ಏಕಾಏಕಿ 6 ಸ್ಥಾನ ಕುಸಿದ ಬಾಬರ್ ಅಜಮ್; 2 ಸ್ಥಾನ ಮೇಲೇರಿದ ವಿರಾಟ್ ಕೊಹ್ಲಿ; 6, 7, 8ನೇ ಶ್ರೇಯಾಂಕದಲ್ಲಿ ಭಾರತೀಯರು!
- ICC Test Ranking: ಐಸಿಸಿ ಟೆಸ್ಟ್ ಕ್ರಿಕೆಟ್ ನೂತನ ರ್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಮ್ ಏಕಾಏಕಿ 6 ಸ್ಥಾನ ಕುಸಿದಿದ್ದಾರೆ. ಯಾರಿಗೆ ಯಾವ ಸ್ಥಾನದಲ್ಲಿದ್ದಾರೆ ಎಂಬುದರ ವಿವರ ಇಲ್ಲಿದೆ.
- ICC Test Ranking: ಐಸಿಸಿ ಟೆಸ್ಟ್ ಕ್ರಿಕೆಟ್ ನೂತನ ರ್ಯಾಂಕಿಂಗ್ ಪಟ್ಟಿ ಪ್ರಕಟಗೊಂಡಿದೆ. ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ಮನ್ ಬಾಬರ್ ಅಜಮ್ ಏಕಾಏಕಿ 6 ಸ್ಥಾನ ಕುಸಿದಿದ್ದಾರೆ. ಯಾರಿಗೆ ಯಾವ ಸ್ಥಾನದಲ್ಲಿದ್ದಾರೆ ಎಂಬುದರ ವಿವರ ಇಲ್ಲಿದೆ.
(1 / 7)
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರು ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲೂ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಇದು ಅವರ ಟೆಸ್ಟ್ ರ್ಯಾಂಕಿಂಗ್ ಮೇಲೆ ಪರಿಣಾಮ ಬೀರಿದೆ.
(2 / 7)
ಇತ್ತೀಚೆಗೆ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಡಕ್ಔಟ್ ಆದರು. 2ನೇ ಇನ್ನಿಂಗ್ಸ್ನಲ್ಲಿ 22 ರನ್ ಗಳಿಸಿದರು. ಸತತ ವೈಫಲ್ಯಕ್ಕೆ ಒಳಗಾಗಿರುವ ಬಾಬರ್, ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ತೀವ್ರ ಕುಸಿತ ಕಂಡಿದ್ದಾರೆ.(AP)
(3 / 7)
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ (ಆಗಸ್ಟ್ 28) ಬಾಬರ್, 6 ಸ್ಥಾನ ಕುಸಿತ ಕಂಡಿದ್ದಾರೆ. ಈ ಮೊದಲು ಅವರು 3ನೇ ಸ್ಥಾನದಲ್ಲಿದ್ದರು. ಇದೀಗ ಮೂರರಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಾಕಿಸ್ತಾನವು ಬಾಂಗ್ಲಾದೇಶದ ವಿರುದ್ಧ 10 ವಿಕೆಟ್ ಹೀನಾಯ ಸೋಲು ಕಂಡಿತು.(AP)
(4 / 7)
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ನಲ್ಲಿ ಶತಕ ಬಾರಿಸಿದ ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ 7 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ. ಸೌದ್ ಶಕೀಲ್ ಒಂದು ಸ್ಥಾನ ಮೇಲೇರಿ 13ನೇ ಸ್ಥಾನದಲ್ಲಿದ್ದಾರೆ.(AP)
(5 / 7)
ಈ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ-10ರಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಬಾಬರ್ ಕುಸಿತ ಕಂಡರೆ, ವಿರಾಟ್ ಕೊಹ್ಲಿ 2, ಯಶಸ್ವಿ ಜೈಸ್ವಾಲ್ 1 ಸ್ಥಾನ ಏರಿಕೆ ಕಂಡಿದ್ದಾರೆ. ಇವರಿಬ್ಬರು ಕ್ರಮವಾಗಿ 7 ಮತ್ತು 8ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 6ನೇ ಸ್ಥಾನ ಪಡೆದಿದ್ದಾರೆ.(PTI)
(6 / 7)
ಇನ್ನು ಅಗ್ರಸ್ಥಾನದಲ್ಲಿ ಇಂಗ್ಲೆಂಡ್ ಜೋ ರೂಟ್ ಮುಂದುವರೆದಿದ್ದಾರೆ. ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ಇಂಗ್ಲೆಂಡ್ನ ಹ್ಯಾರಿ ಬ್ರೂಕ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕ್ರಮವಾಗಿ 2, 3, 4, 5ನೇ ಸ್ಥಾನ ಪಡೆದಿದ್ದಾರೆ.(Action Images via Reuters)
ಇತರ ಗ್ಯಾಲರಿಗಳು