Oppenheimer Movie OTT: ಈ ಒಟಿಟಿಗೆ ಬಂತು 7 ಆಸ್ಕರ್ ಅವಾರ್ಡ್ ಪಡೆದ ಓಪನ್‌ಹೀಮರ್ ಸಿನಿಮಾ; ಯಾವಾಗ, ಎಲ್ಲಿ ವೀಕ್ಷಣೆ?
- 96ನೇ ಅಕಾಡೆಮಿ ಅವಾರ್ಡ್ ಸೆರ್ಮನಿಯಲ್ಲಿ ಕ್ರಿಟಿಕ್ಸ್ ಮತ್ತು ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದ ಹಾಲಿವುಡ್‌ನ ಓಪನ್‌ಹೀಮರ್ ಸಿನಿಮಾ ಈಗ ಒಟಿಟಿ ಅಂಗಳಕ್ಕೂ ಎಂಟ್ರಿಕೊಟ್ಟಿದೆ. ಯಾವ ಒಟಿಟಿಯಲ್ಲಿ ಯಾವಾಗ ವೀಕ್ಷಣೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ
- 96ನೇ ಅಕಾಡೆಮಿ ಅವಾರ್ಡ್ ಸೆರ್ಮನಿಯಲ್ಲಿ ಕ್ರಿಟಿಕ್ಸ್ ಮತ್ತು ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದ್ದ ಹಾಲಿವುಡ್‌ನ ಓಪನ್‌ಹೀಮರ್ ಸಿನಿಮಾ ಈಗ ಒಟಿಟಿ ಅಂಗಳಕ್ಕೂ ಎಂಟ್ರಿಕೊಟ್ಟಿದೆ. ಯಾವ ಒಟಿಟಿಯಲ್ಲಿ ಯಾವಾಗ ವೀಕ್ಷಣೆ ಎಂಬ ಬಗೆಗಿನ ಮಾಹಿತಿ ಇಲ್ಲಿದೆ
(1 / 6)
96ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ 13 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡ ಓಪನ್ ಹೀಮರ್ ಸಿನಿಮಾ 7 ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿತ್ತು.
(2 / 6)
ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಚಿತ್ರ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಹಿನ್ನೆಲೆ ಸಂಗೀತ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲೂ ಈ ಸಿನಿಮಾ ಪ್ರಶಸ್ತಿ ಪಡೆದಿದೆ.
(3 / 6)
ಈಗ ಇದೇ ಓಪನ್ ಹೀಮರ್ ಸಿನಿಮಾ ಬಹುದಿನಗಳ ಬಳಿಕ ಜಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸುತ್ತಿದೆ. ಈ ವಿಚಾರವನ್ನು ಜಿಯೋ ಸಿನಿಮಾ ಅಧಿಕೃತವಾಗಿ ಖಚಿತಡಿಸಿದೆ.
(4 / 6)
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಣುಬಾಂಬ್ ಸೃಷ್ಟಿಸುವಲ್ಲಿ ಅಮೆರಿಕಾದ ಮೇಧಾವಿ ಭೌತಶಾಸ್ತ್ರಜ್ಞ ಜೆ. ರಾಬರ್ಟ್ ಓಪನ್ ಹೀಮರ್ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ಅಣುಬಾಂಬ್ ಪಿತಾಮಹ ಎಂದೇ ಕರೆಯಲಾಗಿತ್ತು. ಅವರ ಬಯೋಪಿಕ್ ಇದಾಗಿದೆ.
(5 / 6)
ಸಿಲಿಯನ್ ಮರ್ಫಿ ಈ ಸಿನಿಮಾದಲ್ಲಿ ರಾಬರ್ಟ್ ಹೀಮರ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಗೆ 96ನೇ ಅಕಾಡೆಮಿ ಪ್ರಶಸ್ತಿ ಪುರಸ್ಕಾರವೂ ಸಿಕ್ಕಿದೆ. ಗೋಲ್ಡನ್ ಗ್ಲೋಬ್ಸ್‌ನಲ್ಲಿ 8 ಅವಾರ್ಡ್‌ಗಳೂ ಸಿಕ್ಕಿದೆ.
ಇತರ ಗ್ಯಾಲರಿಗಳು