ನವರಾತ್ರಿಯಿಂದ ವಿಜಯದಶಮಿವರೆಗೆ, 10 ದಿನಗಳ ಕಾಲ ದಸರಾ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನವರಾತ್ರಿಯಿಂದ ವಿಜಯದಶಮಿವರೆಗೆ, 10 ದಿನಗಳ ಕಾಲ ದಸರಾ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳಿವು

ನವರಾತ್ರಿಯಿಂದ ವಿಜಯದಶಮಿವರೆಗೆ, 10 ದಿನಗಳ ಕಾಲ ದಸರಾ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳಿವು

ನವರಾತ್ರಿ ಹಾಗೂ ದಸರಾ ಸಂಭ್ರಮ ನಾಡಿನಾದ್ಯಂತ ಕಳೆಗಟ್ಟಿದೆ. ನವರಾತ್ರಿಯ 9 ದಿನಗಳು ಹಾಗೂ ವಿಜಯದಶಮಿ ಸೇರಿ ಒಟ್ಟು 10 ದಿನಗಳ ಕಾಲ ವಿಭಿನ್ನ ರಂಗೋಲಿಯ ಮೂಲಕ ಮನೆ ಅಲಂಕರಿಸುವ ಯೋಚನೆ ಇದ್ದರೆ ಈ ರಂಗೋಲಿ ಚಿತ್ತಾರಗಳು ಗಮನಿಸಿ. ಈ ರಂಗೋಲಿ ಡಿಸೈನ್‌ಗಳು ನಿಮಗೂ ಇಷ್ಟವಾಗಬಹುದು ನೋಡಿ.

2024 ನವರಾತ್ರಿಯ ಹಬ್ಬ ಕ್ಷಣಗಣನೆ  ಆರಂಭವಾಗಿದೆ. ನವರಾತ್ರಿ ದುರ್ಗಾಮಾತೆಯನ್ನು ಪೂಜಿಸುವ ಹಬ್ಬ. ಈ ಸಮಯದಲ್ಲಿ ನೀವು ದುರ್ಗಾಮಾತೆಯನ್ನು ಮೆಚ್ಚಿಸಲು ಬಯಸಿದರೆ ರಂಗೋಲಿಗಳ ಮೂಲಕ ಮನೆಯನ್ನು ಅಲಂಕರಿಸಬಹುದು. ನವರಾತ್ರಿಯಿಂದ ವಿಜಯದಶಮಿವರೆಗೆ 10 ದಿನಗಳ ಕಾಲ ಭಿನ್ನವಾದ ರಂಗೋಲಿ ಹಾಕಲು ಬಯಸಿದರೆ ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ. 
icon

(1 / 11)

2024 ನವರಾತ್ರಿಯ ಹಬ್ಬ ಕ್ಷಣಗಣನೆ  ಆರಂಭವಾಗಿದೆ. ನವರಾತ್ರಿ ದುರ್ಗಾಮಾತೆಯನ್ನು ಪೂಜಿಸುವ ಹಬ್ಬ. ಈ ಸಮಯದಲ್ಲಿ ನೀವು ದುರ್ಗಾಮಾತೆಯನ್ನು ಮೆಚ್ಚಿಸಲು ಬಯಸಿದರೆ ರಂಗೋಲಿಗಳ ಮೂಲಕ ಮನೆಯನ್ನು ಅಲಂಕರಿಸಬಹುದು. ನವರಾತ್ರಿಯಿಂದ ವಿಜಯದಶಮಿವರೆಗೆ 10 ದಿನಗಳ ಕಾಲ ಭಿನ್ನವಾದ ರಂಗೋಲಿ ಹಾಕಲು ಬಯಸಿದರೆ ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ. 

ಯಾವುದೇ ಹಬ್ಬ–ಹರಿದಿನಗಳಿರಲಿ ರಂಗೋಲಿ ಬಿಡಿಸುವ ಮೂಲಕ ಮನೆಯನ್ನು ಅಲಂಕರಿಸುವುದು ವಾಡಿಕೆ. ಅದರಲ್ಲೂ ನವರಾತ್ರಿ ಹಬ್ಬದ ಸಮಯದಲ್ಲಿ ದೇವಿಯ ಮುಂದೆ ವಿವಿಧ ಚಿತ್ತಾರದ ರಂಗೋಲಿ ಮೂಡಿಸುತ್ತಾರೆ. ಈ ಬಾರಿ ನೀವು ರಂಗೋಲಿ ಹಾಕಲು ಬಯಸಿದರೆ ಈ ವಿನ್ಯಾಸಗಳನ್ನೊಮ್ಮೆ ನೋಡಿ. 
icon

(2 / 11)

ಯಾವುದೇ ಹಬ್ಬ–ಹರಿದಿನಗಳಿರಲಿ ರಂಗೋಲಿ ಬಿಡಿಸುವ ಮೂಲಕ ಮನೆಯನ್ನು ಅಲಂಕರಿಸುವುದು ವಾಡಿಕೆ. ಅದರಲ್ಲೂ ನವರಾತ್ರಿ ಹಬ್ಬದ ಸಮಯದಲ್ಲಿ ದೇವಿಯ ಮುಂದೆ ವಿವಿಧ ಚಿತ್ತಾರದ ರಂಗೋಲಿ ಮೂಡಿಸುತ್ತಾರೆ. ಈ ಬಾರಿ ನೀವು ರಂಗೋಲಿ ಹಾಕಲು ಬಯಸಿದರೆ ಈ ವಿನ್ಯಾಸಗಳನ್ನೊಮ್ಮೆ ನೋಡಿ. (triveni.art.gallery instagram.com)

ನೀವು ರಂಗೋಲಿ ಬಿಡಿಸಲು ಹೊಸಬರಾಗಿದ್ದರೆ ಇಂತಹ ಸರಳ ವಿನ್ಯಾಸಗಳ ಮೂಲಕ ಆರಂಭಿಸಬಹುದು. ಇದನ್ನು ತಟ್ಟೆ, ಚಮಚ ಬಳಸಿ ವಿನ್ಯಾಸ ಮಾಡಬಹುದು. 
icon

(3 / 11)

ನೀವು ರಂಗೋಲಿ ಬಿಡಿಸಲು ಹೊಸಬರಾಗಿದ್ದರೆ ಇಂತಹ ಸರಳ ವಿನ್ಯಾಸಗಳ ಮೂಲಕ ಆರಂಭಿಸಬಹುದು. ಇದನ್ನು ತಟ್ಟೆ, ಚಮಚ ಬಳಸಿ ವಿನ್ಯಾಸ ಮಾಡಬಹುದು. (triveni.art.gallery instagram.com)

ರಂಗೋಲಿಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಈ ರಂಗೋಲಿ ವಿನ್ಯಾಸವನ್ನು ನವರಾತ್ರಿಯಲ್ಲಿ ಒಂದು ದಿನ ಮಾಡಬಹುದು. ಅಕ್ಷತೆ, ವೀಳ್ಯದೆಲೆ, ಕಳಶ ಇಂತಹ ಡಿಸೈನ್ ಮಾಡುವುದು ಸುಲಭ 
icon

(4 / 11)

ರಂಗೋಲಿಯನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗಿದೆ. ಈ ರಂಗೋಲಿ ವಿನ್ಯಾಸವನ್ನು ನವರಾತ್ರಿಯಲ್ಲಿ ಒಂದು ದಿನ ಮಾಡಬಹುದು. ಅಕ್ಷತೆ, ವೀಳ್ಯದೆಲೆ, ಕಳಶ ಇಂತಹ ಡಿಸೈನ್ ಮಾಡುವುದು ಸುಲಭ (mixingimages.com pinterest)

ದುರ್ಗಾ ಮಾತೆಯ ರೂಪ ಬಿಂಬಿಸುವ ಈ ರಂಗೋಲಿ ವಿನ್ಯಾಸಗಳನ್ನು ಮಾಡಲು ಸುಲಭ ಮತ್ತು ನೋಡಲು ತುಂಬಾ ಸುಂದರವಾಗಿರುತ್ತದೆ. ನೀವು ಈ ರಂಗೋಲಿ ವಿನ್ಯಾಸವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಬಹಳ ಸುಲಭವಾಗಿ ಮಾಡಬಹುದು.
icon

