Forest News: ನಾಗರಹೊಳೆ ಅರಣ್ಯದಂಚಿನ ತೋಟಕ್ಕೆ ಬಂದು ಸೆರೆ ಸಿಕ್ಕ ಹುಲಿರಾಯ, ಹೀಗಿತ್ತು ಕಾರ್ಯಾಚರಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ನಾಗರಹೊಳೆ ಅರಣ್ಯದಂಚಿನ ತೋಟಕ್ಕೆ ಬಂದು ಸೆರೆ ಸಿಕ್ಕ ಹುಲಿರಾಯ, ಹೀಗಿತ್ತು ಕಾರ್ಯಾಚರಣೆ

Forest News: ನಾಗರಹೊಳೆ ಅರಣ್ಯದಂಚಿನ ತೋಟಕ್ಕೆ ಬಂದು ಸೆರೆ ಸಿಕ್ಕ ಹುಲಿರಾಯ, ಹೀಗಿತ್ತು ಕಾರ್ಯಾಚರಣೆ

  • ಬೇಸಿಗೆ ಬವಣೆಯಿಂದ ಕಾಡಿನಿಂದ ಹೊರ ಬಂದ ಎರಡು ಹುಲಿಗಳು( Tigers) ಎರಡು ದಿನದ ಅಂತರದಲ್ಲಿ ಮೈಸೂರು ಜಿಲ್ಲೆಯ( Mysuru) ನಾಗರಹೊಳೆ( Nagarahole Tiger Reserve) ಗಡಿಯಂಚಿನಲ್ಲಿ ಸೆರೆ ಸಿಕ್ಕಿವೆ. ಹುಲಿ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ನಿರ್ವಹಿಸಿದೆ. ಇದರ ಚಿತ್ರಾವಳಿ ಇಲ್ಲಿದೆ. 

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಮಳಲಿ ಗ್ರಾಮದ ಸುಬ್ರಹ್ಮಣ್ಯಸ್ವಾಮಿ ಎಂಬುವವರ ತೋಟದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ಹುಲಿರಾಯ ಗಡದ್ದಾಗಿ ನಿದ್ದೆಗೆ ಜಾರಿದ್ದ.
icon

(1 / 10)

ಹುಲಿ ಇರುವ ಮಾಹಿತಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಸೋಮವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆ ಶುರು ಮಾಡಿದರು.
icon

(2 / 10)

ಹುಲಿ ಮೇಲೆ ಅರವಳಿಕೆ ನೀಡಲು ಸಿಬ್ಬಂದಿ ತಯಾರಿ ಮಾಡುತ್ತಿದ್ದಂತೆ ಹುಲಿ ಘರ್ಜನೆ ಹಾಕಿತು. ಸಿಬ್ಬಂದಿ ಅಲ್ಲಿಂದ ಓಡಿದರು.
icon

(3 / 10)

ಹುಲಿ ಸೆರೆಗೆ ಅಭಿಮನ್ಯು ಸಹಿತ ಕೆಲವು ಆನೆಗಳನ್ನು ಸೆರೆ ಕಾರ್ಯಾಚರಣೆಗೆ ತರಿಸಲಾಯಿತು. 
icon

(4 / 10)

ಹುಲಿ ಸೆರೆಗೆ ಅಭಿಮನ್ಯು ಸಹಿತ ಕೆಲವು ಆನೆಗಳನ್ನು ಸೆರೆ ಕಾರ್ಯಾಚರಣೆಗೆ ತರಿಸಲಾಯಿತು. 

ನಾಗರಹೊಳೆ ರಾಷ್ಟ್ರೀ ಯ ಉದ್ಯಾನದ ಪಶು ವೈದ್ಯಾಧಿಕಾರಿ ಡಾ.ರಮೇಶ್‌ ಹಾಗೂ ಅವರ ತಂಡ ಯಶಸ್ವಿಯಾಗಿ ಹುಲಿ ಗೆ ಅರವಳಿಕೆ ನೀಡಲು ಯಶಸ್ವಿಯಾಯಿತು. 
icon

(5 / 10)

ಹುಲಿ ಪ್ರಜ್ಞೆ ತಪ್ಪ ಬಿದ್ದ ನಂತರ ಅಲ್ಲಿ ಸೇರಿದ್ದ ಸಿಬ್ಬಂದಿಗಳು ಕೂಡಲೇ ಅದನ್ನು ಹೊರ ತಂದರು.
icon

(6 / 10)

ಹುಲಿ ಪ್ರಜ್ಞೆ ತಪ್ಪ ಬಿದ್ದ ನಂತರ ಅಲ್ಲಿ ಸೇರಿದ್ದ ಸಿಬ್ಬಂದಿಗಳು ಕೂಡಲೇ ಅದನ್ನು ಹೊರ ತಂದರು.

ಹುಲಿಯನ್ನು ಬೋನಿಗೆ ಇರಿಸಲು ಅರಣ್ಯ ಸಿಬ್ಬಂದಿ ತಯಾರಿ ಮಾಡುತ್ತಿರುವಾಗಲೇ ಗ್ರಾಮಸ್ಥರು ಕೂಡ ಜಮಾಯಿಸಿದರು.
icon

(7 / 10)

ಇದರ ನಡುವೆಯೇ ಸೆರೆ ಸಿಕ್ಕ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬೋನಿಗೆ ಇರಿಸಲು ತೆಗೆದುಕೊಂಡು ಬಂದರು. 
icon

(8 / 10)

ಇಡೀ ಕಾರ್ಯಾಚರಣೆ ಉಸ್ತುವಾರಿ ಹೊತ್ತಿದ್ದ ನಾಗರಹೊಳೆಯ ಅಂತರಸಂತೆ ವಲಯ ಅರಣ್ಯಾಧಿಕಾರಿ ಭರತ್‌ ಕುಮಾರ್‌ ಹಾಗೂ ಅವರೊಂದಿಗಿದ್ದ ಸಿಬ್ಬಂದಿಯು ಸೆರೆ ಸಿಕ್ಕ ಹುಲಿಯನ್ನು ಸಾಗಿಸಲು ನೆರವಾದರು.
icon

(9 / 10)

ಕೊನೆಗೆ ಹುಲಿಯನ್ನು ಬೋನಿನಲ್ಲಿ ಇರಿಸಲಾಯಿತು. ಭಾರೀ ಗಾತ್ರದ ಹುಲಿಯ ಆರೋಗ್ಯ ನೋಡಿಕೊಂಡು ಇದನ್ನು ಮರಳಿ ಕಾಡಿಗೆ ಬಿಡುವುದೋ ಅಥವಾ ಪುನರ್‌ ವಸತಿ ಕೇಂದ್ರದಲ್ಲಿಯೇ ಇರಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ.
icon

(10 / 10)

ಇತರ ಗ್ಯಾಲರಿಗಳು