ಕೇಳದೆಯೇ ನನ್ನ ಮಕ್ಕಳ ಫೋಟೋ ತೆಗೆಯಲು ನೀವ್ಯಾರು; ಆಸ್ಟ್ರೇಲಿಯಾ ಪತ್ರಕರ್ತರ ಮೇಲೆ ರೇಗಾಡಿದ ವಿರಾಟ್ ಕೊಹ್ಲಿ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಕೇಳದೆಯೇ ನನ್ನ ಮಕ್ಕಳ ಫೋಟೋ ತೆಗೆಯಲು ನೀವ್ಯಾರು; ಆಸ್ಟ್ರೇಲಿಯಾ ಪತ್ರಕರ್ತರ ಮೇಲೆ ರೇಗಾಡಿದ ವಿರಾಟ್ ಕೊಹ್ಲಿ, Video

ಕೇಳದೆಯೇ ನನ್ನ ಮಕ್ಕಳ ಫೋಟೋ ತೆಗೆಯಲು ನೀವ್ಯಾರು; ಆಸ್ಟ್ರೇಲಿಯಾ ಪತ್ರಕರ್ತರ ಮೇಲೆ ರೇಗಾಡಿದ ವಿರಾಟ್ ಕೊಹ್ಲಿ, VIDEO

Virat Kohli: ಬಾಕ್ಸಿಂಗ್ ಡೇ ಟೆಸ್ಟ್​ಗೂ ಮುನ್ನ ವಿರಾಟ್ ಕೊಹ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾದ ಟಿವಿ ಪತ್ರಕರ್ತರ ಮೇಲೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ.

ಮೆಲ್ಬೋರ್ನ್‌ನಲ್ಲಿ ಖಾಸಗಿತನಕ್ಕೆ ಉಲ್ಲಂಘನೆ; ಆಸ್ಟ್ರೇಲಿಯಾ ಪತ್ರಕರ್ತರ ಮೇಲೆ ರೇಗಾಡಿದ ವಿರಾಟ್ ಕೊಹ್ಲಿ
ಮೆಲ್ಬೋರ್ನ್‌ನಲ್ಲಿ ಖಾಸಗಿತನಕ್ಕೆ ಉಲ್ಲಂಘನೆ; ಆಸ್ಟ್ರೇಲಿಯಾ ಪತ್ರಕರ್ತರ ಮೇಲೆ ರೇಗಾಡಿದ ವಿರಾಟ್ ಕೊಹ್ಲಿ

ಬಾರ್ಡರ್-ಗವಾಸ್ಕರ್ ಟ್ರೋಫಿ 2025ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯಕ್ಕೂ ಮುನ್ನ ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ತಾಳ್ಮೆ ಕಳೆದುಕೊಂಡು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾದ ಟಿವಿ ಪತ್ರಕರ್ತರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ. ದಿ ವೆಸ್ಟ್ ಆಸ್ಟ್ರೇಲಿಯನ್‌ ವರದಿಯ ಪ್ರಕಾರ, ಕೊಹ್ಲಿ ಅವರು ಮೆಲ್ಬೋರ್ನ್‌​​ ವಿಮಾನ ನಿಲ್ದಾಣದಿಂದ ಹೊರ ಬರುವಾಗ ಪತ್ರಕರ್ತರೊಂದಿಗೆ ಮೇಲೆ ಜಗಳ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ವಿಡಿಯೋ ವೈರಲ್ ಆಗಿದೆ.

ಮೆಲ್ಬೋರ್ನ್‌ ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಕಂಡೊಡನೆ ಪತ್ರಕರ್ತರು ಅವರನ್ನು ಚಿತ್ರೀಕರಿಸಲು ಮುಗಿಬಿದ್ದರು. ಆದರೆ ಕ್ಯಾಮೆರಾಮನ್​ಗಳು ಕೊಹ್ಲಿ ಮಕ್ಕಳಾದ ವಮಿಕಾ-ಅಕಾಯ್ ಮೇಲೆ ಕೇಂದ್ರೀಕರಿಸಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಕ್ಯಾಮೆರಾಗಳು ಮುಗಿಬಿದ್ದ ಕಾರಣ ಕೋಪಗೊಂಡ ವಿರಾಟ್, ಟಿವಿ ಪತ್ರಕರ್ತರೊಂದಿಗೆ ಜಗಳಕ್ಕಿಳಿದಿದ್ದಾರೆ. ನನ್ನ ಮಕ್ಕಳಿಗೆ ಸ್ವಲ್ಪ ಗೌಪ್ಯತೆ ಬೇಕು. ನನ್ನನ್ನು ಕೇಳದೆ ನೀವು ಚಿತ್ರೀಕರಣ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ. ಆಸ್ಟ್ರೇಲಿಯಾದ ಚಾನೆಲ್ ಸೆವೆನ್ (7) ರಿಪೋರ್ಟರ್ ಮೇಲೆ ರೇಗಾಡಿದ್ದಾರೆ ಎಂದು ತಿಳಿದುಬಂದಿದೆ. 