(5 / 11)

ದುರ್ಗಾ ಮಾತೆಯ ರೂಪ ಬಿಂಬಿಸುವ ಈ ರಂಗೋಲಿ ವಿನ್ಯಾಸಗಳನ್ನು ಮಾಡಲು ಸುಲಭ ಮತ್ತು ನೋಡಲು ತುಂಬಾ ಸುಂದರವಾಗಿರುತ್ತದೆ. ನೀವು ಈ ರಂಗೋಲಿ ವಿನ್ಯಾಸವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಬಹಳ ಸುಲಭವಾಗಿ ಮಾಡಬಹುದು.(Anamika's Rangavalli pinterest)

ವಿವಿಧ ಬಣ್ಣದ ರಂಗೋಲಿ ಪುಡಿಗಳಿಂದ ಚುಕ್ಕಿ ಇರಿಸುವ ಮೂಲಕ ಸುಂದರ ರಂಗೋಲಿ ಬಿಡಿಸಬಹುದು. ಅದರಲ್ಲಿ ದುರ್ಗಾ ಮಾತೆಯ ಚಿತ್ರ ರಚಿಸಬಹುದು 
icon

(6 / 11)

ವಿವಿಧ ಬಣ್ಣದ ರಂಗೋಲಿ ಪುಡಿಗಳಿಂದ ಚುಕ್ಕಿ ಇರಿಸುವ ಮೂಲಕ ಸುಂದರ ರಂಗೋಲಿ ಬಿಡಿಸಬಹುದು. ಅದರಲ್ಲಿ ದುರ್ಗಾ ಮಾತೆಯ ಚಿತ್ರ ರಚಿಸಬಹುದು (youtube.com Poonam Hedau)

ನವರಾತ್ರಿಯ ಮೊದಲ ದಿನ ನಿಮ್ಮ ಮನೆಯ ಅಂಗಳದಲ್ಲಿ ಈ ರಂಗೋಲಿ ವಿನ್ಯಾಸವನ್ನು ಮಾಡಬಹುದು. ಇದರಲ್ಲಿ ಪೂಜೆಗೆ ಇಟ್ಟಿರುವ ಕಲಶ, ತೆಂಗಿನಕಾಯಿ ತಯಾರಿಸಲಾಗಿದೆ. ಇದು ಈ ಪವಿತ್ರ ಹಬ್ಬದ ಆರಂಭವನ್ನು ಸೂಚಿಸುತ್ತದೆ.
icon

(7 / 11)

ನವರಾತ್ರಿಯ ಮೊದಲ ದಿನ ನಿಮ್ಮ ಮನೆಯ ಅಂಗಳದಲ್ಲಿ ಈ ರಂಗೋಲಿ ವಿನ್ಯಾಸವನ್ನು ಮಾಡಬಹುದು. ಇದರಲ್ಲಿ ಪೂಜೆಗೆ ಇಟ್ಟಿರುವ ಕಲಶ, ತೆಂಗಿನಕಾಯಿ ತಯಾರಿಸಲಾಗಿದೆ. ಇದು ಈ ಪವಿತ್ರ ಹಬ್ಬದ ಆರಂಭವನ್ನು ಸೂಚಿಸುತ್ತದೆ.(instagram rangolibysakshi)

ಈ ರಂಗೋಲಿಯಲ್ಲಿ ನೀವು ದುರ್ಗೆಮಾತೆಯ ವಿವಿಧ ರೂಪಗಳನ್ನು ನೋಡಬಹುದು. ತಾಯಿಯನ್ನು ಸ್ವಾಗತಿಸಲು ಮನೆಯ ಅಂಗಳದ ಮಧ್ಯದಲ್ಲಿ ನೀವು ಈ ವಿನ್ಯಾಸಗಳಲ್ಲಿ ಯಾವುದಾದರೂ ಒಂದು ವಿನ್ಯಾಸವನ್ನು ಮಾಡಬಹುದು. ದಿನಕ್ಕೊಂದು ದುರ್ಗಮಾತೆಯ ವಿನ್ಯಾಸ ರಚಿಸಲು ಈ ಐಡಿಯಾ ನಿಮಗೆ ಹೆಲ್ಪ್ ಆಗಬಹುದು. 
icon

