Vastu Tips: ಮದುವೆಗೆ ಯಾವ ಹೂಗಳನ್ನು ಗಿಫ್ಟ್‌ ಕೊಡೋದು ಬೆಸ್ಟ್‌; ವಾಸ್ತುಶಾಸ್ತ್ರದ ಉತ್ತರ ಹೀಗಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vastu Tips: ಮದುವೆಗೆ ಯಾವ ಹೂಗಳನ್ನು ಗಿಫ್ಟ್‌ ಕೊಡೋದು ಬೆಸ್ಟ್‌; ವಾಸ್ತುಶಾಸ್ತ್ರದ ಉತ್ತರ ಹೀಗಿದೆ

Vastu Tips: ಮದುವೆಗೆ ಯಾವ ಹೂಗಳನ್ನು ಗಿಫ್ಟ್‌ ಕೊಡೋದು ಬೆಸ್ಟ್‌; ವಾಸ್ತುಶಾಸ್ತ್ರದ ಉತ್ತರ ಹೀಗಿದೆ

  • ಮದುವೆಗೆ ಹೋಗುವಾಗ ಮದುಮಕ್ಕಳಿಗೆ ಹೂವಿನ ಬೊಕೆ ತೆಗೆದುಕೊಂಡು ಹೋಗುವ ಅಭ್ಯಾಸ ನಮ್ಮೆಲ್ಲರಿಗೂ ಇದೆ. ಆದರೆ ಮದುಮಕ್ಕಳಿಗೆ ಕೊಡುವಾಗ ಎಲ್ಲಾ ಬಗೆಯ ಹೂಗಳು ಹೊಂದುವುದಿಲ್ಲವಂತೆ. ವಾಸ್ತುಶಾಸ್ತ್ರದ ಪ್ರಕಾರ ಮದುವೆಗೆ ಈ ಕೆಲವು ಹೂಗಳನ್ನು ಮಾತ್ರ ಗಿಫ್ಟ್‌ ನೀಡಬೇಕಂತೆ. ಹಾಗಾದ್ರೆ ಆ ಹೂಗಳು ಯಾವುವು ನೋಡಿ.

ಮದುವೆಗೆ ಹೋಗುವಾಗ ಖಾಲಿ ಕೈಯಲ್ಲಿ ಹೋಗುವುದಕ್ಕಿಂತ ಏನಾದ್ರೂ ಗಿಫ್ಟ್‌ ಕೊಟ್ರೆ ಚೆನ್ನಾಗಿರುತ್ತೆ ಅಂತ ಅನ್ನಿಸೋದು ಸಹಜ. ಮದುಮಕ್ಕಳಿಗೆ ಸಿಂಪಲ್‌ ಕಡಿಮೆ ಖರ್ಚಲ್ಲಿ ಗಿಫ್ಟ್‌ ಕೊಡಬೇಕು ಅಂದುಕೊಂಡಾಗ ನೆನಪಿಗೆ ಬರೋದು ಹೂವು ಹಾಗೂ ಹೂವಿನ ಬೊಕೆಗಳು. ಅಂದವಾಗಿ ಅರಳಿರುವ ಹೂಗಳು ಮದುಮಕ್ಕಳಿಗೆ ಖುಷಿ ನೀಡುವುದು ಸಹಜ. ಆದರೆ ಮದುವೆ ಹೂಗಳನ್ನು ಉಡುಗೊರೆ ಕೊಡಲು ವಾಸ್ತುಶಾಸ್ತ್ರದಲ್ಲಿ ಕೆಲವೊಂದು ನಿಯಮಗಳಿವೆ. ಹಾಗಾದ್ರೆ ಮದುವೆಗೆ ಯಾವ ಹೂ ಗಿಫ್ಟ್‌ ಕೊಡೋದು ಬೆಸ್ಟ್‌, ವಾಸ್ತುತಜ್ಞರ ಸಲಹೆ ಇಲ್ಲಿದೆ ನೋಡಿ. 
icon

(1 / 6)

