ಇಶಾನ್ ಕಿಶನ್ ಮರೆತಿದ್ಯೇ ಬಿಸಿಸಿಐ; ಜಿಂಜಾಬ್ವೆ ಸರಣಿಗೂ ಆಯ್ಕೆಯಾಗದ 6 ಸ್ಟಾರ್​​ ಕ್ರಿಕೆಟಿರ್​​ಗಳು ಇವರು!
ಕನ್ನಡ ಸುದ್ದಿ  /  ಕ್ರಿಕೆಟ್  /  ಇಶಾನ್ ಕಿಶನ್ ಮರೆತಿದ್ಯೇ ಬಿಸಿಸಿಐ; ಜಿಂಜಾಬ್ವೆ ಸರಣಿಗೂ ಆಯ್ಕೆಯಾಗದ 6 ಸ್ಟಾರ್​​ ಕ್ರಿಕೆಟಿರ್​​ಗಳು ಇವರು!

ಇಶಾನ್ ಕಿಶನ್ ಮರೆತಿದ್ಯೇ ಬಿಸಿಸಿಐ; ಜಿಂಜಾಬ್ವೆ ಸರಣಿಗೂ ಆಯ್ಕೆಯಾಗದ 6 ಸ್ಟಾರ್​​ ಕ್ರಿಕೆಟಿರ್​​ಗಳು ಇವರು!

Indian Cricket Team: ಜಿಂಬಾಬ್ವೆ ವಿರುದ್ಧದ 6 ಪಂದ್ಯಗಳ ಟಿ20 ಸರಣಿಯು ಜುಲೈ 6ರಿಂದ ಶುರುವಾಗಲಿದ್ದು, ಪ್ರಮುಖ ಆರು ಆಟಗಾರರನ್ನೇ ಬಿಸಿಸಿಐ ಕೈಬಿಟ್ಟಿದೆ. ಅವರ ಪಟ್ಟಿ ಇಲ್ಲಿದೆ.

ಇಶಾನ್ ಕಿಶನ್ ಮರೆತಿದ್ಯೇ ಬಿಸಿಸಿಐ; ಜಿಂಜಾಬ್ವೆ ಸರಣಿಗೂ ಆಯ್ಕೆಯಾಗದ 6 ಸ್ಟಾರ್​​ ಕ್ರಿಕೆಟಿರ್​​ಗಳು ಇವರು!
ಇಶಾನ್ ಕಿಶನ್ ಮರೆತಿದ್ಯೇ ಬಿಸಿಸಿಐ; ಜಿಂಜಾಬ್ವೆ ಸರಣಿಗೂ ಆಯ್ಕೆಯಾಗದ 6 ಸ್ಟಾರ್​​ ಕ್ರಿಕೆಟಿರ್​​ಗಳು ಇವರು!

2024ರ ಟಿ20 ವಿಶ್ವಕಪ್ (T20 World Cup 2024)​​ ಸೆಮಿಫೈನಲ್ ಪ್ರಾರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಅವರಂತಹ ಸ್ಟಾರ್​​ ಆಟಗಾರರು ಇಲ್ಲದೆ ಜಿಂಬಾಬ್ವೆ ವಿರುದ್ಧದ ಸರಣಿಗೆ (India vs Zimbabwe) ಯುವ ಭಾರತ ತಂಡವನ್ನು ಪ್ರಕಟಿಸಿತು. ಶುಭ್ಮನ್ ಗಿಲ್ ನೇತೃತ್ವದ ತಂಡವು ಜುಲೈ 6 ರಿಂದ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಟಿ20 ವಿಶ್ವಕಪ್ ಭಾಗವಾಗಿದ್ದಆಟಗಾರರು ಈ ಸರಣಿಯ ಭಾಗವಾಗಿಲ್ಲ.

ರೋಹಿತ್, ಕೊಹ್ಲಿ, ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಉಳಿದಂತೆ ಸೂರ್ಯಕುಮಾರ್ ಯಾದವ್​, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಸೇರಿದಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಆರಂಭದಲ್ಲಿ ವಿಶ್ವಕಪ್ ತಂಡದಲ್ಲಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು. ನಂತರ ಗಾಯಗೊಂಡ ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಶಿವಂ ದುಬೆ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಯಿತು.