ತಾಳ್ಮೆ ಕಳೆದುಕೊಂಡು ಮಾಧ್ಯಮದವರನ್ನು ತರಾಟೆ ತೆಗೆದುಕೊಂಡ ನಂತರ ಕೊಹ್ಲಿ ಅಲ್ಲಿಂದ ಹೊರಟರು ಎಂದು ವರದಿಯಾಗಿದೆ. ತಮ್ಮ ಮಕ್ಕಳ ಮುಖಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಂತೆ ಈ ಹಿಂದೆ ಕೊಹ್ಲಿ-ಅನುಷ್ಕಾ ಮಾಧ್ಯಮದವರಿಗೆ ಮನವಿ ಮಾಡಿದ್ದರು. ಆದರೆ ನಿಖರ ಕಾರಣ ಬಹಿರಂಗವಾಗಿಲ್ಲ.

ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಕಳಪೆ ಫಾರ್ಮ್​​ನಲ್ಲಿದ್ದಾರೆ. ಪರ್ತ್​​ ಟೆಸ್ಟ್​​​ನಲ್ಲಿ ಶತಕ ಸಿಡಿಸಿ ಭರವಸೆ ಮೂಡಿಸಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಮತ್ತೆ ನಿರಾಸೆ ಮೂಡಿಸಿದರು. ಔಟ್​ ಸೈಟ್​ ಆಫ್ ಸ್ಟಂಪ್ ಎಸೆತಗಳಿಗೆ ಪದೆಪದೇ ಬಲಿಯಾಗುತ್ತಿದ್ದಾರೆ. ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ನಿರಂತರವಾಗಿ ವಿಕೆಟ್ ಕೀಪರ್ ಅಥವಾ ಸ್ಲಿಪ್‌ನಲ್ಲಿ ಕ್ಯಾಚ್​​ ನೀಡುತ್ತಿದ್ದಾರೆ. ಹೀಗಾಗಿ, ಅವರ ಕಳಪೆ ಫಾರ್ಮ್ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಸರಣಿ ಗೆಲ್ಲಲು ವಿರಾಟ್ ಲಯಕ್ಕೆ ಮರಳುವುದು ಅಗತ್ಯ ಇದೆ.

ಕೊಹ್ಲಿ ಜೊತೆಗೆ ಉಳಿದವರು ಲಯಕ್ಕೆ ಮರಳಬೇಕು

ಕೊಹ್ಲಿ ಮಾತ್ರವಲ್ಲ, ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಲಯಕ್ಕೆ ಮರಳಬೇಕಿದೆ. ಸದ್ಯದ ಮಟ್ಟಿಗೆ ಕೆಎಲ್ ರಾಹುಲ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ಆದರೆ, ಇನ್ನೊಂದು ತುದಿಯಿಂದ ಬೆಂಬಲದ ಕೊರತೆಯ ಕಾರಣಕ್ಕೆ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಗುತ್ತಿದೆ. ಸರಣಿ ಗೆಲ್ಲಲು ಇರುವ ಯಾವುದೇ ಅವಕಾಶವನ್ನು ಕಳೆದುಕೊಳ್ಳಬಾರದು. ಪ್ರಮುಖ ಆಟಗಾರರು ರನ್ ಗಳಿಸಬೇಕಿದೆ. ಏಕೆಂದರೆ ಈ ಸರಣಿ ಗೆದ್ದರೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೆ ಅರ್ಹತೆ ಪಡೆದುಕೊಳ್ಳಲು ಅವಕಾಶ ಇದೆ.

ಭಾರತಕ್ಕೆ ಗೆಲುವು ಅನಿವಾರ್ಯ

ಡಬ್ಲ್ಯುಟಿಸಿ ಫೈನಲ್​ಗೇರಲು ಭಾರತ ತಂಡ ಮೆಲ್ಬೋರ್ನ್‌ ಮತ್ತು ಸಿಡ್ನಿ ಟೆಸ್ಟ್​​​ನಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ. ರೋಹಿತ್ ಪಡೆ 3-1 ರಲ್ಲಿ ಸರಣಿ ಗೆದ್ದರೆ, ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. 2-2 ರಲ್ಲಿ ಸರಣಿ ಡ್ರಾಗೊಂಡರೂ ಫೈನಲ್​ಗೇರಲು ಅವಕಾಶ ಇದೆ. ಆದರೆ, ಆಸೀಸ್​, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸೋಲು ಕಾಣಬೇಕಿದೆ. ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಲು ಭಾರತಕ್ಕೆ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಸಹಾಯವೂ ಅಗತ್ಯವಿದೆ. 4ನೇ ಟೆಸ್ಟ್ ಡಿಸೆಂಬರ್ 26ರಂದು ಮೆಲ್ಬೋರ್ನ್ ಮೈದಾನದಲ್ಲಿ ನಡೆಯಲಿದೆ.

Whats_app_banner