್ಮಿ ಹೆಸರಿನ ಆನೆ ಸಾಥ್ ನೀಡಿತು.
(2 / 7)
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
(3 / 7)
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌ಸಿ ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಹಾಗೂ ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಸಿಎಂ, ಡಿಸಿಎಂಗೆ ಸಾಥ್ ನೀಡಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರು.
(4 / 7)
ಬಂಜೂ ಸವಾರಿಗೂ ಚಾಲನೆ ನೀಡುವ ವೇಳೆ ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಮನ ಸಲ್ಲಿಸಿದರು.
(5 / 7)
ವಿವಿಧ ಕಲಾ ತಂಡಗಳು ಆರಮನೆ ಅಂಗಳದಲ್ಲಿ ಸಾಗುತ್ತಿದ್ದ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರ. ಕಲಾವಿದರ ನೃತ್ಯ ಗಮನ ಸೆಳೆಯಿತು.
(6 / 7)
ವಿವಿಧ ಕಲಾ ತಂಡಗಳು ಜಂಬೂ ಸವಾರಿಯೊಂದಿಗೆ ತಮ್ಮ ಕಲೆಗಳನ್ನು ಪ್ರದರ್ಶಿಸುತ್ತಾ ಸಾಗಿದವು. ತಮಟೆ ಕಲಾವಿದರು ನೆರೆದಿದ್ದವರ ಗಮನ ಸಳೆದರು.
ಇತರ ಗ್ಯಾಲರಿಗಳು