ಭಾರತ ವಿರುದ್ಧದ ಸರಣಿಗೆ ಮುನ್ನ ಶ್ರೀಲಂಕಾ ತಂಡದ ಮಧ್ಯಂತರ ಕೋಚ್ ಆಗಿ ಸನತ್ ಜಯಸೂರ್ಯ ನೇಮಕ
- ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ನೇಮಕಗೊಂಡಿದ್ದಾರೆ. ಭಾರತ ವಿರುದ್ಧದ ಸರಣಿಗೂ ಮುನ್ನ ಜಯಸೂರ್ಯ ಅವರನ್ನು ಮಧ್ಯಂತರ ಅವಧಿಗೆ ಕೋಚ್ ಆಗಿ ನೇಮಿಸಲಾಗಿದೆ.
- ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ನೇಮಕಗೊಂಡಿದ್ದಾರೆ. ಭಾರತ ವಿರುದ್ಧದ ಸರಣಿಗೂ ಮುನ್ನ ಜಯಸೂರ್ಯ ಅವರನ್ನು ಮಧ್ಯಂತರ ಅವಧಿಗೆ ಕೋಚ್ ಆಗಿ ನೇಮಿಸಲಾಗಿದೆ.
(1 / 5)
ಶ್ರೀಲಂಕಾ ಕ್ರಿಕೆಟ್ ತಂಡದ ಹಂಗಾಮಿ ಮುಖ್ಯ ಕೋಚ್ ಆಗಿ ಸನತ್ ಜಯಸೂರ್ಯ ನೇಮಕಗೊಂಡಿದ್ದಾರೆ. 55 ವರ್ಷದ ಶ್ರೀಲಂಕಾದ ಮಾಜಿ ನಾಯಕನಿಗೆ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗಳ ಉಸ್ತುವಾರಿ ವಹಿಸಲಾಗಿದೆ. ಜಯಸೂರ್ಯ ಕಳೆದ ತಿಂಗಳು ಶ್ರೀಲಂಕಾದ ಟಿ20 ವಿಶ್ವಕಪ್ ತಂಡದ ಸಲಹೆಗಾರರಾಗಿ ಭಾಗವಾಗಿದ್ದರು.
(2 / 5)
ವಿಶ್ವಕಪ್ ಬಳಿಕ ಮುಖ್ಯ ಕೋಚ್ ಕ್ರಿಸ್ ಸಿಲ್ವರ್ವುಡ್ ಹಾಗೂ ಮತ್ತೊಬ್ಬ ಮಾರ್ಗದರ್ಶಕ ಮಹೇಲಾ ಜಯವರ್ಧನೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಜಯಸೂರ್ಯ ಅವರನ್ನು ಮಧ್ಯಂತರ ಅವಧಿಗೆ ಕೋಚ್ ಆಗಿ ನೇಮಿಸಲಾಗಿದೆ. ಜಯಸೂರ್ಯ ಈ ಹಿಂದೆ ಎರಡು ಅವಧಿಗೆ ಮುಖ್ಯ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದರು. ಅವರು 2021ರಲ್ಲಿ ಆಸ್ಟ್ರೇಲಿಯಾದ ಮೂರನೇ ಹಂತದ ಕ್ಲಬ್ ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ತರಬೇತುದಾರರಾಗಿದ್ದರು.
(3 / 5)
2023ರ ಏಕದಿನ ವಿಶ್ವಕಪ್ ಹಾಗೂ 2024ರ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಶ್ರೀಲಂಕಾ ತಂಡ ಹೊರಬಿದ್ದಿತ್ತು. ಏಕದಿನ ವಿಶ್ವಕಪ್ ವೈಫಲ್ಯದಿಂದಾಗಿ 1996ರ ವಿಶ್ವ ಚಾಂಪಿಯನ್ಸ್ ಮುಂದಿನ ವರ್ಷದ ಚಾಂಪಿಯನ್ಸ್ ಟ್ರೋಫಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅದರ ಬೆನ್ನಲ್ಲೇ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಲಂಕಾ ತಂಡ ಮತ್ತೊಮ್ಮೆ ಗುಂಪು ಹಂತದಿಂದ ಹೊರಬಿದ್ದಿತು.
(4 / 5)
ಸದ್ಯ ಈ ವರೆಗಿನ ಎಲ್ಲಾ ವೈಫಲ್ಯಗಳನ್ನು ಬದಿಗಿಟ್ಟು, ಶ್ರೀಲಂಕಾ ಹೊಸ ಯಶಸ್ಸನ್ನು ಎದುರು ನೋಡುತ್ತಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ತವರಿನಲ್ಲಿ ನಡೆಯಲಿರುವ ಭಾರತ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಆಡಲಿದೆ. ಮೂರು ಪಂದ್ಯಗಳ ಟಿ20 ಸರಣಿ ಜುಲೈ 27ರಂದು ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್ 7ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಇತರ ಗ್ಯಾಲರಿಗಳು