ಇದೀಗ ಮತ್ತೆ ತಂಡದಲ್ಲಿ ಬದಲಾವಣೆಯಾಗಿದೆ. ಸ್ಯಾಮ್ಸನ್, ದುಬೆ ಮತ್ತು ಜೈಸ್ವಾಲ್ ಬದಲಿಗೆ ಸಾಯಿ ಸುದರ್ಶನ್, ಜಿತೇಶ್ ಶರ್ಮಾ ಮತ್ತು ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಗಿದೆ. ಟಿ20 ವಿಶ್ವಕಪ್ ವಿಜೇತ ತಂಡದ ಈ ಮೂವರು ಸದಸ್ಯರು ಮೂವರು ಕೊನೆಯ 2 ಟಿ20ಐ ಪಂದ್ಯಗಳಿಗೆ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ ಸ್ಟಾರ್​ ಆಟಗಾರರೇ ತಂಡದಲ್ಲಿ ಅವಕಾಶ ಪಡೆಯಲು ವಿಫಲರಾಗಿದ್ದಾರೆ.

ಇಶಾನ್ ಕಿಶನ್ ಎಲ್ಲಿದ್ದಾರೆ?

ಭೀಕರ ಅಪಘಾತದಿಂದ ಗಾಯಗೊಂಡಿದ್ದ ರಿಷಭ್ ಪಂತ್ ಅವರು ಮರಳುವುದಕ್ಕೂ ಮುನ್ನ ಇಶಾನ್ ಟಿ20ಐ ಸ್ವರೂಪದಲ್ಲಿ ಭಾರತದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು.ಎಡಗೈ ಬ್ಯಾಟರ್​ ಇಶಾನ್ ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಬಲ್ಲರು. ಆದಾಗ್ಯೂ, 2023ರ ಏಕದಿನ ವಿಶ್ವಕಪ್ ನಂತರ ಇಶಾನ್ ಐಸಿಸಿ ಟಿ20 ಪಂದ್ಯಾವಳಿಗೆ ತಯಾರಿ ನಡೆಸಲು ಭಾರತ ಹೊಂದಿದ್ದ 11 ಟಿ20 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದ್ದರು.

ಆಸ್ಟ್ರೇಲಿಯಾ ವಿರುದ್ಧ ಸತತ ಅರ್ಧಶತಕ ಬಾರಿಸಿದರೂ ಇಶಾನ್, ಬಿಸಿಸಿಐ ಶಿಸ್ತು ಪಾಲಿಸದ ಕಾರಣ ಜಿತೇಶ್ ಶರ್ಮಾ ಮೊದಲ ಆಯ್ಕೆಯ ಕೀಪರ್ ಆಯ್ಕೆಯಾದರು. ಒಂದು ತಿಂಗಳ ನಂತರ ಇಶಾನ್ ಮಾನಸಿಕ ವಿಶ್ರಾಂತಿ ಪಡೆದರು. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಯೆಗೆ ಮರಳಲಿಲ್ಲ. ಜಾರ್ಖಂಡ್​ನ ರಣಜಿ ಟ್ರೋಫಿ ಪಂದ್ಯಗಳಲ್ಲಿ ಹಾಜರಾಗುವಂತೆ ಬಿಸಿಸಿಐ, ಇಶಾನ್​ಗೆ ಸೂಚಿಸಿತ್ತು. ಆದರೆ ಇಶಾನ್ ಆದೇಶಗಳನ್ನು ನಿರ್ಲಕ್ಷಿಸಿದರು. ಕದ್ದುಮುಚ್ಚಿ ಐಪಿಎಲ್​ಗೆ ಅಭ್ಯಾಸ ಆರಂಭಿಸಿದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.

