ಆಗದು ಎಂದು ಕೈ ಕಟ್ಟಿ ಕುಳಿತರೆ..; ಅಸಾಧ್ಯವನ್ನೂ ಸಾಧಿಸಿ ಪ್ಲೇಆಫ್ ಪ್ರವೇಶಿಸಿದ ಆರ್ಸಿಬಿ ವಿನೂತನ ದಾಖಲೆ
- RCB Reach to Playoff: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024 ರ ಪ್ಲೇಆಫ್ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ದಾಖಲಿಸಿದ ನಂತರ, ಆರ್ಸಿಬಿ ಸತತ ಆರು ಪಂದ್ಯಗಳನ್ನು ಗೆದ್ದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ.
- RCB Reach to Playoff: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2024 ರ ಪ್ಲೇಆಫ್ಗೆ ಪ್ರವೇಶಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಮೊದಲ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ದಾಖಲಿಸಿದ ನಂತರ, ಆರ್ಸಿಬಿ ಸತತ ಆರು ಪಂದ್ಯಗಳನ್ನು ಗೆದ್ದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ.
(1 / 8)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2024 ಪ್ಲೇಆಫ್ಗೆ ಗ್ರ್ಯಾಂಡ್ ಎಂಟ್ರಿ ನೀಡಿದೆ. ಮೇ 18ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ಬೆಂಗಳೂರು ತಂಡ ಹೊಸ ಇತಿಹಾಸ ನಿರ್ಮಿಸಿದೆ. ಪ್ಲೇಆಫ್ಗೆ ಅರ್ಹತೆ ಪಡೆಯುವ ಮೂಲಕ ನೂನತ ಮೈಲಿಗಲ್ಲು ನಿರ್ಮಿಸಿತು. ಚೆನ್ನೈ ವಿರುದ್ಧ ಬೆಂಗಳೂರು 27 ರನ್ಗಳ ಭರ್ಜರಿ ಜಯ ಸಾಧಿಸಿದೆ. ಪ್ಲೇ ಆಫ್ ಹಂತಕ್ಕೆ ಹೋಗಲು ಆರ್ಸಿಬಿ ಈ ಪಂದ್ಯವನ್ನು 18 ರನ್ಗಳಿಂದ ಗೆಲ್ಲಬೇಕಾಗಿತ್ತು.(PTI)
(2 / 8)
ಇಲ್ಲಿಯವರೆಗೆ ಬೇರೆ ಯಾವುದೇ ತಂಡವು ಮಾಡಲು ಸಾಧ್ಯವಾಗದ ಕೆಲಸವನ್ನು ಆರ್ಸಿಬಿ ಮಾಡಿದೆ. ಮೊದಲ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ದಾಖಲಿಸಿದ ನಂತರ ಪ್ಲೇಆಫ್ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಆರ್ಸಿಬಿ ಪಾತ್ರವಾಗಿದೆ.(AFP)
(3 / 8)
ಆರ್ಸಿಬಿಗೂ ಮೊದಲು ಯಾವುದೇ ತಂಡವು ಈ ಸಾಧನೆ ಮಾಡಿಲ್ಲ. ಆರ್ಸಿಬಿ ಲೀಗ್ ಹಂತದಲ್ಲಿ ಅರ್ಧದಷ್ಟು ಪಂದ್ಯಗಳನ್ನು ಸೋತು ನಂತರ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್ಗೆ ದಾಪುಗಾಲಿಟ್ಟಿದೆ.(ANI)
(4 / 8)
ಮೊದಲ 7 ಪಂದ್ಯಗಳಲ್ಲಿ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಕೇವಲ ಒಂದು ಗೆಲುವು ದಾಖಲಿಸಿತ್ತು, ಎಂಟನೇ ಪಂದ್ಯದಲ್ಲೂ ಸೋತಿತ್ತು, ಅಂದರೆ ಮೊದಲ 8 ಲೀಗ್ ಪಂದ್ಯಗಳಲ್ಲಿ ಕೇವಲ 1 ಪಂದ್ಯವನ್ನಷ್ಟೇ ಗೆದ್ದಿತ್ತು.(PTI)
(5 / 8)
ಎಂಟು ಪಂದ್ಯಗಳ ನಂತರ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಇದರೊಂದಿಗೆ ಪ್ಲೇಆಫ್ ರೇಸ್ನಿಂದ ಹೊರಗುಳಿಯುವ ಮೊದಲ ತಂಡ ಎಂದೇ ಭಾವಿಸಲಾಗಿತ್ತು. ಪ್ಲೇಆಫ್ ತಲುಪಲು ಇದ್ದಿದ್ದೇ ಕೇವಲ ಶೇ 1 ರಷ್ಟು. ಅಸಾಧ್ಯವನ್ನೂ ಸಾಧಿಸಿ ಈಗ ಆರ್ಸಿಬಿ ಪ್ಲೇಆಫ್ ತಲುಪಿದೆ, ಆರ್ಸಿಬಿ ತನ್ನ ಕೊನೆಯ 6 ಲೀಗ್ ಪಂದ್ಯಗಳಲ್ಲಿ ಸತತ ಗೆಲುವುಗಳನ್ನು ಗೆದ್ದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ.(IPL-X)
(6 / 8)
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರ್ಸಿಬಿ, 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಫಾಫ್ ಡು ಪ್ಲೆಸಿಸ್ (54), ವಿರಾಟ್ ಕೊಹ್ಲಿ (47), ರಜತ್ ಪಾಟೀದಾರ್ (41), ಕ್ಯಾಮರೂನ್ ಗ್ರೀನ್ (38*) ಉತ್ತಮ ಪ್ರದರ್ಶನ ನೀಡಿದರು.
(7 / 8)
ಗುರಿ ಬೆನ್ನಟ್ಟಿದ ಚೆನ್ನೈ 20 ಓವರ್ ಗಳಲ್ಲಿ 191 ರನ್ ಗಳಿಸಲಷ್ಟೇ ಶಕ್ತವಾಯಿತು. ರಚಿನ್ ರವೀಂದ್ರ 61 ರನ್ ಮತ್ತು ರವೀಂದ್ರ ಜಡೇಜಾ 42 ರನ್ ಗಳಿಸಿ ಪ್ರತಿರೋಧ ತೋರಿದರೂ ಗೆಲುವು ಸಾಧ್ಯವಾಗಲಿಲ್ಲ.(PTI)
ಇತರ ಗ್ಯಾಲರಿಗಳು