ಕನ್ನಡ ಸುದ್ದಿ  /  ಕ್ರಿಕೆಟ್  /  ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಕ್ರಿಕೆಟಿಗರು; ವಿಶ್ವ ಸಾಮ್ರಾಟರೊಂದಿಗೆ ನಮೋ ಮಾತು, ಹರಟೆ! ವಿಡಿಯೋ

ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಕ್ರಿಕೆಟಿಗರು; ವಿಶ್ವ ಸಾಮ್ರಾಟರೊಂದಿಗೆ ನಮೋ ಮಾತು, ಹರಟೆ! ವಿಡಿಯೋ

Indian Cricket Team: ಟಿ20 ವಿಶ್ವಕಪ್ 2024 ಗೆದ್ದ ಭಾರತೀಯ ಕ್ರಿಕೆಟಿಗರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿ ಸಂವಾದ ನಡೆಸಿದರು. ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡಿದರು.

ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಕ್ರಿಕೆಟಿಗರು; ವಿಶ್ವ ಸಾಮ್ರಾಟರೊಂದಿಗೆ ನಮೋ ಮಾತು, ಹರಟೆ! ವಿಡಿಯೋ
ಪ್ರಧಾನಿ ಮೋದಿ ಭೇಟಿಯಾದ ಭಾರತೀಯ ಕ್ರಿಕೆಟಿಗರು; ವಿಶ್ವ ಸಾಮ್ರಾಟರೊಂದಿಗೆ ನಮೋ ಮಾತು, ಹರಟೆ! ವಿಡಿಯೋ

2024ರ ಟಿ20 ವಿಶ್ವಕಪ್ (T20 World Cup 2024) ಗೆದ್ದ ಐದು ದಿನಗಳ ನಂತರ ತವರಿಗೆ ಮರಳಿದ ಭಾರತೀಯ ಆಟಗಾರರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ವಿಶ್ವಕಪ್ ಗೆದ್ದ ರೋಹಿತ್ ಪಡೆಯನ್ನು ಮೋದಿ ಅವರು ವಿಶೇಷವಾಗಿ ಅಭಿನಂದಿಸಿದ್ದಾರೆ. ವಿಶ್ವಕಪ್‌ನೊಂದಿಗೆ ಬಾರ್ಬಡೋಸ್‌ನಿಂದ ದೆಹಲಿ ತಲುಪಿದ ಟೀಮ್ ಇಂಡಿಯಾಗೆ (Team India) ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.

ಬಳಿಕ ಐಟಿಸಿ ಮೌರ್ಯ ಹೋಟೆಲ್ ತಲುಪಿದ ಕ್ರಿಕೆಟಿಗರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಆಗಮಿಸಿದರು. ಪ್ರಧಾನಿ ಮೋದಿ ತಮ್ಮ ಮನೆಗೆ ಆಗಮಿಸಿದ ಭಾರತೀಯ ಕ್ರಿಕೆಟಿಗರ ಜೊತೆ ವಿಶೇಷ ಸಭೆ ನಡೆಸಿದರು. ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದ ಅಂಗವಾಗಿ ಕ್ರಿಕೆಟಿಗರೊಂದಿಗೆ ಸಂವಾದ ನಡೆಸಿದ ಮೋದಿ, ಪಂದ್ಯದ ಪ್ರದರ್ಶನದ ಕುರಿತು ಕೇಳಿದರು.

ಆಟಗಾರರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡ ಮೋದಿ ಅವರು ಕೆಲ ಹೊತ್ತು ಮಾತನಾಡಿದರು. ತಮಾಷೆ ಮತ್ತು ಹರಟೆ ಹೊಡೆದಿದ್ದಾರೆ. ಟೂರ್ನಿಯಲ್ಲಿ ಪ್ರದರ್ಶನ ನೀಡಿದ್ದರ ಕುರಿತು, ಅಲ್ಲಿನ ಪರಿಸ್ಥಿತಿಗಳ ಮಾಹಿತಿ ಪಡೆದರು. ಹಾರ್ದಿಕ್ ಪಾಂಡ್ಯ ಅದೆಲ್ಲವನ್ನೂ ವಿವರಿಸಿದರು. ಟಿ20 ವಿಶ್ವಕಪ್ ಗೆದ್ದ ಭಾರತೀಯ ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಟ್ರೆಂಡಿಂಗ್​ ಸುದ್ದಿ

