Ambedkar Row: ಇಬ್ಬರು ಬಿಜೆಪಿ ಸಂಸದರು ಗಾಯಗೊಂಡದ್ದು ಹೇಗೆ, ಸಂಸತ್‌ನ ಮಕರ ದ್ವಾರದ ಬಳಿ ಏನಾಯಿತು - ಚಿತ್ರ ನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ambedkar Row: ಇಬ್ಬರು ಬಿಜೆಪಿ ಸಂಸದರು ಗಾಯಗೊಂಡದ್ದು ಹೇಗೆ, ಸಂಸತ್‌ನ ಮಕರ ದ್ವಾರದ ಬಳಿ ಏನಾಯಿತು - ಚಿತ್ರ ನೋಟ

Ambedkar Row: ಇಬ್ಬರು ಬಿಜೆಪಿ ಸಂಸದರು ಗಾಯಗೊಂಡದ್ದು ಹೇಗೆ, ಸಂಸತ್‌ನ ಮಕರ ದ್ವಾರದ ಬಳಿ ಏನಾಯಿತು - ಚಿತ್ರ ನೋಟ

Ambedkar Row: ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ ಬಿಆರ್ ಅಂಬೇಡ್ಕರ್ ಅವರ ಕುರಿತು ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಇಂದು ಸಂಸತ್‌ನ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರು ಬಿಜೆಪಿ ಸಂಸದರು ಗಾಯಗೊಂಡು ಆಸ್ಪತ್ರೆ ದಾಖಲಾದರು. ಏನಾಯಿತು ಅಲ್ಲಿ- ಚಿತ್ರನೋಟ

Ambedkar Row: ಸಂಸತ್ ಭವನದ ಆವರಣದಲ್ಲಿ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸುತ್ತಿದ್ದಾಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ ಕಾರಣ ಬಿಜೆಪಿ ಸಂಸದರೊಬ್ಬರು ನನ್ನ ಮೇಲೆ ಬಿದ್ದರು. ಆ ರಭಸಕ್ಕೆ ನಾನು ಬಿದ್ದು ಗಾಯಗೊಂಡೆ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದರು. ಅವರನ್ನು ಬಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಸಂದರ್ಭ.  
icon

(1 / 9)

Ambedkar Row: ಸಂಸತ್ ಭವನದ ಆವರಣದಲ್ಲಿ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸುತ್ತಿದ್ದಾಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಳ್ಳಿದ ಕಾರಣ ಬಿಜೆಪಿ ಸಂಸದರೊಬ್ಬರು ನನ್ನ ಮೇಲೆ ಬಿದ್ದರು. ಆ ರಭಸಕ್ಕೆ ನಾನು ಬಿದ್ದು ಗಾಯಗೊಂಡೆ ಎಂದು ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಆರೋಪಿಸಿದ್ದರು. ಅವರನ್ನು ಬಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ ಸಂದರ್ಭ.  (PTI)

ಸಂಸತ್ ಒಳಗೆ ಪ್ರವೇಶಿಸಲು ಹೋಗುತ್ತಿದ್ದಾಗ ಬಿಜೆಪಿ ಸಂಸದರು ನನ್ನನ್ನು ತಡೆದರು. ಆಗ ಈ ಘಟನೆ ನಡೆದಿದೆ. ಸಂಸತ್ ಪ್ರವೇಶಿಸುವುದಕ್ಕೆ ನನಗೂ ಹಕ್ಕಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ಹೇಳಿದರು.  
icon

(2 / 9)

ಸಂಸತ್ ಒಳಗೆ ಪ್ರವೇಶಿಸಲು ಹೋಗುತ್ತಿದ್ದಾಗ ಬಿಜೆಪಿ ಸಂಸದರು ನನ್ನನ್ನು ತಡೆದರು. ಆಗ ಈ ಘಟನೆ ನಡೆದಿದೆ. ಸಂಸತ್ ಪ್ರವೇಶಿಸುವುದಕ್ಕೆ ನನಗೂ ಹಕ್ಕಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ಹೇಳಿದರು.  (PTI)

ಸಂಸತ್ ಭವನದ ಮಕರ ದ್ವಾರದ ಸಮೀಪ ಬಿದ್ದು ಗಾಯಗೊಂಡ ಬಿಜೆಪಿ ಸಂಸದ ಮುಕೇಶ್ ರಜಪೂತ್‌ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು. ಅವರನ್ನು ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಭೇಟಿಯಾದರು. 
icon

(3 / 9)

ಸಂಸತ್ ಭವನದ ಮಕರ ದ್ವಾರದ ಸಮೀಪ ಬಿದ್ದು ಗಾಯಗೊಂಡ ಬಿಜೆಪಿ ಸಂಸದ ಮುಕೇಶ್ ರಜಪೂತ್‌ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು. ಅವರನ್ನು ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ್ ಜೋಶಿ ಭೇಟಿಯಾದರು. (PTI)

ಬಿಜೆಪಿ ಸದಸ್ಯರು ಮತ್ತು ಇಂಡಿಯಾ ಬ್ಲಾಕ್ ಸದಸ್ಯರು ಸಂಸತ್‌ನ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸುವಾಗ ಉಂಟಾದ ಹೈಡ್ರಾಮಾದ ನಡುವೆ ಬಿದ್ದ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಕೂಡ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ಮಾಡಿದರು. 
icon

(4 / 9)

