ಮೈಸೂರು ದಸರಾಕ್ಕೆ ಬರುತ್ತಿದ್ದೀರಾ, ಮೈಸೂರಿನಲ್ಲಿರುವ ಈ ಪ್ರಮುಖ, ವೈವಿಧ್ಯಮಯ 12 ಮ್ಯೂಸಿಯಂಗಳಿಗೆ ಭೇಟಿ ನೀಡದೇ ಹೋಗಬೇಡಿ photos
- ಮೈಸೂರು ಎಂದರೆ ಅರಮನೆಗಳ ನಗರಿ.ಪಾರಂಪರಿಕ ತಾಣಗಳ ಊರು ಹೌದು. ಇಲ್ಲಿ ಪ್ರಮುಖ 12 ಮ್ಯೂಸಿಯಂಗಳು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅವುಗಳ ವಿವರ ಇಲ್ಲಿದೆ.
- ಮೈಸೂರು ಎಂದರೆ ಅರಮನೆಗಳ ನಗರಿ.ಪಾರಂಪರಿಕ ತಾಣಗಳ ಊರು ಹೌದು. ಇಲ್ಲಿ ಪ್ರಮುಖ 12 ಮ್ಯೂಸಿಯಂಗಳು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಅವುಗಳ ವಿವರ ಇಲ್ಲಿದೆ.
(1 / 12)
ಮೈಸೂರಿನ ಮರಳು ಕಲಾವಿದೆ ಗೌರಿ ಅವರು ದಶಕದಿಂದ ಹಲವು ಕಡೆಗಳಲ್ಲಿ ಮರಳು ಕಲಾಕೃತಿ ರಚಿಸುತ್ತಿದ್ದರು. ಈಗ ಚಾಮುಂಡಿಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿಯೇ ಮರಳಿನ ಮ್ಯೂಸಿಯಂ ಆರಂಭಿಸಿದ್ದಾರೆ. ಚಾಮುಂಡಿಬೆಟ್ಟಕ್ಕೆ ಹೋಗುವವರು ಇಲ್ಲಿಗೂ ಹೋಗಬಹುದು.
(2 / 12)
ಮೈಸೂರಿನ ಅರಮನೆ ಒಳಗಡೆ ವಿಭಿನ್ನ ಮ್ಯೂಸಿಯಂ ಇದೆ. ಇದು ಪ್ರಾಣಿಗಳನ್ನು ಬೇಟೆಯಾಡಿ ಟ್ಯಾಕ್ಸಿ ಡರ್ಮಿ ಮೂಲಕ ಸಂರಕ್ಷಣೆ ಮಾಡಲಾಗಿದೆ. ಇಲ್ಲಿ ಬಗೆಬಗೆಯ ಪ್ರಾಣಿಗಳ ಸ್ಟಫ್ಫಿಂಗ್ ಪ್ರಾಣಿಗಳಿವೆ. ಪೂರ್ವಾನುಮತಿಯೊಂದಿಗೆ ಅರಮನೆಯಲ್ಲಿ ಇದನ್ನು ವೀಕ್ಷಿಸಬಹುದು.
(3 / 12)
ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಕೆಆರ್‌ಎಸ್ ಗೆ ಹೋಗುವ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ವಿಶೇಷ ಆಕರ್ಷಣೆ. ರೈಲುಗಳ ಬೆಳವಣಿಗೆ ಹಾದಿಯನ್ನು ವಿಭಿನ್ನ ರೈಲುಗಳ ಮೂಲಕ ಇಲ್ಲಿ ವೀಕ್ಷಿಸಬಹುದು.
(4 / 12)
ಕರ್ನಾಟಕದ ಮೊದಲ ಶ್ರೀಗಂಧ ಮ್ಯೂಸಿಯಂ ಅನ್ನು ಕರ್ನಾಟಕ ಅರಣ್ಯ ಇಲಾಖೆಯು ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಆರಂಭಿಸಿದೆ. ಶ್ರೀಗಂಧದ ಕುರಿತಾದ ಸಮಗ್ರ ಮಾಹಿತಿ ಇಲ್ಲಿ ಸಿಗಲಿದೆ.
(5 / 12)
ಕೇಂದ್ರ ಪರಿಸರ ಸಚಿವಾಲಯದ ಪ್ರಾದೇಶಿಕ ಪ್ರಾಕೃತಿಕ ವಸ್ತುಸಂಗ್ರಹಾಲಯವು ವಿಶೇಷವಾಗಿದ್ದು, ಮೈಸೂರಿನ ಸಿದ್ದಾರ್ಥನಗರದ ಡೇರಿ ಸಮೀಪದಲ್ಲಿಯೇ ಇದೆ. ಇದು ಮನುಷ್ಯನ ಬೆಳವಣಿಗೆ. ಪ್ರಾಣಿಗಳ ಬೆಳವಣಿಗೆ ಹಾದಿ, ಬದುಕಿನ ಕ್ರಮದ ವಿಭಿನ್ನ ಮಾಹಿತಿ ನೀಡುವ ಸಂಗ್ರಹಾಲಯ.