ವಿಶ್ವಕಪ್ ಗೆದ್ದಾಗಲೇ ಅಭಿನಂದಿಸಿದ್ದ ಮೋದಿ

ಜೂನ್ 29ರಂದು ಫೈನಲ್​ನಲ್ಲಿ ಸೌತ್ ಆಫ್ರಿಕಾ ತಂಡವನ್ನು 7 ರನ್​ಗಳಿಂದ ಜಯಿಸಿದ ನಂತರ ಪ್ರಧಾನಿ ಮೋದಿ ಅವರು ಕರೆ ಮಾಡಿ ಭಾರತೀಯ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದರು. ನಾಯಕ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕರೆ ಮಾಡಿ ತಮ್ಮ ಪ್ರದರ್ಶನವನ್ನುಶ್ಲಾಘಿಸಿದ್ದರು. ರೋಹಿತ್ ಮತ್ತು ಕೊಹ್ಲಿ ಅವರ ಟಿ20ಐ ಕ್ರಿಕೆಟ್ ವೃತ್ತಿಜೀವನವನ್ನು ಮೆಚ್ಚಿಕೊಂಡಿದ್ದರು. ಫೈನಲ್​ನಲ್ಲಿ ಕೊಹ್ಲಿ ಅವರ ಕೊಡುಗೆಯನ್ನೂ ಮೆಚ್ಚಿಕೊಂಡಿದ್ದರು.

2023ರ ಏಕದಿನ ವಿಶ್ವಕಪ್ ಸೋತಾಗ ಮೋದಿ ಸಾಂತ್ವಾನ

2023ರಲ್ಲಿ ತವರಿನಲ್ಲಿ ಜರುಗಿದ ಪ್ರತಿಷ್ಠಿತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್​ನಲ್ಲಿ ಶರಣಾಗಿತ್ತು. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಸೋಲನುಭವಿಸಿತ್ತು. ಈ ವೇಳೆ ಭಾರತದ ಡ್ರೆಸ್ಸಿಂಗ್​ ರೂಮ್​ಗೆ ಭೇಟಿ ಕೊಟ್ಟಿದ್ದ ಮೋದಿ ಅವರು ಆಟಗಾರರಿಗೆ ಸಾಂತ್ವಾನ ಹೇಳಿದ್ದರು. ಇಡೀ ದೇಶವೇ ನಿಮ್ಮೊಂದಿಗೆ ನಿಂತಿದೆ ಎಂದು ಧೈರ್ಯ ತುಂಬಿದ್ದರು. ಸೋತರೂ ಸಹ ಪ್ರತಿಯೊಬ್ಬರ ಪ್ರದರ್ಶನವನ್ನೂ ಮೋದಿ ಮೆಚ್ಚಿಕೊಂಡಿದ್ದರು.

ಪ್ರಧಾನಿ ಭೇಟಿಯ ಬಳಿಕ ಟೀಮ್ ಇಂಡಿಯಾ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಲಿದ್ದಾರೆ. ಸಂಜೆ 5 ಗಂಟೆಗೆ ಮುಂಬೈನಲ್ಲಿ ರೋಡ್ ಶೋ ನಡೆಯಲಿದೆ. ಮುಂಬೈನ ನಾರಿಮನ್ ಪಾಯಿಂಟ್​ನಿಂದ ವಾಂಖೆಡೆ ಸ್ಟೇಡಿಯಂವರೆಗೆ ವಿಜಯೋತ್ಸವ ಪರೇಡ್ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಬಿಸಿಸಿಐ ಕ್ರಿಕೆಟಿಗರನ್ನು ಸನ್ಮಾನಿಸಲಿದೆ. ಮುಂಬೈನಲ್ಲಿ ಸಂಜೆ ಪರೇಡ್‌ಗೆ ಭಾರಿ ವ್ಯವಸ್ಥೆ ಮಾಡಲಾಗಿದೆ.

ಸುಮಾರು 17 ವರ್ಷಗಳ ನಂತರ ಭಾರತ ತಂಡ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. 2007ರಲ್ಲಿ ಧೋನಿ ನಾಯಕತ್ವದಲ್ಲಿ ಮೊದಲ ಕಪ್ ಜಯಿಸಿತ್ತು. ಟಿ20 ವಿಶ್ವಕಪ್ ನಂತರ ನಾಯಕ ರೋಹಿತ್ ಶರ್ಮಾ, ಪ್ರಮುಖ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆಲ್​​ರೌಂಡರ್ ರವೀಂದ್ರ ಜಡೇಜಾ ಟಿ 20 ಫಾರ್ಮ್ಯಾಟ್‌ನಿಂದ ನಿವೃತ್ತಿ ಘೋಷಿಸಿದರು. ಕಪ್ ಗೆದ್ದು ಹೊರಡಬೇಕಿದ್ದ ಭಾರತ ತಂಡ ಚಂಡಮಾರುತದಿಂದ ಬಾರ್ಬಡೋಸ್‌ನಲ್ಲಿ ಉಳಿದುಕೊಂಡಿದ್ದು, ಇದೀಗ ವಿಶೇಷ ವಿಮಾನದಲ್ಲಿ ಭಾರತಕ್ಕೆ ತಲುಪಿದೆ.