ಹೀಗಾಗಿ ಇಶಾನ್ ಅವರನ್ನು ನಂತರ ಟಿ20 ವಿಶ್ವಕಪ್ ತಂಡಕ್ಕೆ ಕಡೆಗಣಿಸಲಾಯಿತು. ಈಗ ಅವರನ್ನು ಜಿಂಬಾಬ್ವೆ ಸರಣಿಗೂ ನಿರ್ಲಕ್ಷಿಸಲಾಗಿದೆ. ಈ ತಂಡದಲ್ಲಿ ಐಪಿಎಲ್​ನಲ್ಲಿ ಮಿಂಚಿದ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಧ್ರುವ್ ಜುರೆಲ್, ಆರಂಭಿಕ 3 ಪಂದ್ಯಗಳಿಗೆ ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ ಕೀಪಿಂಗ್ ಕರ್ತವ್ಯ ವಹಿಸಿಕೊಳ್ಳುವ ಸಾಧ್ಯತೆ ಇದೆ. ಜಿತೇಶ್ ಬ್ಯಾಕಪ್ ಆಯ್ಕೆಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ.

ಕಳೆದ ಮೇ ತಿಂಗಳಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಮುನ್ನಡೆಸಿದ್ದ ಶ್ರೇಯಸ್ ಅಯ್ಯರ್ ಹಾಗೂ 15 ಪಂದ್ಯಗಳಲ್ಲಿ 8.04 ಎಕಾನಮಿ ರೇಟ್​ನಲ್ಲಿ 21 ವಿಕೆಟ್​ಗಳೊಂದಿಗೆ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ ವರುಣ್ ಚಕ್ರವರ್ತಿ ಅವರನ್ನೂ ಕಡೆಗಣಿಸಲಾಗಿದೆ. ವೇಗದ ಬೌಲರ್​​ಗಳಾದ ಮಯಾಂಕ್ ಯಾದವ್ ಮತ್ತು ಉಮ್ರಾನ್ ಮಲಿಕ್ ಅವ​ರನ್ನು ಟಿ20ಐ ಸರಣಿಗೆ ಪರಿಗಣಿಸಲಾಗಿಲ್ಲ.

ಲಕ್ನೋ ಸೂಪರ್ ಜೈಂಟ್ಸ್ ವೇಗದ ಬೌಲರ್ ಮಯಾಂಕ್ ಯಾದವ್ ಕೇವಲ 4 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೂ ಇಡೀ ಕ್ರಿಕೆಟ್​​ ಜಗತ್ತನ್ನೇ ತನ್ನ ವೇಗದ ಬೌಲಿಂಗ್ ಮೂಲಕ ವಿಸ್ಮಯಗೊಳಿಸಿದ್ದರು. ಅವರು ಓವರ್​​ಗೆ 7 ರನ್​ಗಳಿಗಿಂತ ಎಕಾನಮಿಯಲ್ಲಿ 7 ವಿಕೆಟ್​ಗಳನ್ನು ಪಡೆದಿದ್ದರು. ಮತ್ತೊಂದೆಡೆ, ಫೆಬ್ರವರಿ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯ ನಂತರ ಮಲಿಕ್ ಅವರಿಗೆ ಮತ್ತೆ ಅವಕಾಶ ಸಿಗಲೇ ಇಲ್ಲ.

ಐಪಿಎಲ್​​ನಲ್ಲಿ ಆರ್​​ಸಿಬಿ ಪರ 14 ಪಂದ್ಯಗಳಲ್ಲಿ 15 ವಿಕೆಟ್​ಗಳನ್ನು ಪಡೆದಿದ್ದ ಯಶ್ ದಯಾಳ್ ಮತ್ತು ರಾಜಸ್ಥಾನ್ ರಾಯಲ್ಸ್ ಪರ 11 ಪಂದ್ಯಗಳಲ್ಲಿ 13 ವಿಕೆಟ್​ಗಳನ್ನು ಪಡೆದ ಅತ್ಯಂತ ಅನುಭವಿ ಸಂದೀಪ್ ಶರ್ಮಾ ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧೆಯಲ್ಲಿದ್ದರು.

Whats_app_banner