Mysuru Dasara Kusti: ಮೈಸೂರು ದಸರಾ ಕುಸ್ತಿ: ಕಂಠೀರವ, ಕೇಸರಿ, ಕಿಶೋರಿ, ಕಿಶೋರ ಪ್ರಶಸ್ತಿ ಪಡೆದವರ ಸಂತಸ
- ಮೈಸೂರು ದಸರಾ(Mysuru dasara)ದಲ್ಲಿ ಕುಸ್ತಿಗೆ( Wrestling) ಮಹತ್ವವಿದೆ. ಕುಸ್ತಿ ಪಟುಗಳ ಆ ಪಟ್ಟುಗಳನ್ನು ನೋಡುವುದೇ ಚಂದ. ಅದರಲ್ಲೂ ದಸರಾದ ಪ್ರಮುಖ ಟೈಟಲ್(Titles)ಗಳಿಗೆ ಪ್ರಮುಖ ಕುಸ್ತಿಪಟುಗಳ ನಡುವೆ ಸ್ಪರ್ಧೆ ಇರುತ್ತದೆ, ಈ ಬಾರಿ ಉತ್ತರ ಕರ್ನಾಟಕದವರೇ ದಸರಾ ಕಂಠೀರವ, ಕೇಸರಿ, ಕಿಶೋರ ಹಾಗೂ ಕಿಶೋರಿ ಪ್ರಶಸ್ತಿಗಳನ್ನು ಗೆದ್ದವರ ಸಂತಸ ಹೀಗಿತ್ತು.

(1 / 7)
ಮೈಸೂರು ದಸರಾ ಅಂಗವಾಗಿ ನಡೆಯುವ ಕುಸ್ತಿ ಪ್ರದರ್ಶನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮು ಎತ್ತುವ ಮೂಲಕ ಕಳೆದ ವಾರ ಚಾಲನೆ ನೀಡಿದ್ದರು. ಒಂದು ವಾರ ಕಾಲ ನಡೆದ ವಿವಿಧ ಕುಸ್ತಿಗಳ ಪಂದ್ಯಕ್ಕೆ ತೆರೆ ಬಿದ್ದಿದೆ.
(2 / 7)
ಮೈಸೂರಿನ ದೇವರಾಜ ಅರಸ್ ವಿವಿದೋದ್ದೇಶ ಕುಸ್ತಿ ಮೈದಾನದಲ್ಲಿ ಈ ಬಾರಿ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸುತ್ತಿರುವ ಕುಸ್ತಿ ಪೈಲ್ವಾನರು.
(3 / 7)
ಮೈಸೂರು ದಸರಾ ಕುಸ್ತಿ ಸಾಹಸ ಪ್ರದರ್ಶನ ವೇದಿಕೆಯೂ ಹೌದು. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಬಿದರಕುಂದಿಯ ಪೈಲ್ವಾನ್ ನಂದಪ್ಪ ಅವರಿಂದ ತೂಕ ಹೊತ್ತ ಸಾಹನ ಪ್ರದರ್ಶನ.
(4 / 7)
ಮೈಸೂರು ದಸರಾ ಪಂಜ ಕುಸ್ತಿಯಲ್ಲಿ ಬಹುಮಾನ ಗೆದ್ದ ರಿಜ್ವಾನ್, ಮಧುರ ಹಾಸನ ಹಾಗೂ ಶ್ರೀನಿವಾಸಗೌಡ ಅವರು ಟ್ರೋಫಿಯೊಂದಿಗೆ ಇರುವ ಸಂತಸದ ಕ್ಷಣ
(5 / 7)
ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾಳಿಯಲ್ಲಿ ದಸರಾ ಕಿಶೋರ ಆಗಿ ಆಯ್ಕೆಯಾದ ಕೊರವರ ಸಂಜೀವ ಅವರು ಗದೆ ಹಿಡಿದು ಬಂದ ಸಂತಸದ ಕ್ಷಣ.
(6 / 7)
ಮೈಸೂರು ದಸರಾ ಕುಸ್ತಿ ಪಂದ್ಯಾಳಿಯಲ್ಲಿ ವಿವಿಧ ಟೈಟಲ್‌ಗಳನ್ನು ಗೆದ್ದ ದಸರಾ ಕಂಠೀರವ ಸುನಿಲ್ ಪಡತಾರೆ, , ದಸರಾ ಕೇಸರಿ ರೋಹನ್ ನಾರಾಯಣ ಗೋವಾಗೆ, ದಸರಾ ಕಿಶೋರ ಕೊರವರ ಸಂಜೀವ, ದಸರಾ ಕಿಶೋರಿ ಲಕ್ಷ್ಮಿ ಪಾಟೀಲ್ ಅವರಿಗೆ ಸಚಿವ ಡಾ.ಮಹದೇವಪ್ಪ, ಶಾಸಕ ಹರೀಶ್‌ಗೌಡ ಬಹುಮಾನ ವಿತರಿಸಿದರು.
ಇತರ ಗ್ಯಾಲರಿಗಳು