ಕನ್ನಡ ಸುದ್ದಿ  /  Photo Gallery  /  Mysuru News Bharat Rice Arrived Come Immediately To Agrahara Circle Mp Pratap Simha Tweet What Happened Next Pics Uks

Mysuru News: ಭಾರತ್ ಅಕ್ಕಿ ಬಂದಿದೆ, ಕೂಡಲೇ ಅಗ್ರಹಾರ ಸರ್ಕಲ್‌ಗೆ ಬನ್ನಿ; ಸಂಸದ ಪ್ರತಾಪ್ ಸಿಂಹ ಟ್ವೀಟ್‌, ನಂತರ ಏನಾಯ್ತು ಇಲ್ಲಿದೆ ಚಿತ್ರನೋಟ

ಭಾರತ ಸರ್ಕಾರ ಪರಿಚಯಿಸಿರುವ ಭಾರತ್ ಬ್ರ್ಯಾಂಡ್‌ನ ಭಾರತ್ ಅಕ್ಕಿ ಒಂದು ಕಿಲೋ 29 ರೂಪಾಯಿ ಇದ್ದು, ಸದ್ಯದ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಆದರೆ ಮಾರುಕಟ್ಟೆಯಲ್ಲಿ ಇದು ಮುಕ್ತವಾಗಿ ಲಭ್ಯವಾಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಟ್ವೀಟ್ ಗಮನಸೆಳೆದಿದೆ. ಅಂಥದ್ದೇನಿದೆ ಅದರಲ್ಲಿ ಈ ಚಿತ್ರನೋಟ ನೋಡಿ.

ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಶನಿವಾರ (ಮಾ.2) ಮಧ್ಯಾಹ್ನ 1.20ಕ್ಕೆ “ಭಾರತ್ ಅಕ್ಕಿ ಬಂದಿದೆ, ಕೂಡಲೇ ಅಗ್ರಹಾರ ಸರ್ಕಲ್‌ಗೆ ಬನ್ನಿ” ಎಂದು ಟ್ವೀಟ್ ಮಾಡಿದರು. ಇದಕ್ಕೆ ಬಹಳ ಜನ ಸ್ಪಂದಿಸಿದ್ದು, ಮುಂದೇನಾಯಿತು ಇಲ್ಲಿದೆ ಸಚಿತ್ರ ವರದಿ.
icon

(1 / 8)

ಸಂಸದ ಪ್ರತಾಪ್ ಸಿಂಹ ಅವರ ಮೊದಲ ಟ್ವೀಟ್ ಅನ್ನು 27 ಸಾವಿರಕ್ಕೂ ಹೆಚ್ಚು ಜನ ನೋಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೊಂದೆಡೆ, ಅಗ್ರಹಾರ ಸರ್ಕಲ್‌ನಲ್ಲಿ ಭಾರತ್ ಅಕ್ಕಿ ತಂದ ಟ್ರಕ್ ಬಳಿ ಜನದಟ್ಟಣೆ ಉಂಟಾಗಿತ್ತು.
icon

(2 / 8)

ಮೈಸೂರು ಅಗ್ರಹಾರ ಸರ್ಕಲ್‌ನಲ್ಲಿ ಭಾರತ್ ಅಕ್ಕಿ ಖರೀದಿಸುವುದಕ್ಕೆ ಜನ ಸರದಿ ನಿಂತ ದೃಶ್ಯ. ಶಾಸಕ ಶ್ರೀವತ್ಸ ಅವರು ಕೂಡ ಜತೆಗಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಅಪರಾಹ್ನ 2.38ಕ್ಕೆ ನಾಲ್ಕು ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದರು. 
icon

(3 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ಭಾರತ್ ಅಕ್ಕಿಯನ್ನು ಹೊತ್ತು ತಂದ ಟ್ರಕ್‌ ಬಳಿ ಸೇರಿದ ಜನರು. 
icon

(5 / 8)

ಭಾರತ್ ಅಕ್ಕಿಯನ್ನು ಹೊತ್ತು ತಂದ ಟ್ರಕ್‌ ಬಳಿ ಸೇರಿದ ಜನರು. 

ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಹೋಟೆಲ್ ಬಳಿ ಭಾರತ್ ಅಕ್ಕಿ ಟ್ರಕ್ ನಿಂತಾಗ ಅಲ್ಲಿ ಸೇರಿದ ಜನರು. ಸಂಸದ ಪ್ರತಾಪ್ ಸಿಂಹ ಅವರ ಟ್ವೀಟ್‌ಗಳನ್ನು ಗಮನಿಸಿದಾಗ ಅಲ್ಲಿ, ಎಕ್ಸ್ ಖಾತೆ ನೋಡುವವರಷ್ಟೇ ಬಂದು ಅಕ್ಕಿ ತಗೊಂಡು ಹೋದರು ಎಂಬ ಟೀಕೆಯೂ ಇತ್ತು. 
icon

(6 / 8)

ಮತ್ತೊಂದು ಟ್ವೀಟ್‌ನಲ್ಲಿ ಸಂಸದ ಪ್ರತಾಪ್ ಸಿಂಹ ಅವರು, "ನಮ್ಮ ಹೆಮ್ಮೆಯ ಪ್ರಧಾನಿ ನರೇಂನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿಯವರ "ಭಾರತ್ ಅಕ್ಕಿ"ಗೆ ನಿರೀಕ್ಷೆ ಮೀರಿ ಬೇಡಿಕೆ ಬಂದಿದ್ದು, ನಿಶ್ಚಿತ ಸ್ಥಳ ಮತ್ತು ಸಮಯ ಹೇಳಲು ಕಷ್ಟವಾಗುತ್ತಿದೆ. ಹಾಗಾಗಿ ಅಗ್ರಹಾರ ವೃತ್ತದಲ್ಲಿ "ಭಾರತ್ ಅಕ್ಕಿ, ಮೋದಿ ಮಳಿಗೆ" ತೆರೆಯಲು ಯೋಚಿಸುತ್ತಿದ್ದೇವೆ. ನಿಮ್ಮ ಸಲಹೆಗಳಿಗೆ ಸ್ವಾಗತ…" ಎಂದು ಹೇಳಿಕೊಂಡಿದ್ದಾರೆ. ಇದು ಉತ್ತಮ ನಿರ್ಧಾರ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
icon

(7 / 8)

ಭಾರತ್ ಅಕ್ಕಿ ಕಡಿಮೆ ದರದಲ್ಲಿ ಖರೀದಿಸಿ ಕೊಂಡೊಯ್ದು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳಿ ಎಂದೂ ಕೆಲವರು ಎಚ್ಚರಿಸುವಂತೆ ಕಾಮೆಂಟ್ ಮಾಡಿದ್ದಾರೆ. 
icon

(8 / 8)

ಭಾರತ್ ಅಕ್ಕಿ ಕಡಿಮೆ ದರದಲ್ಲಿ ಖರೀದಿಸಿ ಕೊಂಡೊಯ್ದು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳಿ ಎಂದೂ ಕೆಲವರು ಎಚ್ಚರಿಸುವಂತೆ ಕಾಮೆಂಟ್ ಮಾಡಿದ್ದಾರೆ. (@mepratap)

IPL_Entry_Point

ಇತರ ಗ್ಯಾಲರಿಗಳು