(8 / 11)

ಈ ರಂಗೋಲಿಯಲ್ಲಿ ನೀವು ದುರ್ಗೆಮಾತೆಯ ವಿವಿಧ ರೂಪಗಳನ್ನು ನೋಡಬಹುದು. ತಾಯಿಯನ್ನು ಸ್ವಾಗತಿಸಲು ಮನೆಯ ಅಂಗಳದ ಮಧ್ಯದಲ್ಲಿ ನೀವು ಈ ವಿನ್ಯಾಸಗಳಲ್ಲಿ ಯಾವುದಾದರೂ ಒಂದು ವಿನ್ಯಾಸವನ್ನು ಮಾಡಬಹುದು. ದಿನಕ್ಕೊಂದು ದುರ್ಗಮಾತೆಯ ವಿನ್ಯಾಸ ರಚಿಸಲು ಈ ಐಡಿಯಾ ನಿಮಗೆ ಹೆಲ್ಪ್ ಆಗಬಹುದು. 

ಹೂವುಗಳು ಮತ್ತು ಮಾವಿನ ಎಲೆಗಳಿಲ್ಲದೆ ಯಾವುದೇ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬುದು ನಂಬಿಕೆ. ಈ ಎರಡೂ ವಸ್ತುಗಳು ಮಂಗಳಕರ ಸಂಕೇತಗಳಾಗಿವೆ. ರಂಗೋಲಿ ಬಿಡಿಸುವಾಗ ನೀವು ಈ ಎರಡೂ ಮಂಗಳಕರ ವಸ್ತುಗಳನ್ನು ಬಳಸಬಹುದು.
icon

(9 / 11)

ಹೂವುಗಳು ಮತ್ತು ಮಾವಿನ ಎಲೆಗಳಿಲ್ಲದೆ ಯಾವುದೇ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬುದು ನಂಬಿಕೆ. ಈ ಎರಡೂ ವಸ್ತುಗಳು ಮಂಗಳಕರ ಸಂಕೇತಗಳಾಗಿವೆ. ರಂಗೋಲಿ ಬಿಡಿಸುವಾಗ ನೀವು ಈ ಎರಡೂ ಮಂಗಳಕರ ವಸ್ತುಗಳನ್ನು ಬಳಸಬಹುದು.(Art with Radhika pinterest)

ನಿಮ್ಮ ಮನೆಯ ಅಂಗಳ ಚಿಕ್ಕದಾಗಿದ್ದರೆ  ಅದನ್ನು ಅಲಂಕರಿಸಲು ನೀವು ಸಣ್ಣ ರಂಗೋಲಿ ವಿನ್ಯಾಸವನ್ನು ಮಾಡಬಹುದು. ಅದಕ್ಕಾಗಿ ನೀವು ಈ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸಬಹುದು. ಬಾಚಣಿಗೆಯ ಸಹಾಯದಿಂದ ನೀವು ಈ ರಂಗೋಲಿ ವಿನ್ಯಾಸಗಳನ್ನು ಬಹಳ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.
icon

(10 / 11)

ನಿಮ್ಮ ಮನೆಯ ಅಂಗಳ ಚಿಕ್ಕದಾಗಿದ್ದರೆ  ಅದನ್ನು ಅಲಂಕರಿಸಲು ನೀವು ಸಣ್ಣ ರಂಗೋಲಿ ವಿನ್ಯಾಸವನ್ನು ಮಾಡಬಹುದು. ಅದಕ್ಕಾಗಿ ನೀವು ಈ ರಂಗೋಲಿ ವಿನ್ಯಾಸವನ್ನು ಪ್ರಯತ್ನಿಸಬಹುದು. ಬಾಚಣಿಗೆಯ ಸಹಾಯದಿಂದ ನೀವು ಈ ರಂಗೋಲಿ ವಿನ್ಯಾಸಗಳನ್ನು ಬಹಳ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.(Ranu Art youtube.com)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(11 / 11)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 


ಇತರ ಗ್ಯಾಲರಿಗಳು