ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು

ಕಾತ್ಯಾಯನೀ ದೇವಿಗೆ ನವರಾತ್ರಿಯ 6ನೇ ದಿನ ಪೂಜೆ, ಮಹಿಷಾಸುರ ವಧೆಗೆ 3 ದಿನ ಮೊದಲು ಆದಿಶಕ್ತಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ಇದು

ನವರಾತ್ರಿಯಲ್ಲಿ 6ನೇ ಪೂಜಿಸುವುದು ಕಾತ್ಯಾಯನೀ ದೇವಿಯನ್ನು. ಮಹಿಷಾಸುರ ವಧಗೆ ಮೂರು ದಿನ ಮೊದಲು ಆದಶಕ್ತಿ ದೇವಿ ಸ್ವೀಕರಿಸಿದ ಪ್ರಥಮ ಪೂಜೆಯ ಕಥೆ ತಿಳ್ಕೊಂಡಿದ್ದೀರಾ… ಒಬ್ಬ ಋಷಿ ಈ ಕಾತ್ಯಾಯನೀ ಪೂಜೆಯನ್ನು ಮೊದಲು ಮಾಡಿದ್ದು. ಕುತೂಹಲಕಾರಿ ಕಥೆಯ ವಿವರ ಇಲ್ಲಿದೆ.

ನವರಾತ್ರಿಯ 6ನೇ ಕಾತ್ಯಾಯನಿ ದೇವಿಯ ರೂಪದಲ್ಲಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ದುರ್ಗಾ ದೇವಿಯ ಉಗ್ರ ಯೋಧ ಅವತಾರ ಇದಾಗಿದ್ದು,ಸಿಂಹದ ಮೇಲೆ ಸವಾರಿ ಮಾಡುವ ಮಹಿಷಾಸುರಮರ್ದಿನಿಯಾಗಿ ಆರಾಧಿಸಲ್ಪಡುತ್ತಾಳೆ. ಷಷ್ಠಿಯಂದು ಕಮಲದ ಹೂವು ಮತ್ತು ಖಡ್ಗ ಮತ್ತು ಶಿವನ ತ್ರಿಶೂಲ ಸೇರಿದಂತೆ ಬಹು ಆಯುಧಗಳನ್ನು ಹಿಡಿದಿರುವ ಈ ದೇವಿಯನ್ನು ಪೂಜಿಸಲಾಗುತ್ತದೆ.
icon

(1 / 10)

ಕಾತ್ಯಾಯನಿ ಚತುರ್ಭುಜದ ದೇವಿ. ಒಂದು ತೋಳಿನಲ್ಲಿ ಖಡ್ಗ, ಇನ್ನೊಂದರಲ್ಲಿ ಹೂವು. ಮೂರನೇ ಕೈ ಅಭಯ ಮುದ್ರೆ, ನಾಲ್ಕನೇಯ ಕೈ ವರಪ್ರದವಾಗಿ ಗೋಚರಿಸಿದೆ. ಇದು ಭಕ್ತರ ಭಯ ಹೋಗಲಾಡಿಸುವ ರೂಪವಾಗಿದ್ದು, ಅವರಿಗೆ ಅಭಯದ ವರದ ನೀಡುವಂತೆ ದೇವಿ ಗೋಚರಿಸಿದ್ದಾಳೆ.
icon

(2 / 10)

ತಾಯಿ ಕಾತ್ಯಯನಿಯ ಪ್ರಭಾವವು ಕುಂಡಲಿನಿಯ ಅಜ್ಞಾಚಕ್ರದಲ್ಲಿ ಕಂಡುಬರುತ್ತದೆ. ತಮ್ಮ ದಾಂಪತ್ಯದಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು, ತಾಯಿ ಕಾತ್ಯಾಯನಿಯನ್ನು ಪೂಜಿಸುತ್ತಾರೆ.
icon

(3 / 10)

ದೇವಿ ಭಾಗವತ ಪುರಾಣದಲ್ಲಿ, ಕಾತ್ಯಾಯನ ಋಷಿಯು ತಾಯಿ ಆದಿಶಕ್ತಿಯ ಮಹಾನ್ ಭಕ್ತ ಎಂದು ಉಲ್ಲೇಖಿಸಲಾಗಿದೆ. ದೇವಿಯು ತನ್ನ ಮನೆಯಲ್ಲಿ ಮಗಳ ರೂಪದಲ್ಲಿ ಹುಟ್ಟಲಿ ಎಂದು ಆ ಋಷಿ ಬೇಡಿಕೊಂಡಿದ್ದ. ಇದಕ್ಕಾಗಿ ಋಷಿ ಕಾತ್ಯಾಯನನು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದ್ದ.
icon

(4 / 10)

