ನವರಾತ್ರಿಯ 5ನೇ ದಿನ ಸ್ಕಂದಮಾತೆಗೆ ಪೂಜೆ, ಫಲವಂತಿಕೆಗಾಗಿ ಆರಾಧಿಸಲ್ಪಡುವ ಈ ದೇವಿಯ ವಿಶೇಷಗಳಿವು
ನವರಾತ್ರಿಯ ಐದನೇ ದಿನದಂದು, ತಾಯಿ ದುರ್ಗೆಯ ಐದನೇ ಅವತಾರವಾದ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತೆಯ ಆಶೀರ್ವಾದದಿಂದ, ಅಜ್ಞಾನಿ ಕೂಡ ಬುದ್ಧಿವಂತನಾಗುತ್ತಾನೆ ಎಂಬುದು ಭಕ್ತರ ನಂಬಿಕೆ. ಫಲವಂತಿಕೆಗಾಗಿ ಆರಾಧಿಸಲ್ಪಡುವ ಈ ದೇವಿಯ ವಿಶೇಷಗಳನ್ನು ತಿಳಿದುಕೊಳ್ಳೋಣ.
(1 / 10)
ಸ್ಕಂದ ಎಂಬುದು ಭಗವಾನ್ ಕಾರ್ತಿಕೇಯನ (ಪಾರ್ವತಿ ದೇವಿಯ ಮಗ) ಮತ್ತೊಂದು ಹೆಸರು. ಆದ್ದರಿಂದ ಸ್ಕಂದಮಾತಾ ಎಂದರೆ ಕಾರ್ತಿಕೇಯನ ತಾಯಿ ಎಂದರ್ಥ. ಇದು ತಾಯಿ ಪಾರ್ವತಿಯ ಮತ್ತೊಂದು ರೂಪ.
(2 / 10)
ಈ ರೂಪದಲ್ಲಿ ತಾಯಿ ದುರ್ಗಾ ಮಾತೆ ಚತುರ್ಭುಜೆ. ಒಂದರಲ್ಲಿ ಭಗವಾನ್ ಕಾರ್ತಿಕೇಯನನ್ನು ಹಿಡಿದಿದ್ದಾಳೆ, ಎರಡನೆಯ ಮತ್ತು ಮೂರನೆಯ ಕೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ ಮತ್ತು ನಾಲ್ಕನೆಯ ಕೈಯಿಂದು ದೇವಿಯು ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ.
(3 / 10)
ಸ್ಕಂದಮಾತೆಯನ್ನು ಪರ್ವತ ರಾಜ ಹಿಮವಂತನ ಮಗಳಾಗಿರುವುದರಿಂದ ಪಾರ್ವತಿ ಎಂದೂ ಕರೆಯುತ್ತಾರೆ. ಮಹಾದೇವನ ಹೆಂಡತಿಯಾದ ಆಕೆಗೆ ಮಹೇಶ್ವರಿ ಎಂಬ ಹೆಸರೂ ಇದೆ. ಮೈಬಣ್ಣದ ಕಾರಣ ಗೌರಿ ಎಂದೂ ಕರೆಯುತ್ತಾರೆ.
(4 / 10)
ನವರಾತ್ರಿಯ 5ನೇ ದಿನ ಸ್ಕಂದಮಾತೆಯನ್ನು ಅಸಾಧಾರಣ ಸಾಮರ್ಥ್ಯಗಳನ್ನು ಹೊಂದಿರುವ ಮಗುವಿನ ತಾಯಿ ಎಂದು ಪೂಜಿಸಲಾಗುತ್ತದೆ. ಅವಳು ಆರು ಮುಖದ ಶಿಶು ಷಣ್ಮುಖ ಸ್ವಾಮಿಯನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡಿದ್ದಾಳೆ. ಆದ್ದರಿಂದ ಸ್ಕಂದಮಾತೆಯನ್ನು ಪೂಜಿಸುವುದರಿಂದ ಕಾರ್ತಿಕೇಯ ಸ್ವಾಮಿಯನ್ನೂ ಒಟ್ಟಿಗೇ ಪೂಜಿಸಿದ ಫಲವೂ ಸಿಗುತ್ತದೆ.
