Mysore News: ಮೈಸೂರು ಮಾವು, ಹಲಸು ಮೇಳದಲ್ಲಿ ಹಣ್ಣುಗಳ ವೈಭವ, ಮೇಳ ಇಂದೇ ಕೊನೆ
- Mysore Mango Mela 2024 ಮೈಸೂರಿನಲ್ಲಿ ಮೂರು ದಿನಗಳ ಮಾವು ಮೇಳ2024ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ಮೇಳಕ್ಕೆ ಕಡೆಯ ದಿನ. ಮಾವು ಮೇಳಕ್ಕೆ ಬಂದವರ ಸಂತಸದ ನೋಟ ಇಲ್ಲಿದೆ.
- Mysore Mango Mela 2024 ಮೈಸೂರಿನಲ್ಲಿ ಮೂರು ದಿನಗಳ ಮಾವು ಮೇಳ2024ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾನುವಾರ ಮೇಳಕ್ಕೆ ಕಡೆಯ ದಿನ. ಮಾವು ಮೇಳಕ್ಕೆ ಬಂದವರ ಸಂತಸದ ನೋಟ ಇಲ್ಲಿದೆ.
(1 / 7)
ಮೈಸೂರು ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಾರ್ಡಿಂಜ್ ವೃತ್ತದ ಬಳಿ ಇರುವ ಕುಪ್ಪಣ್ಣ ಪಾರ್ಕ್‍ನಲ್ಲಿ ಮಾವು ಹಾಗೂ ಹಲಸಿನ ಮೇಳ ಆಯೋಜನೆಗೊಂಡಿದೆ.
(2 / 7)
ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಆಗಮಿಸಿರುವ ರೈತರು, ಮಾರಾಟಗಾರರು ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಖರೀದಿ ಭರಾಟೆಯೂ ಜೋರಾಗಿದೆ.
(4 / 7)
ಮೈಸೂರು ಮಾವು ಮೇಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು ಮಳಿಗೆಗಳಿಗೆ ಭೇಟಿ ನೀಡಿ ಹಣ್ಣುಗಳನ್ನು ಖರೀದಿಸಿದರು.
(5 / 7)
ಪ್ರತಿಯೊಂದು ಮಳಿಗೆಗಳ ಮುಂದೆ ದರ ಪಟ್ಟಿ ಹಾಕಲಾಗಿದ್ದು, ಗ್ರಾಹಕರಿಗೆ ಕಡಿಮೆ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚಿಸಲಾಗಿದೆ. ಉತ್ತಮ ದರ್ಜೆಯ ಮಾವಿನ ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ.
(6 / 7)
ಮೈಸೂರಿನ ಕುಪ್ಪಣ್ಣ ಉದ್ಯಾನವನದ ಆವರಣದಲ್ಲಿ 35 ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ.
ಇತರ ಗ್ಯಾಲರಿಗಳು