Independence day 2024: ಮೈಸೂರಲ್ಲಿ ಓರಿಗಾಮಿ ಚೆಂಡು, ಪುನರ್ ಬಳಕೆ ವಸ್ತು ಬಳಸಿ ರಾಷ್ಟ್ರ ಧ್ವಜ ನಿರ್ಮಾಣ, ಪೂರ್ಣಚೇತನ ಶಾಲೆ ಮಕ್ಕಳ ದಾಖಲೆ
- Mysore News ಮೈಸೂರಿನ ಪೂರ್ಣಚೇತನ ಶಾಲೆಯ ಮಕ್ಕಳು ರಾಷ್ಟ್ರ ಧ್ವಜವನ್ನು( Indian Flag) ವಿಭಿನ್ನವಾಗಿ ತಯಾರಿಸಿ ದಾಖಲೆ ನಿರ್ಮಿಸಿದ್ದಾರೆ.
- Mysore News ಮೈಸೂರಿನ ಪೂರ್ಣಚೇತನ ಶಾಲೆಯ ಮಕ್ಕಳು ರಾಷ್ಟ್ರ ಧ್ವಜವನ್ನು( Indian Flag) ವಿಭಿನ್ನವಾಗಿ ತಯಾರಿಸಿ ದಾಖಲೆ ನಿರ್ಮಿಸಿದ್ದಾರೆ.
(1 / 7)
ರಾಷ್ಟ್ರ ಧ್ವಜ ತಯಾರಿ ಎಂತವರಿಗೂ ಪುಳಕ ನೀಡುವ ಕಾಯಕವೇ. ಮೈಸೂರಿನ ಪೂರ್ಣ ಚೇತನ ಶಾಲೆಯಲ್ಲಿ ವಿಭಿನ್ನವಾಗಿ ರಾಷ್ಟ್ರ ಧ್ವಜ ನಿರ್ಮಿಸುವ ಹೊಣೆಯನ್ನು ಮಕ್ಕಳಿಗೆ ನೀಡಲಾಯಿತು.
(4 / 7)
ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ 12 ಮೀಟರ್ x 8 ಮೀಟರ್ ಅಳತೆಯ ಅತಿ ದೊಡ್ಡ ರಾಷ್ಟ್ರ ದ್ವಜವನ್ನು 4 ಗಂಟೆ 5 ನಿಮಿಷದಲ್ಲಿ ತಯಾರಿಸಿದ್ದು ದಾಖಲೆಗೆ ಸೇರಿತು..ಎಲೈಟ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರರಾದ ಭಾವನಾ ನವನೀತ್, ಏಷ್ಯನ್ ರೆಕಾರ್ಡ್ಸ್ ಅಕಾಡೆಮಿ ಮತ್ತು ಇಂಡಿಯಾ ರೆಕಾರ್ಡ್ಸ್ ಅಕಾಡೆಮಿಯ ತೀರ್ಪುಗಾರರಾದ ಪಿ ಜಿ ಪ್ರತಿಭಾ ಅವರು ವಿಶ್ವ ದಾಖಲೆಗಳನ್ನು ಅಧಿಕೃತವಾಗಿ ಪ್ರಮಾಣೀಕರಿಸಿದರು.
(5 / 7)
ವಿಕಸಿತ ಭಾರತ ಪರಿಕಲ್ಪನೆಯಡಿ ಈ ರಾಷ್ಟ್ರಧ್ವಜವನ್ನು ಪೂರ್ಣಚೇತನ ಶಾಲೆಯಲ್ಲಿ ರೂಪಿಸಿದ ಸಂತಸದಲ್ಲಿ ರಾಜವಂಶಸ್ಥ ಹಾಗೂ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಭಾಗಿಯಾದರು
(6 / 7)
ಪೂರ್ಣ ಚೇತನ ಶಾಲೆಯ ಒಂದರಿಂದ ಹತ್ತನೇ ತರಗತಿಯವರೆಗಿನ ಸುಮಾರು 530 ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು (ಬ್ಲೈಂಡ್ ಫೋಲ್ಡ್) ಐದು ನಿಮಿಷಗಳ ಕವಾಯತು ನಡೆಸಿ, ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ, ಬಳಿಕ 2047ರಲ್ಲಿ ವಿಕಸಿತ ಭಾರತದ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು.
ಇತರ ಗ್ಯಾಲರಿಗಳು