Black Buck Jump Photo:ಮೈಸೂರಿನ ಮಧುಸೂದನ್ ತೆಗೆದ ಕೃಷ್ಣಮೃಗ ಹಾರುವ ಚಿತ್ರಕ್ಕೆ ರಾಷ್ಟ್ರೀಯ ಬಹುಮಾನ; ಹಾರುತ ದೂರ ದೂರ, ಮೇಲೇರುವ ಬಾರ ಬಾರಾ
- Black Buck Jump Photo: ವೇಗದಲ್ಲಿ ಕೃಷ್ಣಮೃಗವನ್ನು ಮೀರಿಸುವ ಪ್ರಾಣಿಗಳಿಲ್ಲ. ಅದರಲ್ಲೂ ಅವುಗಳು ಹಾರುವ ಶೈಲಿ ನೋಡುವುದೇ ಚಂದ. ಆ ಕ್ಷಣ ಸೆರೆ ಹಿಡಿಯುವುದು ಕಷ್ಟವೇ. ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಸೆರೆ ಹಿಡಿದ ವಿಶಿಷ್ಟ ಛಾಯಾಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

(1 / 6)
ಅದು ಕೃಷ್ಣ ಮೃಗಗಳ ಹಿಂಡು. ಮುಂದೆ ಏನನ್ನೋ ನೋಡಿದ ಒಂದು ಕೃಷ್ಣಮೃಗ ಆಗಸದೆತ್ತರಕ್ಕೆ ಹಾರಿಯೇ ಬಿಟ್ಟಿತು. ಜತೆಗಿದ್ದವರೂ ಹಾರಲು ಅಣಿಯಾದವು. ಇದು ಮಧುಸೂಧನ್ ಅವರ ಕ್ಯಾಮರಾ ಕಣ್ಣಿಗೆ ಸಿಕ್ಕ ಚಿತ್ರ
(2 / 6)
ಕೃಷ್ಣಮೃಗ ನಾಚಿಕೆ ಸ್ವಭಾವದ ಪ್ರಾಣಿಗಳು, ಕರ್ನಾಟಕದ ಹಾವೇರಿ, ತುಮಕೂರು ಜಿಲ್ಲೆಯ ಸೀಮಿತ ಪ್ರದೇಶದಲ್ಲಿವೆ. ಅವುಗಳು ಒಂದು ಕಡೆ ನಿಲ್ಲುವುದು ಕಡಿಮೆಯೇ. ಕೃಷ್ಣಮೃಗ ಕ್ಯಾಮರಾಕ್ಕೆ ಸೆರೆ ಸಿಗಲು ಗಂಟೆಗಟ್ಟಲೇ ಕಾಯಬೇಕು.
(3 / 6)
ಅವುಗಳು ಒಮ್ಮೆ ಹಾರಿದರೆ ಅದೆಷ್ಟು ದೂರಕ್ಕೆ ಜಿಗಿಯುತ್ತವೆ. ಆ ಕಾಲುಗಳು ಸ್ಪ್ರಿಂಗ್ ರೀತಿಯಲ್ಲೇ ಕೆಲಸ ಮಾಡುವುದನ್ನು ಹತ್ತಿರದಿಂದಲೇ ನೋಡಬೇಕು.
(4 / 6)
ಹೀಗೆ ಮುಂದೆ ನೋಡಿಕೊಂಡು ಗಾಳಿಯಲ್ಲಿ ಹಾರಿದ ಕೃಷ್ಣಮೃಗ ತದೇಕಚಿತ್ತದಿಂದಲೇ ಮುಂದೆ ಸಾಗಲು ಅಣಿಯಾಗಿರುವ ಆ ಕ್ಷಣ ಮೋಹಕ. ಮನಮೋಹಕ.
(5 / 6)
ಮಧುಸೂದನ ಎಸ್ ಆರ್ ಅವರ ಕೃಷ್ಣಮೃಗ ಹಾರುತ್ತಿರುವ ಛಾಯಾಚಿತ್ರಕ್ಕೆ ಕಲ್ಬುರ್ಗಿಯ ರಾಯಲ್ ಅಕಾಡೆಮಿ ಅವಾರ್ಡ್ಸ್ 2024 ರ ಚಿನ್ನದ ಪದಕ ಗಳಿಸಿದೆ ಕಲ್ಬುರ್ಗಿಯ ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಅಂಡ್ ಕಲ್ಚರ್ ವತಿಯಿಂದ 20ನೇ ವಾರ್ಷಿಕೋತ್ಸವದ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾರತದ ನಾನಾ ಭಾಗಗಳಿಂದ ಸ್ಪರ್ಧಿಗಳು ಭಾಗಿಯಾಗಿದ್ದರು.
ಇತರ ಗ್ಯಾಲರಿಗಳು