Chaturgraha Yoga: ಮಕರ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಗ; ಈ 3 ರಾಶಿಯವರ ಬಾಳಲ್ಲಿ ಸುರಿಯಲಿದೆ ಹಣದ ಸುರಿಮಳೆ
- ಮಕರ ರಾಶಿಯಲ್ಲಿ 4 ಗ್ರಹಗಳ ಸಂಯೋಗವಾಗಲಿದ್ದು, ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಣದ ಮಳೆ ಸುರಿಯಲಿದೆ. ಈ ರಾಶಿಯವರಿಗೆ ಧನಲಾಭದ ಜೊತೆಗೆ ಅದೃಷ್ಟವು ಹುಡುಕಿ ಬರಲಿದೆ. ಹಾಗಾದರೆ ಆ ರಾಶಿಯವರು ಯಾರು ನೋಡಿ.
- ಮಕರ ರಾಶಿಯಲ್ಲಿ 4 ಗ್ರಹಗಳ ಸಂಯೋಗವಾಗಲಿದ್ದು, ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಹಣದ ಮಳೆ ಸುರಿಯಲಿದೆ. ಈ ರಾಶಿಯವರಿಗೆ ಧನಲಾಭದ ಜೊತೆಗೆ ಅದೃಷ್ಟವು ಹುಡುಕಿ ಬರಲಿದೆ. ಹಾಗಾದರೆ ಆ ರಾಶಿಯವರು ಯಾರು ನೋಡಿ.
(1 / 5)
ಸೂರ್ಯ, ಶುಕ್ರ, ಮಂಗಳ ಮತ್ತು ಬುಧ ಒಂದೇ ರಾಶಿಯಲ್ಲಿ ಸಂಧಿಸಿದಾದ ಚತುರ್ಗ್ರಹ ಯೋಗ ಉಂಟಾಗುತ್ತದೆ. ಪ್ರಸ್ತುತ ಸೂರ್ಯ, ಬುಧ ಮತ್ತು ಮಂಗಳ ಮಕರ ರಾಶಿಯಲ್ಲಿ ಸಾಗುತ್ತಿವೆ. ಫೆಬ್ರವರಿ 12 ರಂದು ಶುಕ್ರನು ಈ ರಾಶಿಯನ್ನು ಪ್ರವೇಶಿಸುತ್ತಾನೆ. ಇದರ ಫಲವಾಗಿ ಚತುರ್ಗ್ರಹ ಯೋಗ ರೂಪುಗೊಳ್ಳಲಿದೆ. ಇದು ಅನೇಕ ರಾಶಿಗಳ ಮೇಲೆ ಹಣದ ಸುರಿಮಳೆ ಸುರಿಯುವಂತೆ ಮಾಡಲಿದ್ದು, ಈ ರಾಶಿಯವರ ಬದುಕನ್ನೇ ಬದಲಿಸಲಿದೆ. ಬಡತನದಲ್ಲೇ ಬದುಕು ಕಟ್ಟಿಕೊಂಡ ಅನೇಕರ ಜೀವನಕ್ಕೆ ಹೊಸ ತಿರುವು ಸಿಗಲಿದೆ.
(2 / 5)
ಚತುರ್ಗ್ರಹ ಯೋಗದಿಂದಾಗಿ ಮಕರ ರಾಶಿಯವರಿಗೆ ಸಂಪತ್ತು ಹೆಚ್ಚಲಿದೆ. ಧೈರ್ಯದಿಂದ ಕೆಲಸಗಳನ್ನು ಮಾಡುತ್ತಾ, ಶಿಸ್ತಿನಿಂದ ಮುಂದುವರಿಯಿರಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಪತಿ ಪತ್ನಿಯರ ಸಂಬಂಧ ಗಟ್ಟಿಯಾಗಲಿದೆ. ಸಂಸಾರದಲ್ಲಿ ಸುಖ-ಸಂತಸ-ಸಮೃದ್ಧಿ ತುಂಬಲಿದೆ. ವ್ಯಾಪಾರದಲ್ಲಿ ವೃದ್ಧಿಯಾಗಲಿದೆ.
(3 / 5)
ತುಲಾ ರಾಶಿಯ ಮೇಲೆ ಚತುರ್ಗ್ರಹ ಯೋಗದ ಪರಿಣಾಮವು ತುಂಬಾ ಧನಾತ್ಮಕವಾಗಿರುತ್ತದೆ. ಆಸ್ತಿ ಹೆಚ್ಚುತ್ತದೆ. ಆದಾಯ ಹೆಚ್ಚಲಿದೆ. ಹಠಾತ್ ಆರ್ಥಿಕ ಲಾಭ ಮತ್ತು ಹಣದ ಮಳೆ ಸುರಿಯಲಿದೆ.
(4 / 5)
ಕನ್ಯಾ ರಾಶಿಯವರು ವ್ಯಾಪಾರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಣಲಿದ್ದಾರೆ. ಮಕ್ಕಳು ಅಧ್ಯಯನದ ಜೊತೆ ಜೊತೆಯಲ್ಲೇ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಬರಬೇಕಿರುವ ಹಣ, ನೀವು ಕೊಟ್ಟ ಸಾಲಗಳು ವಾಪಸ್ ಬರುತ್ತವೆ. ನೀವು ಸರಿಯಾದ ಸಮಯದಲ್ಲಿ ಹಣವನ್ನು ಸ್ವೀಕರಿಸುತ್ತೀರಿ.
ಇತರ ಗ್ಯಾಲರಿಗಳು