ನೀಲಿಸೀರೆಯಲ್ಲಿ ಮನಮೋಹಕ ಲುಕ್‌ ನೀಡಿದ ಕೃತಿ ಶೆಟ್ಟಿ; ಈ ಮಂಗಳೂರು ಸುಂದರಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಅನ್ನೋದೇ ಅಚ್ಚರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೀಲಿಸೀರೆಯಲ್ಲಿ ಮನಮೋಹಕ ಲುಕ್‌ ನೀಡಿದ ಕೃತಿ ಶೆಟ್ಟಿ; ಈ ಮಂಗಳೂರು ಸುಂದರಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಅನ್ನೋದೇ ಅಚ್ಚರಿ

ನೀಲಿಸೀರೆಯಲ್ಲಿ ಮನಮೋಹಕ ಲುಕ್‌ ನೀಡಿದ ಕೃತಿ ಶೆಟ್ಟಿ; ಈ ಮಂಗಳೂರು ಸುಂದರಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಅನ್ನೋದೇ ಅಚ್ಚರಿ

Krithi Shetty: ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿರುವ ಕೃತಿ ಶೆಟ್ಟಿ ನೀಲಿ ಬಣ್ಣದ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಫಿಲ್ಮ್‌ಫೇರ್‌ ಅವಾರ್ಡ್‌ ಮತ್ತು ಸೈಮಾ ಅವಾರ್ಡ್‌ ಪಡೆದಿರುವ ಮಂಗಳೂರು ಮೂಲದ ಕೃತಿ ಶೆಟ್ಟಿ ಇಲ್ಲಿಯವರೆಗೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ

ಇತ್ತೀಚೆಗೆ, ಕೃತಿ ಶೆಟ್ಟಿ ನೀಲಿ ಸೀರೆ ಮತ್ತು ಸ್ಲೀವ್ಲೆಸ್ ರವಿಕೆಯಲ್ಲಿ ತನ್ನ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 
icon

(1 / 7)

2003ರ ಸೆಪ್ಟೆಂಬರ್‌ 21ರಂದು ಜನಿಸಿದ ಕೃತಿ ಶೆಟ್ಟಿ ಮಂಗಳೂರಿನವರು. ಬಂಟ್‌ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಮುಂಬೈನಲ್ಲಿಯೇ ಬೆಳೆದರು. ಇವರ ತಂದೆ ಬಿಸ್ನೆಸ್‌ಮ್ಯಾನ್‌. ತಾಯಿ ಫ್ಯಾಷನ್‌ ಡಿಸೈನರ್‌. ಕೃತಿ ಶೆಟ್ಟಿ ಶಿಕ್ಷಣ ಪಡೆಯುತ್ತಿರುವಾಗಲೇ ಸಿನಿಮಾಗಳಲ್ಲಿ ನಟಿಸಿದ್ದರು. 
icon

(2 / 7)

ಕೃತಿ ಶೆಟ್ಟಿ ಹಿಂದಿಯ ಸೂಪರ್‌ 30 ಮೂಲಕ ಚಿತ್ರರಂಗ ಪ್ರವೇಶಿಸಿದರು. ತೆಲುಗಿನ ಉಪ್ಪೇನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಪಡೆಯಿತು. ಇದಾದ ಬಳಿಕ ನಾನಿ ಜತೆಗ ಶ್ಯಾಮ್‌ ಸಿಂಗ್‌ ರಾಯ್‌ ಚಿತ್ರದಲ್ಲಿ ನಟಿಸಿದರು. ಇದಾದ ಬಳಿಕ ನಾಗಚೈತನ್ಯರ ಜತೆಗೆ ಬಂಗಾರ್‌ರಾಜು ಸಿನಿಮಾದಲ್ಲಿ ನಟಿಸಿದರು. 
icon

(3 / 7)

ಇದಾದ ಬಳಿಕ ತಮಿಳಿನಲ್ಲಿ ದಿ ವಾರಿಯರ್‌ ಸಿನಿಮಾದಲ್ಲಿ ನಟಿಸಿದರು. ಮಾಚೆರ್ಲಾ ನಿಯೊಜಕವರಮ್‌, ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಮುಂತಾದ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
icon

(4 / 7)

ತೆಲುಗು ಮತ್ತು ತಮಿಳಿನಲ್ಲಿ ಕಳೆದ ವರ್ಷ ಇವರು ನಟಿಸಿರುವ ಕಸ್ಟಡಿ ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಈ ವರ್ಷ ಮನಮೇ, ಆರ್ಮ್‌ ಸಿನಿಮಾ ಬಿಡುಗಡೆಯಾಗಿದೆ. ಆರ್ಮ್‌ ಮಲಯಾಳಂ ಸಿನಿಮಾ. 
icon

(5 / 7)

ವಾ ವಾಥಿಯಾರ್‌, ಲವ್‌ ಇನ್ಸೂರೆನ್ಸ್‌ ಕಂಪನಿ, ಜೆನ್ನಿ ಇವರ ಮುಂಬರುವ ತಮಿಳು ಸಿನಿಮಾಗಳು. ಹೀಗೆ ಇವರು ತನ್ನ ಸಿನಿ ಕರಿಯರ್‌ನಲ್ಲಿ ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ನಟಿಸಿದ್ದಾರೆ. ಮಂಗಳೂರು ಮೂಲದವರಾಗಿದ್ದರೂ ಕನ್ನಡ ಸಿನಿಮಾದಲ್ಲಿ ಇವರಿಗೆ ಇನ್ನೂ ಅವಕಾಶ ದೊರಕಿಲ್ಲ. 
icon

(6 / 7)

ಉಪ್ಪೇನಾ ಸಿನಿಮಾದ ನಟನೆಗಾಗಿ "ಬೆಸ್ಟ್‌ ಫಿಮೇಲ್‌ ಡಿಬಾಟ್‌-ಸೌತ್‌" "ಬೆಸ್ಟ್‌ ಆಕ್ಟ್ರೇಸ್‌- ತೆಲುಗು" ಎಂಬ ಎರಡು ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿದೆ. ಇದರೊಂದಿಗೆ ಬೆಸ್ಟ್‌ ಫಿಮೇಲ್‌ ಡಿಬಟ್‌ ತೆಲುಗು ಸೌತ್‌ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ ದೊರಕಿದೆ. 
icon

(7 / 7)

ಇತರ ಗ್ಯಾಲರಿಗಳು