Mysore Banana Festival: ಮೈಸೂರಿನಲ್ಲಿ ಆರಂಭಗೊಂಡಿದೆ ಬಗೆಬಗೆಯ ಬಾಳೆಗಳ ಮೂರು ದಿನಗಳ ಹಬ್ಬ; ಪುಟ್ಟ, ಕೆಂಪು, ಸಹಸ್ರ ಬಾಳೆ ನೋಡಬನ್ನಿ
- Mysore Banana Fest: ಬಾಳೆ ಹಣ್ಣು ತಿನ್ನಲು ರುಚಿ. ಅದರಲ್ಲೂ ಬಗೆಬಗೆಯ ಬಾಳೆಹಣ್ಣುಗಳ ಸವಿದವರೇ ಬಲ್ಲವರು. ಮೈಸೂರಿನ ನಂಜಬಹದ್ದೂರು ಛತ್ರದಲ್ಲಿ ಸಹಜ ಸಮೃದ್ದ ಸಂಸ್ಥೆಯು ಇಂದಿನಿಂದ ( ನವೆಂಬರ್ 22) ಮೂರು ದಿನ ಬಾಳೆ ಹಬ್ಬ ಆಯೋಜಿಸಿದೆ.
- Mysore Banana Fest: ಬಾಳೆ ಹಣ್ಣು ತಿನ್ನಲು ರುಚಿ. ಅದರಲ್ಲೂ ಬಗೆಬಗೆಯ ಬಾಳೆಹಣ್ಣುಗಳ ಸವಿದವರೇ ಬಲ್ಲವರು. ಮೈಸೂರಿನ ನಂಜಬಹದ್ದೂರು ಛತ್ರದಲ್ಲಿ ಸಹಜ ಸಮೃದ್ದ ಸಂಸ್ಥೆಯು ಇಂದಿನಿಂದ ( ನವೆಂಬರ್ 22) ಮೂರು ದಿನ ಬಾಳೆ ಹಬ್ಬ ಆಯೋಜಿಸಿದೆ.
(1 / 8)
ಮೈಸೂರಿನಲ್ಲಿ ಆರಂಭಗೊಂಡಿರುವ ಬಾಳೆ ಹಬ್ಬಕ್ಕೆ ಬಗೆಬಗೆಯ ಬಾಳೆಗಳು ಬಂದಿವೆ.ಸಹಸ್ರಬಾಳೆ ಇಂಡೋನೇಶಿಯಾ,ಮಲೇಷಿಯಾ ಮತ್ತು ಫಿಲಿಫೈನ್ಸ್ ದೇಶಗಳಲ್ಲಿ ಕಾಣಸಿಗುವ ಬಾಳೆ ತಳಿ. ಇದರ ಗೊನೆ 8 ಅಡಿ ಮೀರಿ ಬೆಳೆಯುವುದು. ನೆಲಮುಟ್ಟುವ ಇದರ ಗೊನೆಗಳನ್ನು ನೋಡುವುದೇ ಒಂದು ಚೆಂದ.
(2 / 8)
ತಮಿಳುನಾಡಿನ ಈರೋಡಿನ ಸೇಂದಿಲ್ ಕುಮಾರ್ ಮುತ್ತುಸ್ವಾಮಿ ಬಾಳೆ ಪ್ರಿಯರು. 100 ಕ್ಕೂ ಹೆಚ್ಚಿನ ಬಾಳೆ ತಳಿಗಳ ಸಂಗ್ರಹ ಇವರಲ್ಲಿದೆ. ಬಾಳೆ ಮೇಳಕ್ಕೆ 40 ತಳಿ ಬಾಳೆ ಗೊನೆ ಮತ್ತು ಕಂದುಗಳ ಜೊತೆ ಇವರು ಬಂದಿದ್ದಾರೆ.
