Rashtriya Seva Bharathi: ಕಾಸರಗೋಡಿನಲ್ಲಿ "ಸೇವಾಭಾರತಿ" ಮೂಲಕ ಜನೋಪಯೋಗಿ ಸೇವಾ ಕಾರ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashtriya Seva Bharathi: ಕಾಸರಗೋಡಿನಲ್ಲಿ "ಸೇವಾಭಾರತಿ" ಮೂಲಕ ಜನೋಪಯೋಗಿ ಸೇವಾ ಕಾರ್ಯ

Rashtriya Seva Bharathi: ಕಾಸರಗೋಡಿನಲ್ಲಿ "ಸೇವಾಭಾರತಿ" ಮೂಲಕ ಜನೋಪಯೋಗಿ ಸೇವಾ ಕಾರ್ಯ

  • ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಅಗತ್ಯಾನುಸಾರ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಸೇವಾ ಸಂಸ್ಥೆ ರಾಷ್ಟ್ರೀಯ ಸೇವಾ ಭಾರತಿ. ಕೇರಳದ ಕಾಸರಗೋಡು ಜಿಲ್ಲೆಯಲ್ಲೂ ಈ ಸಂಸ್ಥೆ ಸಕ್ರಿಯವಾಗಿದ್ದು, ಅನೇಕ ಜನೋಪಯೋಗಿ ಕೆಲಸಗಳ ಮೂಲಕ ಗುರುತಿಸಿಕೊಂಡಿದೆ. ಶನಿವಾರ ಕಾಸರಗೋಡು ಜನರಲ್‌ ಆಸ್ಪತ್ರೆಯ ಅಗತ್ಯವನ್ನು ಪೂರೈಸಿ ಗಮನಸೆಳೆದಿದೆ.

ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ತಂಡದ ನೇತೃತ್ವದಲ್ಲಿ ಅಭ್ಯುದಯ ಕೇಶವ ಕೃಪಾ ಸಂವರ್ಧನಾ ಸಮಿತಿ ಬೆಂಗಳೂರು ಮತ್ತು ಅಭಯ ವಿಶ್ವಸ್ಥ ಮಂಡಳಿ ಕಾಸರಗೋಡು ಸಹಯೋಗದೊಂದಿಗೆ ಶನಿವಾರ (ಜೂ.25) ಆಸ್ಪತ್ರೆಯ ಅಗತ್ಯದ 2 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.
icon

(1 / 5)

ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ತಂಡದ ನೇತೃತ್ವದಲ್ಲಿ ಅಭ್ಯುದಯ ಕೇಶವ ಕೃಪಾ ಸಂವರ್ಧನಾ ಸಮಿತಿ ಬೆಂಗಳೂರು ಮತ್ತು ಅಭಯ ವಿಶ್ವಸ್ಥ ಮಂಡಳಿ ಕಾಸರಗೋಡು ಸಹಯೋಗದೊಂದಿಗೆ ಶನಿವಾರ (ಜೂ.25) ಆಸ್ಪತ್ರೆಯ ಅಗತ್ಯದ 2 ಲಕ್ಷ ರೂಪಾಯಿ ಮೌಲ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಹಸ್ತಾಂತರಿಸಲಾಯಿತು.(RASHTRIYA SEVABHARATHI)

ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಕರ್ನಾಟಕ ಪ್ರಾಂತ ಸಂಯೋಜಕ ಚೆನ್ನಯ್ಯ ಸ್ವಾಮಿ ಮಾತನಾಡಿದರು. ಕಾಸರಗೋಡು ಜನರಲ್‌ ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ. ರಾಜಾರಾಮ್ ಕೆ ಕೆ ಅವರ ಅಧ್ಯಕ್ಷತೆ ವಹಿಸಿದ್ದರು. ಡಾ. ಜನಾರ್ಧನ್ ನಾಯ್ಕ್, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ  ಡಾ. ಕೃಷ್ಣ ನಾಯ್ಕ್ ಪಿ, ಐ ಎಂ ಎ ಅಧ್ಯಕ್ಷ ಡಾ. ಬಿ ನಾರಾಯಣ ನಾಯ್ಕ್, ನರ್ಸಿಂಗ್ ಸುಪರಿಂಟೆಂಡೆಂಟ್ ಮೇರಿ ಎ ಜೆ,, ರಾಷ್ಟ್ರೀಯ ಸೇವಾಭಾರತಿ ಪದಾಧಿಕಾರಿಗಳಾದ  ಗೋಪಾಲ್ ಚೆಟ್ಟಿಯಾರ್, ಚೆನ್ನಯ್ಯ ಸ್ವಾಮಿ, ಸುರೇಶ್ ಜಿ, ಸುನಿಲ್ ಕುದ್ರೆಪ್ಪಾಡಿ, ಕಮಲಾಕ್ಷ ಕೆ ಎನ್, ಹರೀಶ್ ಕುಮಾರ್ ಕೆ ಎಂ ಭಾಗವಹಿಸಿದರು. 
icon