(6 / 12)
ಮೈಸೂರಿನ ಅರಮನೆ ಎದುರು ಇರುವ ಜಗನ್ಮೋಹನ ಅರಮನೆ ಮೈಸೂರು ಮಹಾರಾಜರ ಖಾಸಗಿ ಮ್ಯೂಸಿಯಂ. ಇಲ್ಲಿ ಮಹಾರಾಜರ ಹಿಂದಿನ ವೈಭವದ ದಿನಗಳನ್ನು ನೆನಪಿಸುವ ಹಲವಾರು ವಸ್ತುಗಳ ಸಂಗ್ರಹವಿದೆ,.
(7 / 12)
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಜನಪದ ವಸ್ತು ಸಂಗ್ರಹಾಲಯವೂ ಜಯಲಕ್ಷ್ಮಿ ಅರಮನೆಯಲ್ಲಿ ನೆಲೆಗೊಂಡಿದೆ. ಜನಪದಕ್ಕೆ ಸಂಬಂಧಿಸಿದ ಹಲವಾರು ಮಾಹಿತಿ ಇಲ್ಲಿದೆ. ಇನ್ಫೋಸಿಸ್ ಫೌಂಡೇಷನ್ ಇದರ ಅಭಿವೃದ್ದಿಗೆ ನೆರವು ನೀಡಿದ್ದು ಮಾಹಿತಿ ಪೂರ್ಣವಾಗಿದೆ.
(8 / 12)
ಮೈಸೂರು -ಬೆಂಗಳೂರು ಹೆದ್ದಾರಿಯ ಶ್ರೀರಂಗಪಟ್ಟಣ ಸಮೀಪ ಇರುವ ಪಯಣ ಎನ್ನುವ ಹೆಸರಿನ ಹೊಸ ವಸ್ತು ಸಂಗ್ರಹಾಲಯವಿದು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಆರಂಭಿಸಿರುವ ಇಲ್ಲಿ ಹತ್ತಾರು ಬಗೆಯ ಕಾರುಗಳ ಪ್ರದರ್ಶನವಿದೆ. ಗಣ್ಯರು ಬಳಸಿದ ಕಾರುಗಳ ಲೋಕವೇ ಇಲ್ಲಿದೆ.
(9 / 12)
ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿರುವ ಇಂದಿರಾಗಾಂಧಿ ಮಾನವ ವಸ್ತು ಸಂಗ್ರಹಾಲಯವು ದೇಶದ ಜನಪದ ಸಂಸ್ಕೃತಿ, ಬದುಕನ್ನು ಬಿಂಬಿಸುತ್ತದೆ. ಈಗ ಇದನ್ನೂ ಆಧುನೀಕರಣಗೊಳಿಸಲಾಗಿದೆ.
(10 / 12)
ಕರ್ನಾಟಕ ಪ್ರಾಚ್ಯವಸ್ತು, ಸಂಗ್ರಹಾಲಯಗಳು, ಪರಂಪರೆ ಇಲಾಖೆಯ ವಸ್ತು ಪ್ರದರ್ಶನವೂ ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಇದೆ. ಆಯುಕ್ತರ ಕಚೇರಿಯಲ್ಲಿ ಇರುವ ಇಲ್ಲಿ ಕರ್ನಾಟಕದ ಹಿರಿಮೆಯ ಕಟ್ಟಡಗಳು, ಪಾರಂಪರಿಕ ಮಹತ್ವ ನೀಡುವ ಮಾಹಿತಿಯ ವಸ್ತು ಸಂಗ್ರಹಾಲಯವಿದೆ.
(11 / 12)
ಮೈಸೂರು ಅರಮನೆ ಆವರಣದಲ್ಲಿಯೇ ಇರುವ ಮಹಾರಾಜರ ಮ್ಯೂಸಿಯಂ ಇದು. ಇಲ್ಲಿ ಮೈಸೂರು ಮಹಾರಾಜರು ಬಳಸುತಿದ್ದ ವಸ್ತುಗಳು, ಅವರ ಆಡಳಿತ ನೆನಪಿನ ವಸ್ತುಗಳ ಸಂಗ್ರಹವಿದೆ. ಇದು ರಾಜವಂಶಸ್ಥರ ಖಾಸಗಿ ಮ್ಯೂಸಿಯಂ. ವಿಶೇಷವಾಗಿದೆ.
ಇತರ ಗ್ಯಾಲರಿಗಳು