Vande Bharat Express Nagpur: ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
- ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಗ್ಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಲೋಕಾರ್ಪಣೆಗೊಳಿಸಿದರು. ಇದು ಭಾರತದ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್. ಮೊದಲ ಹಂತದ ಈ ಪ್ರಾಜೆಕ್ಟ್ ಇದಾಗಿದ್ದು, 40 ಕಿ.ಮೀ. ದೂರ ಪ್ರಯಾಣಿಸಲಿದ್ದು, ಒಟ್ಟು 36 ನಿಲ್ದಾಣಗಳನ್ನು ಹೊಂದಿದೆ.
- ಪ್ರಧಾನಿ ನರೇಂದ್ರ ಮೋದಿಯವರು ಇಂದು ನಾಗ್ಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಲೋಕಾರ್ಪಣೆಗೊಳಿಸಿದರು. ಇದು ಭಾರತದ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್. ಮೊದಲ ಹಂತದ ಈ ಪ್ರಾಜೆಕ್ಟ್ ಇದಾಗಿದ್ದು, 40 ಕಿ.ಮೀ. ದೂರ ಪ್ರಯಾಣಿಸಲಿದ್ದು, ಒಟ್ಟು 36 ನಿಲ್ದಾಣಗಳನ್ನು ಹೊಂದಿದೆ.
(1 / 7)
ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸಲಿರುವ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.(ANI/PIB)
(2 / 7)
ಇದೇ ಸಮಯದಲ್ಲಿ ಎರಡನೇ ಹಂತದ ಮೆಟ್ರೋ ಪ್ರಾಜೆಕ್ಟ್‌ಗೂ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದರು.(ANI/PIB)
(3 / 7)
ವಂದೇ ಭಾರತ್ ಎಕ್ಸ್‌ಪ್ರೆಸ್ ಲಾಂಚ್ ಮಾಡುವ ಮುನ್ನ ಖಪ್ರಿಯಲ್ಲಿರುವ ಫ್ರೀಡಂ ಪಾರ್ಕ್‌ಗೆ ತೆರಳಲು ಪ್ರಧಾನಿ ನರೇಂದ್ರ ಮೋದಿಯವರು ಮೆಟ್ರೊ ಬಳಕೆ ಮಾಡಿದರು. ಈ ಸಮಯದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. (ANI/PIB)
(4 / 7)
ನಂತರ ಮೋದಿಯವರು ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಿದರು(ANI/PIB)
(5 / 7)
ಮಹಾರಾಷ್ಟ್ರ ರಾಜ್ಯ ಭೇಟಿ ನೀಡಿದ ಮೋದಿಯವರನ್ನು ಮಹಾರಾಷ್ಟ್ರ ರಾಜ್ಯಪಾಲ ಕೊಶಿಯಾರಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣಾವೀಸ್ ಆತ್ಮೀಯವಾಗಿ ಬರಮಾಡಿಕೊಂಡರು. ಇದು ನಾಗ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರಮುಖರ ಜತೆ ಪ್ರಧಾನಿ ಫೋಟೊಶೂಟ್. (PTI)
(6 / 7)
ಇದೇ ವೇಳೆ ಪ್ರಧಾನಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಅಡಿಗಲ್ಲು ಹಾಕಿದರು. ರೈಲಿಗೆ ಚಾಲನೆ ನೀಡಿದ ಬಳಿಕ ಮೋದಿಯವರು, ನಂತರ ಟಿಕೆಟ್ ಖರೀದಿಸಿ ವಿದ್ಯಾರ್ಥಿಗಳೊಂದಿಗೆ ಪ್ರಯಾಣ ಮಾಡಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತುಕತೆಯನ್ನೂ ನಡೆಸಿದರು.(PTI)
ಇತರ ಗ್ಯಾಲರಿಗಳು