(2 / 5)

ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೇವಾ ಭಾರತಿ ಕರ್ನಾಟಕ ಪ್ರಾಂತ ಸಂಯೋಜಕ ಚೆನ್ನಯ್ಯ ಸ್ವಾಮಿ ಮಾತನಾಡಿದರು. ಕಾಸರಗೋಡು ಜನರಲ್‌ ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ. ರಾಜಾರಾಮ್ ಕೆ ಕೆ ಅವರ ಅಧ್ಯಕ್ಷತೆ ವಹಿಸಿದ್ದರು. ಡಾ. ಜನಾರ್ಧನ್ ನಾಯ್ಕ್, ಸ್ಟಾಫ್ ಕೌನ್ಸಿಲ್ ಅಧ್ಯಕ್ಷ  ಡಾ. ಕೃಷ್ಣ ನಾಯ್ಕ್ ಪಿ, ಐ ಎಂ ಎ ಅಧ್ಯಕ್ಷ ಡಾ. ಬಿ ನಾರಾಯಣ ನಾಯ್ಕ್, ನರ್ಸಿಂಗ್ ಸುಪರಿಂಟೆಂಡೆಂಟ್ ಮೇರಿ ಎ ಜೆ,, ರಾಷ್ಟ್ರೀಯ ಸೇವಾಭಾರತಿ ಪದಾಧಿಕಾರಿಗಳಾದ  ಗೋಪಾಲ್ ಚೆಟ್ಟಿಯಾರ್, ಚೆನ್ನಯ್ಯ ಸ್ವಾಮಿ, ಸುರೇಶ್ ಜಿ, ಸುನಿಲ್ ಕುದ್ರೆಪ್ಪಾಡಿ, ಕಮಲಾಕ್ಷ ಕೆ ಎನ್, ಹರೀಶ್ ಕುಮಾರ್ ಕೆ ಎಂ ಭಾಗವಹಿಸಿದರು. (RASHTRIYA SEVABHARATHI)

ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅಗತ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಸ್ವೀಕರಿಸಿ ಕಾಸರಗೋಡು ಜನರಲ್ ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ. ರಾಜಾರಾಮ್ ಕೆ ಕೆ ಮಾತನಾಡಿದರು. 
icon

(3 / 5)

ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅಗತ್ಯದ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಸ್ವೀಕರಿಸಿ ಕಾಸರಗೋಡು ಜನರಲ್ ಆಸ್ಪತ್ರೆ ಸುಪರಿಂಟೆಂಡೆಂಟ್ ಡಾ. ರಾಜಾರಾಮ್ ಕೆ ಕೆ ಮಾತನಾಡಿದರು. 

ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ನಗರ ಪದಾಧಿಕಾರಿ ಕಮಲಾಕ್ಷ ಕೆ ಎನ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. 
icon

(4 / 5)

ರಾಷ್ಟ್ರೀಯ ಸೇವಾಭಾರತಿ ಕಾಸರಗೋಡು ನಗರ ಪದಾಧಿಕಾರಿ ಕಮಲಾಕ್ಷ ಕೆ ಎನ್ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು. (RASHTRIYA SEVABHARATHI)

ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಆಯೋಜಿಸಿದ್ದ ಕಿರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದ ಸಭಿಕರು. 
icon

(5 / 5)

ರಾಷ್ಟ್ರೀಯ ಸೇವಾ ಭಾರತಿ ಕಾಸರಗೋಡು ಆಯೋಜಿಸಿದ್ದ ಕಿರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದ ಸಭಿಕರು. (RASHTRIYA SEVABHARATHI)


ಇತರ ಗ್ಯಾಲರಿಗಳು