(3 / 8)
ಬಾಳೆಗಳಲ್ಲಿ ಹಲವು ಬಗೆ. ಅದರಲ್ಲಿ ಪುಟ್ಟ ಬಾಳೆಗಳೂ ಸಾಕಷ್ಟಿವೆ. ಹಲವು ಭಾಗಗಳಿಂದ ಬಾಳೆಗಳನ್ನು ಮೈಸೂರು ಬಾಳೆ ಹಬ್ಬಕ್ಕೆ ತರಲಾಗಿದೆ.
(4 / 8)
ವಿನೋದ್ ನಾಯರ್. ಕೇರಳದ ತಿರುವನಂತಪುರಂನವರು. ದೇಶ ವಿದೇಶಗಳನ್ನು ಸುತ್ತಿ ತಂದ 550 ಬಾಳೆ ತಳಿಗಳು ಇವರ ಸಂಗ್ರಹದಲ್ಲಿವೆ. ಇವರ ಬಳಿ ಇರದ ಬಾಳೆ ತಳಿಯೇ ಇಲ್ಲ. ಜಾವದ ನೀಲಿ ಬಾಳೆ, ಹವಾಯಿಯ ಪಟ್ಟೆ ಬಾಳೆ, ಜಾಂಜೀಬಾರಿನ ಮೊಳಕೈ ಉದ್ದದ ಬಾಳೆ, ಫಿಲಿಫೈನ್ಸನ ಸಹಸ್ರ ಬಾಳೆ.....ಹೀಗೆ ಅಪರೂಪದ ಬಾಳೆಗಳೆಲ್ಲಾಇವೆ. ಹಬ್ಬದಲ್ಲಿ ಇವರೂ ಆಕರ್ಷಣೆಯೇ.
(5 / 8)
ಬಾಳೆಯ ಲೋಕ ಅದ್ಭುತ. ಬಾಳೆ ಗಿಡದ ಹಣ್ಣು, ಕಾಯಿ,ಎಲೆ, ಕಾಂಡ,ಬೇರು,ನಾರು ಎಲ್ಲವೂ ಬಳಕೆಗೆ ಬರುತ್ತದೆ. ಮನೆಯ ಮುಂದೆ ಬಾಳೆಯ ಗಿಡವೊಂದಿದ್ದರೆ ಅದರ ಚೆಂದವೇ ಬೇರೆ. ಇದರಲ್ಲಿ ಅತೀ ಪುಟ್ಟಬಾಳೆ ಮೈಸೂರು ಮೇಳದ ಆಕರ್ಷಕ.
(6 / 8)
ಶಿರಸಿಯ ಪ್ರಸಾದ್ ರಾಮ ಹೆಗಡೆ ಬಾಳೆಯ140 ಕ್ಕೂ ಹೆಚ್ಚಿನ ತಳಿಗಳನ್ನು ಸಂರಕ್ಷಿಸಿದ್ದಾರೆ. ಕೆಂಪು ಎಲೆಯ ಬಾಳೆ, ಊಟದ ಎಲೆಗೆ ಮಾತ್ರ ಬಳಕೆಯಾಗುವ ಪ್ಲಾಸ್ಟಿಕ್ ಬಾಳೆ ಮೊದಲಾದ ತಳಿಗಳ ಜೊತೆ ಮೈಸೂರಿನ ಬಾಳೆ ಮೇಳಕ್ಕೆ ಬಂದಿದ್ದಾರೆ.
(7 / 8)
'ಬಾಳೆ ಹಬ್ಬ' ಅದ್ದೂರಿಯಾಗಿ ಆಚರಿಸಲು ನಮಗೆ ಕಾರ್ಯಕರ್ತರು ಬೇಕು. ಹಣಕಾಸು ಬೇಕು ಮತ್ತು ಪ್ರದರ್ಶನಕ್ಕೆ ಬಾಳೆಯ ಉತ್ಪನ್ನಗಳು ಬೇಕು. ಮುಖ್ಯವಾಗಿ ನೀವು ಜೊತೆಗಿರಬೇಕು ಎನ್ನುವುದು ಸಹಜ ಸಮೃದ್ದ ಸಂಸ್ಥೆಯ ಮನವಿ.
ಇತರ ಗ್ಯಾಲರಿಗಳು