ಕಾತ್ಯಾಯನ ಋಷಿಯ ಕಠಿಣ ತಪಸ್ಸಿಗೆ ಒಲಿದ ಆದಿಶಕ್ತಿ, ಆತನಿಗೆ ಮಗಳಾಗಿ ಕಾಣಿಸಿಕೊಂಡಳು. ಆಗ ಕಾತ್ಯಾಯನ ಋಷಿಯು ಮೊದಲ ಬಾರಿಗೆ ಕಾತ್ಯಾಯನಿ ಪೂಜೆ ನಡೆಸಿದರು. ಮೂರು ದಿನಗಳ ಕಾಲ ಋಷಿ ಕಾತ್ಯಾಯನನ ಪೂಜೆ ಸ್ವೀಕರಿಸಿದ ಕಾತ್ಯಾಯಿನಿ ಬಳಿಕ ಅಲ್ಲಿಂದ ಹೊರಟು ಮಹಿಷಾಸುರ ವಧೆ ಮಾಡಿದ್ದಾಗಿ ಉಲ್ಲೇಖವಿದೆ. ಹೀಗಾಗಿ ಆಕೆಗೆ ಮಹಿಷ ಮರ್ದಿನಿ, ಮಹಿಷಾಸುರಮರ್ದಿನಿ ಎಂಬ ಹೆಸರಿದೆ. 
icon

(5 / 10)

ಗುರು ಗ್ರಹವನ್ನು ಕಾತ್ಯಾಯನಿ ದೇವಿಯು ಆಳುತ್ತಾಳೆ ಎಂದು ನಂಬಲಾಗಿದೆ. ತಾಯಿಯನ್ನು ಮನಃಪೂರ್ವಕವಾಗಿ ಸ್ಮರಿಸಿದರೆ ಎಲ್ಲ ರೋಗಗಳು, ದುಃಖ, ವೇದನೆ, ಭಯ ಇತ್ಯಾದಿ ಪೂರ್ಣವಾಗಿ ನಾಶವಾಗುವುದು ಎಂಬ ನಂಬಿಕೆ ಇದೆ. ಜನ್ಮ ಜನ್ಮಾಂತರದ ಪಾಪ ನಾಶಕ್ಕೆ ಕಾತ್ಯಾಯನಿ ಮಾತೆಯನ್ನು ಆರಾಧಿಸಬೇಕು ಎನ್ನುತ್ತಾರೆ ಬಲ್ಲವರು.
icon

(6 / 10)

ಕಾತ್ಯಾಯಿನಿ ದೇವಿಗೆ ಭಾರತದ ವೃಂದಾವನದಲ್ಲೊಂದು ದೇಗುಲವಿದೆ. ಇದು ಭಾರತದ ಅತ್ಯಂತ ಪ್ರಾಚೀನ 52 ಶಕ್ತಿಪೀಠಗಳಲ್ಲಿ ಒಂದಾಗಿ ಕಾಣಿಸಿಕೊಂಡಿದೆ. ಇಂತಹ ದೇವಸ್ಥಾನ ಬೇರೆ ಇಲ್ಲ. ಇಲ್ಲಿ ಶಾಂತ ವಾತಾವರಣ ಇದ್ದು, ಶಾಂತಿ, ನೆಮ್ಮದಿ ಅರಸಿ ಭಕ್ತರು ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. 
icon

(7 / 10)

ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖವಾಗಿರುವಂತೆ ಶಿವಪುರಾಣದ ಪ್ರಕಾರ, ದಕ್ಷ ಯಜ್ಞದ ವೇಳೆ ಸತೀದೇವಿ ಸ್ವಯಂ ದಹಿಸಿಕೊಂಡಾಗ ಆಕೆಯ ಕೂದಲು ಬಿದ್ದ ಸ್ಥಳ ಇದು. ಇಲ್ಲಿ ಕಾತ್ಯಾಯನಿ ದೇವಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ಶಾಂತಿ ಮತ್ತು ಆಶೀರ್ವಾದ ಸಿಗುತ್ತದೆ ಎಂದು ಜನರು ನಂಬುತ್ತಾರೆ.
icon

(8 / 10)

ಒಳ್ಳೆಯ ಗಂಡನನ್ನು ಕೊಡು ತಾಯಿ ಎಂದು ಈ ದೇವಾಲಯಕ್ಕೆ ಬಂದು ಪ್ರಾರ್ಥಿಸುವ ಯುವತಿಯರ ಸಂಖ್ಯೆ ಹೆಚ್ಚು. ಬ್ರಾಜ್‌ನಲ್ಲಿರುವ ಹುಡುಗಿಯರು ಶ್ರೀಕೃಷ್ಣನನ್ನು ತಮ್ಮ ಪತಿಯಾಗಿ ಬಯಸಿದಾಗ ಈ ಸಂಪ್ರದಾಯ ಶುರುವಾಯಿತು. ಅವರು ಕಾತ್ಯಾಯನಿ ದೇವಿಯನ್ನು ಪ್ರಾರ್ಥಿಸಿದರು, ಮತ್ತು ಅಂದಿನಿಂದ, ಅನೇಕ ಹುಡುಗಿಯರು ಪ್ರೀತಿ ಮತ್ತು ಸಂತೋಷಕ್ಕಾಗಿ ಆಶಿಸುತ್ತಾ ಈ ಸಂಪ್ರದಾಯವನ್ನು ಮುಂದುವರೆಸುತ್ತ ಬಂದಿದ್ದಾರೆ ಎಂಬ ಉಲ್ಲೇಖವಿದೆ.
icon

(9 / 10)

ಕಾತ್ಯಾಯನೀ ದೇವಿಯ ಆರಾಧನೆಗೆ ಈ ಪ್ರಾರ್ಥನಾ ಮಂತ್ರ ಬಳಸಬಹುದು: ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ ।ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ॥
icon

(10 / 10)

ಇತರ ಗ್ಯಾಲರಿಗಳು