ಬಿಜೆಪಿ ಸದಸ್ಯರು ಮತ್ತು ಇಂಡಿಯಾ ಬ್ಲಾಕ್ ಸದಸ್ಯರು ಸಂಸತ್‌ನ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸುವಾಗ ಉಂಟಾದ ಹೈಡ್ರಾಮಾದ ನಡುವೆ ಬಿದ್ದ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಕೂಡ ಆರ್‌ಎಂಎಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ಮಾಡಿದರು. (PTI)

ರಾಜ್ಯಸಭೆಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸದಸ್ಯರು ಸಂಸತ್‌ನ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವವಹಿಸಿದ್ದರು. 
icon

(5 / 9)

ರಾಜ್ಯಸಭೆಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಕೇವಲವಾಗಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಸದಸ್ಯರು ಸಂಸತ್‌ನ ಮಕರ ದ್ವಾರದ ಸಮೀಪ ಪ್ರತಿಭಟನೆ ನಡೆಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವವಹಿಸಿದ್ದರು. (PTI)

ಡಾ ಬಿಆರ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗೌರವಿಸುತ್ತೇವೆ ಎಂಬುದನ್ನು ಬಿಂಬಿಸಿಕೊಳ್ಳಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರೂ ನೀಲಿ ಬಣ್ಣದ ಉಡುಪು ಧರಿಸಿ ಗಮನಸೆಳೆದರು.
icon

(6 / 9)

ಡಾ ಬಿಆರ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗೌರವಿಸುತ್ತೇವೆ ಎಂಬುದನ್ನು ಬಿಂಬಿಸಿಕೊಳ್ಳಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಬ್ಬರೂ ನೀಲಿ ಬಣ್ಣದ ಉಡುಪು ಧರಿಸಿ ಗಮನಸೆಳೆದರು.(PTI)

ಕಾಂಗ್ರೆಸ್ ಸಂಸದೆ ಜೆಬಿ ಮಾಥರ್ ಸಂಸತ್ ಭವನದ ಮಕರ ದ್ವಾರದ ಮೇಲೇರಿ ಪ್ರತಿಭಟನಾ ಘೋಷಣೆ ಕೂಗಿದರು. ಪಕ್ಕದಲ್ಲಿರುವುದು ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು. ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಸದಸ್ಯರು ಬಿಜೆಪಿ ಸದಸ್ಯರನ್ನು ದಾಟಿ ಮಕರ ದ್ವಾರದ ಮೇಲೇರಿ ಪ್ರತಿಭಟನೆ ನಡೆಸಲು ಮುಂದಾದಾಗ ತಳ್ಳಾಟ ನಡೆದಿದೆ. ಅಲ್ಲಿ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಕೇಶ್‌ ರಜಪೂತ್ ಗಾಯಗೊಂಡರು.
icon

(7 / 9)

ಕಾಂಗ್ರೆಸ್ ಸಂಸದೆ ಜೆಬಿ ಮಾಥರ್ ಸಂಸತ್ ಭವನದ ಮಕರ ದ್ವಾರದ ಮೇಲೇರಿ ಪ್ರತಿಭಟನಾ ಘೋಷಣೆ ಕೂಗಿದರು. ಪಕ್ಕದಲ್ಲಿರುವುದು ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು. ಕಾಂಗ್ರೆಸ್ ಮತ್ತು ಇಂಡಿಯಾ ಬ್ಲಾಕ್ ಸದಸ್ಯರು ಬಿಜೆಪಿ ಸದಸ್ಯರನ್ನು ದಾಟಿ ಮಕರ ದ್ವಾರದ ಮೇಲೇರಿ ಪ್ರತಿಭಟನೆ ನಡೆಸಲು ಮುಂದಾದಾಗ ತಳ್ಳಾಟ ನಡೆದಿದೆ. ಅಲ್ಲಿ ಪ್ರತಾಪ್ ಚಂದ್ರ ಸಾರಂಗಿ ಮತ್ತು ಮುಕೇಶ್‌ ರಜಪೂತ್ ಗಾಯಗೊಂಡರು.(PTI)

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಎನ್‌ಡಿಎ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಡಾ ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅನ್ಯಾಯವನ್ನು ಖಂಡಿಸಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.
icon

(8 / 9)

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಎನ್‌ಡಿಎ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಡಾ ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅನ್ಯಾಯವನ್ನು ಖಂಡಿಸಿ, ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿದರು.(PTI)

ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ಕಾಂಗ್ರೆಸ್ ನಾಯಕರು ಡಾ ಬಿ ಆರ್ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸುತ್ತ, ಜವಾಹರ ಲಾಲ್ ನೆಹರೂ ಆಡಳಿತವನ್ನು ಟೀಕಿಸುವ ಪೋಸ್ಟರ್ ಹಿಡಿದು ಗಮನಸೆಳೆದರು.
icon

(9 / 9)

ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ಕಾಂಗ್ರೆಸ್ ನಾಯಕರು ಡಾ ಬಿ ಆರ್ ಅಂಬೇಡ್ಕರ್ ಅವರನ್ನು ನಡೆಸಿಕೊಂಡ ರೀತಿಯನ್ನು ಖಂಡಿಸುತ್ತ, ಜವಾಹರ ಲಾಲ್ ನೆಹರೂ ಆಡಳಿತವನ್ನು ಟೀಕಿಸುವ ಪೋಸ್ಟರ್ ಹಿಡಿದು ಗಮನಸೆಳೆದರು.


ಇತರ ಗ್ಯಾಲರಿಗಳು