(5 / 10)
ಪುರಾಣಕಥೆಯ ಪ್ರಕಾರ, ತಾರಕಾಸುರ ಎಂಬ ರಾಕ್ಷಸನ ಅಂತ್ಯಕ್ಕಾಗಿ ತಾಯಿ ಪಾರ್ವತಿ ದೇವಿಯು ಸ್ಕಂದಮಾತೆಯಾದರು. ತನ್ನ ಮಗ ಸ್ಕಂದನನ್ನು (ಕಾರ್ತಿಕೇಯ) ಯುದ್ಧಕ್ಕೆ ಸಿದ್ಧಪಡಿಸುವ ಸಲುವಾಗಿ, ತಾಯಿ ಪಾರ್ವತಿ ಸ್ಕಂದ ಮಾತೆಯಾಗಿ ಕಾರ್ತಿಕೇಯನನ್ನು ಸಮರಕ್ಕೆ ಸಜ್ಜುಗೊಳಿಸಿದ್ದು, ಲೋಕ ಕಲ್ಯಾಣಕ್ಕಾಗಿ ತಾರಕಾಸುರ ವಧೆಯನ್ನು ಕಾರ್ತಿಕೇಯನೇ ಮಾಡಿದ. ಹೀಗಾಗಿ ಇಬ್ಬರೂ ಒಟ್ಟಿಗೆ ಪೂಜಿಸಲ್ಪಡುತ್ತಿದ್ದಾರೆ.
(6 / 10)
ಸ್ಕಂದಮಾತಾ ದೇವಿಯನ್ನು ಬುಧ ಗ್ರಹದ ಅಧಿಪತಿ ಎಂದು ಪರಿಗಣಿಸಲಾಗಿದೆ. ಸ್ಕಂದಮಾತೆಯನ್ನು ಪೂಜಿಸುವ ಮೂಲಕ, ಸ್ಕಂದಮಾತಾ ದೇವತೆಗೆ ಸಂಬಂಧಿಸಿದ ಗ್ರಹವಾದ ಬುಧ ಗ್ರಹದ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.
(7 / 10)
ಮನುಷ್ಯ ಶರೀರದಲ್ಲಿ ಸ್ಕಂದ ಮಾತೆಯು ವಿಶುಧಾ ಚಕ್ರದಲ್ಲಿ ಉಪಸ್ಥಿತಳಾಗಿದ್ದಾಳೆ. ವಿಶುಧಾ ಎಂದ ಎಲ್ಲ ದಿಕ್ಕಗಳಲೂ ಶುದ್ಧವಾಗಿರುವುದು ಎಂದರ್ಥ. ದುರ್ಗಾ ಪೂಜೆಯ ಈ ದಿನದಂದು ಸ್ಕಂದಮಾತೆಯನ್ನು ಪೂಜಿಸುವವರ ಮನಸ್ಸು ಶುದ್ಧ ಆಲೋಚನೆಗಳ ಕಡೆಗೆ ಹೊರಳುತ್ತದೆ. ಉದ್ವೇಗ ಕಡಿಮೆಯಾಗಿ ಶಾಂತ ಭಾವ ನೆಲೆಸುತ್ತದೆ ಎಂಬ ನಂಬಿಕೆ ಇದೆ.
(8 / 10)
ಸೌರವ್ಯೂಹದ ಪ್ರಧಾನ ದೇವತೆಯಾಗಿರುವ ಸ್ಕಂದಮಾತಾ ದೇವಿಯು ಬಿಳಿ ಮತ್ತು ನೀಲಿ ಬಣ್ಣವನ್ನು ಇಷ್ಟಪಡುತ್ತಾಳೆ. ಸ್ಕಂದಮಾತೆಯ ಪ್ರಾರ್ಥನೆಯನ್ನು ಮಾಡುವಾಗ ಭಕ್ತನು ಬಿಳಿ, ನೀಲಿ ಅಥವಾ ಹಳದಿ ಬಟ್ಟೆಗಳನ್ನು ಧರಿಸುವುದು ವಾಡಿಕೆ.
(9 / 10)
ಸ್ಕಂದಮಾತೆಯನ್ನು ಸಾಮಾನ್ಯವಾಗಿ ಫಲವಂತಿಕೆ, ಮಾತೃತ್ವ ಮತ್ತು ತಾಯಿ-ಮಗುವಿನ ಸಂಬಂಧಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸ್ಕಂದಮಾತಾ ದೇವಿಯು ತನ್ನ ಭಕ್ತರಿಗೆ ಶಕ್ತಿ, ಸಮೃದ್ಧಿ ಮತ್ತು ಮೋಕ್ಷ ನೀಡುವ ಮೂಲಕ ಆಶೀರ್ವದಿಸುತ್ತಾಳೆ ಎಂಬುದು ಆಸ್ತಿಕರ ನಂಬಿಕೆ.
ಇತರ ಗ್ಯಾಲರಿಗಳು