ಗುಲಾಬಿಗಳ ಹೂ ಗುಚ್ಛ: ಗುಲಾಬಿ ಹೂಗಳು ಪ್ರೀತಿಯ ಸಂಕೇತವಾಗಿದೆ. ಇದು ಪ್ರೇಮ-ಪ್ರಣಯದೊಂದಿಗೆ ಸಂಬಂಧ ಹೊಂದಿವೆ. ಜ್ಯೋತಿಷ್ಯದ ಪ್ರಕಾರ ಈ ಹೂ ಭಗವಾನ್‌ ವಿಷ್ಣು ಹಾಗೂ ಲಕ್ಷ್ಮೀದೇವಿಗೆ ಸಂಬಂಧಿಸಿದ್ದು. ಈ ಹೂವನ್ನು ಯಾರಿಗಾದ್ರೂ ಉಡುಗೊರೆಯಾಗಿ ನೀಡುವುದರಿಂದ ಪರಸ್ಪರ ಸಂಬಂಧ ಬಲಗೊಳ್ಳುತ್ತದೆ. ಮದುವೆಯಾಗುವ ವ್ಯಕ್ತಿಯ ಜಾತಕದಲ್ಲಿ ಶುಕ್ರ ಅಥವಾ ಮಂಗಳ ಗ್ರಹ ದುರ್ಬಲವಾಗಿದ್ದರೆ, ಅಂತಹ ಜೋಡಿಗೆ ಗುಲಾಬಿ ಹೂವನ್ನು ಮಾತ್ರ ಉಡುಗೊರೆಯಾಗಿ ನೀಡಬೇಕು. 
icon

(2 / 6)

ರಾನುಕುಲಸ್‌ ಅಥವಾ ಬಟರ್‌ಕಪ್‌: ನೋಡಲು ಆಕರ್ಷಕವಾಗಿ ಗಮನ ಸೆಳೆಯುವಂತಿರುವ ಬಟರ್‌ಕಪ್‌ ಹೂಗಳನ್ನು ಮದುವೆಯಲ್ಲಿ ಉಡುಗೊರೆಯ ನೀಡುವುದು ತುಂಬಾ ಒಳ್ಳೆಯದು. ಮಿಥುನ ರಾಶಿಯವರು ಮದುಮಗ ಅಥವಾ ಮದುಮಗಳಾಗಿದ್ದರೆ ಅವರಿಗೆ ಬಿಳಿ ಬಣ್ಣದ ಬಟರ್‌ಕಪ್‌ ಹೂಗಳನ್ನು ಮಾತ್ರ ನೀಡಬೇಕು. ಈ ಹೂವನ್ನು ಶಾಂತಿ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ಮಾನಸಿಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಅಲ್ಲದೆ ಅದು ಮಂಗಳಕರ ಫಲಿತಾಂಶವನ್ನು ನೀಡುತ್ತದೆ. 
icon

(3 / 6)

ಲಿಲ್ಲಿ ಹೂಗಳ ಪುಷ್ಪಗುಚ್ಛ: ನವವಿವಾಹಿತರಿಗೆ ಬಿಳಿ ಹಾಗೂ ಕಿತ್ತಳೆ ಬಣ್ಣದ ಲಿಲ್ಲಿ ಹೂಗಳ ಪುಷ್ಪ ಗುಚ್ಛವನ್ನು ಉಡುಗೊರೆಯಾಗಿ ನೀಡಬಹುದು. ಇದು ಚಂದ್ರ ದೋಷದ ನಿವಾರಣೆಗೆ ಸಹಕಾರಿ. ಜಾತಕದಲ್ಲಿ ಸೂರ್ಯನ ದೋಷ ಹೊಂದಿರುವವರಿಗೆ ಕಿತ್ತಳೆ ಬಣ್ಣದ ಲಿಲ್ಲಿಗಳನ್ನು ನೀಡಬೇಕು. ಇದರಿಂದ ಅವರ ಎಲ್ಲಾ ಆಸೆಗಳು ಪೂರೈಸುತ್ತವೆ. 
icon

(4 / 6)

ಸೂರ್ಯಕಾಂತಿ ಹೂಗಳ ಗುಚ್ಛ: ಸೂರ್ಯಕಾಂತಿಯು ಧನಾತ್ಮಕ ಶಕ್ತಿ ಹಾಗೂ ಹೊಳಪನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ. ಅವುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಗ್ರಹಗಳ ದೋಷವಿದ್ದರೆ ಪರಿಹಾರವಾಗುತ್ತದೆ. ಇದರಿಂದ ಗೌರವವೂ ಹೆಚ್ಚುತ್ತದೆ. 
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು