Rahu Mercury Conjunction: 18 ವರ್ಷಗಳ ನಂತರ ರಾಹು ಬುಧನ ಸಂಯೋಗ; ಈಡೇರಲಿದೆ ಈ ರಾಶಿಯವರ ಮನದ ಬಯಕೆ
Rahu Mercury Conjunction: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆಯು ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಬಹಳ ವರ್ಷಗಳ ನಂತರ ಬುಧ ಹಾಗೂ ರಾಹು ಒಂದೇ ರಾಶಿಯಲ್ಲಿ ನೆಲೆಗೊಳ್ಳುತ್ತಿದ್ದು, ಇದರಿಂದ ಈ 3 ರಾಶಿ ಚಕ್ರದವರ ಆರ್ಥಿಕ ಪರಿಸ್ಥಿತಿ ಬಹಳ ಸುಧಾರಿಸುತ್ತದೆ. ಇವರ ಮನದ ಎಲ್ಲಾ ಬಯಕೆ ಈಡೇರಲಿದೆ.
(1 / 5)
2006 ರಲ್ಲಿ ಮೀನ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗವಿತ್ತು. ಸುಮಾರು 18 ವರ್ಷಗಳ ನಂತರ ಈ ಎರಡು ಗ್ರಹಗಳು ಮತ್ತೆ ಸಂಯೋಗವಾಗಲಿದೆ. ಮೀನ ರಾಶಿಯಲ್ಲಿ ಈ ಎರಡು ಗ್ರಹಗಳ ಸಂಯೋಗದಿಂದಾಗಿ, ಕೆಲವು ರಾಶಿಯವರಿಗೆ ಆರ್ಥಿಕವಾಗಿ ಸಾಕಷ್ಟು ಲಾಭವಾಗಲಿದೆ.
(2 / 5)
ಕುಂಭ: ಈ ರಾಶಿಯವರಿಗೆ ಬುಧ ರಾಹುವಿನ ಸಂಯೋಗದಿಂದ ಇದ್ದಕ್ಕಿದ್ದಂತೆ ಹಣದ ಹೊಳೆಯೇ ಹರಿದು ಬರುತ್ತದೆ. ಸಂಗಾತಿಯೊಂದಿಗೆ ನಿಮ್ಮ ಸಂಬಂಧವು ಬಹಳ ಉತ್ತಮವಾಗಿರುತ್ತದೆ. ಗಳಿಕೆ ಏರುತ್ತಲೇ ಇರುತ್ತದೆ. ನಿಮ್ಮ ಮನಸ್ಸಿನ ಬಹಳಷ್ಟು ಆಸೆ ಆಕಾಂಕ್ಷೆಗಳು ಈಡೇರುತ್ತದೆ.
(3 / 5)
ತುಲಾ: ನ್ಯಾಯಾಲಯದ ಪ್ರಕರಣಗಳಿಂದ ನಿಮಗೆ ಲಾಭವಾಗಲಿದೆ. ಕಾನೂನು ವಿಷಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಆರ್ಥಿಕವಾಗಿ ನೀವು ಮೊದಲಿಗಿಂತ ಹೆಚ್ಚು ಲಾಭ ಪಡೆಯುತ್ತೀರಿ. ಆರೋಗ್ಯ ಸುಧಾರಿಸಲಿದೆ. ಮನಸ್ಸಿನ ಎಲ್ಲಾ ಆಸೆಗಳು ಈಡೇರುತ್ತವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ.
(4 / 5)
ಕರ್ಕಾಟಕ: ರಾಹು ಮತ್ತು ಬುಧದ ಸಂಯೋಜನೆಯು ವಿವಿಧ ಅಂಶಗಳಲ್ಲಿ ಪ್ರಯೋಜನಗಳನ್ನು ತರುತ್ತದೆ. ಈ ಬಾರಿ ನಿಮ್ಮ ಅದೃಷ್ಟ ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ದೂರದ ಊರಿಗೆ ಪ್ರಯಾಣಿಸಲಿದ್ದೀರಿ. ವೃತ್ತಿಯಲ್ಲಿ ಬೆಳವಣಿಗೆಯಾಗುತ್ತದೆ. ಶುಭ ಸುದ್ದಿ ಕೇಳಲಿದ್ದೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೀರಿ.
ಇತರ ಗ್ಯಾಲರಿಗಳು