ಕನ್ನಡ ಸುದ್ದಿ  /  Photo Gallery  /  Sandalwood News Actor Rakshit Shetty Visits Ayodhya Sriram Mandir Shared Special Post And Photos Here Mnk

‘ರಾಮನ ಕಣ್ಣಿನ ತೇಜಸ್ಸು ಅಗಾಧ, ಅಮೋಘ’; ಅಯೋಧ್ಯೆ ಶ್ರೀರಾಮನ ಸನ್ನಿಧಾನದಲ್ಲಿ ರಕ್ಷಿತ್‌ ಶೆಟ್ಟಿ PHOTOS

  • ನಟ ರಕ್ಷಿತ್‌ ಶೆಟ್ಟಿ ಬರೀ ಓರ್ವ ನಟ, ನಿರ್ದೇಶಕ, ನಿರ್ಮಾಪಕನಲ್ಲ. ಅದರಾಚೆಗೆ ಅವರಲ್ಲೊಂದು ದೈವಿಕ ಮನಸ್ಸಿದೆ. ಅಧ್ಯಾತ್ಮ, ದೇವರು, ಗುಂಡಿ ಗುಂಡಾರ.. ಹೀಗೆ ಈ ವಿಚಾರದಲ್ಲಿ ವಿಶೇಷ ಆಸಕ್ತಿ ಉಳ್ಳವರು. ಆಗಾಗ ಭೂತಕೋಲದಲ್ಲಿ ಸೇರಿ ತುಳುನಾಡಿನ ಆಚರಣೆಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ಇದೀಗ ಇದೇ ರಕ್ಷಿತ್‌ ಶೆಟ್ಟಿ, ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ಸದ್ದಿಲ್ಲದೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆಪ್ತರ ಜತೆಗೆ ತೆರಳಿ ಸೋಷಿಯಲ್‌ ಮೀಡಿಯಾದಲ್ಲಿ ರಾಮನ ಸನ್ನಿಧಾನದಲ್ಲಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ವಿಶೇಷ ಬರಹವೊಂದನ್ನು ಬರೆದುಕೊಂಡಿದ್ದಾರೆ. 
icon

(1 / 11)

ನಟ ರಕ್ಷಿತ್‌ ಶೆಟ್ಟಿ ಸದ್ದಿಲ್ಲದೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಆಪ್ತರ ಜತೆಗೆ ತೆರಳಿ ಸೋಷಿಯಲ್‌ ಮೀಡಿಯಾದಲ್ಲಿ ರಾಮನ ಸನ್ನಿಧಾನದಲ್ಲಿನ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ವಿಶೇಷ ಬರಹವೊಂದನ್ನು ಬರೆದುಕೊಂಡಿದ್ದಾರೆ. (Instagram/ Rakshit Shetty)

"ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ದಿನದಿಂದಲೂ ರಾಮನನ್ನು ನೇರವಾಗಿ ನೋಡುವ ಹಂಬಲ ನನ್ನಲ್ಲಿ ಹೆಚ್ಚಾಗಿತ್ತು. ರಾಮನ ಕಣ್ಣುಗಳು ನಿಜವೆಂದು ನಾನು ಕಂಡುಕೊಂಡಿದ್ದೇನೆ. ಏಕೆಂದರೆ ಅವು ಆ ಮಟ್ಟಿಗೆ ನೈಜವಾಗಿವೆ. ಹಾಗಾಗಿ ನನ್ನ ಫೋನ್‌ನಲ್ಲಿಯೇ ಆತನ ಕಣ್ಣುಗಳನ್ನೇ ಎಷ್ಟೋ ಝೂಮ್‌ ಮಾಡಿ ಮಾಡಿ ನೋಡಿದ್ದೇನೆ"
icon

(2 / 11)

"ಆ ಕಣ್ಣುಗಳಲ್ಲಿ ನೈಜತೆಯ ಬಿಂಬ ಎದ್ದು ಕಾಣಿಸಲು ಅದರ ಶಿಲ್ಪಿಯ ಕೈಚಳಕವೂ ಅಗಾಧವಾದುದು. ಕಣ್ಣಿನ ಬಿಳಿ ಭಾಗದ ಕೆತ್ತನೆಗೆ ಕೊಂಚ ಭಿನ್ನ ಕುಸುರಿಯನ್ನೇ ಬಳಸಲಾಗಿದೆ. ಏಕೆಂದರೆ, ಅಷ್ಟು ಸುಲಭಕ್ಕೆ ಆ ನೈಜತೆ ತೇಜಸ್ಸು ಅಲ್ಲಿ ಕಾಣಿಸದು" ಎಂದಿದ್ದಾರೆ.  
icon

(3 / 11)

"ಇದೀಗ ನಾನು ರಾಮನನ್ನು ತುಂಬ ಹತ್ತಿರದಿಂದಲೇ ಕಣ್ತುಂಬಿಕೊಂಡೆ. ನಿಜಕ್ಕೂ ನಾನು ಅದೃಷ್ಟವಂತ ಎಂದೆನಿಸಿತು. ನಾನು ಸರಿ ಸುಮಾರು ಅರ್ಧ ಗಂಟೆಯಷ್ಟೊತ್ತು ಶ್ರೀರಾಮನ ಮುಂದೆಯೇ ಕುಳಿತುಕೊಂಡೆ. ಅವನನ್ನೇ ದಿಟ್ಟಿಸುತ್ತ ಆರಾಧಿಸುತ್ತ ಕುಳಿತೆ."
icon

(4 / 11)

"ನನ್ನ ಜೀವನದಲ್ಲಿ ಯಾವ ವಿಗ್ರಹದ ಮುಂದೆಯೂ ಇಷ್ಟೊತ್ತು ಕೂತವನಲ್ಲ. ಆದರೆ, ಇಲ್ಲಿ ಬೇರೆಯ ದೈವಿಭಾವ ನನ್ನೊಳಗೆ ಮೂಡಿದೆ, ಸಾಮಾನ್ಯವಾಗಿ ನಾನು ಎಲ್ಲಾ ವಿಗ್ರಹಗಳ ಕೆಲಸವನ್ನು ಮೆಚ್ಚುತ್ತೇನೆ. ಆದರೆ  ಶ್ರೀರಾಮನ ಮುಂದೆ ಕುಳಿತಾದ ಆದ ಅನುಭವವೇ ವಿಭಿನ್ನವಾಗಿದೆ. ಪ್ರಾಯಶಃ ರಾಮನೇ ಇದನ್ನೆಲ್ಲ ನಮ್ಮಿಂದ ಮಾಡಿಸಿದ್ದಿರಬೇಕು" 
icon

(5 / 11)

"ಶ್ರೀರಾಮ ಕೇವಲ ದೇವರಾಗಿ, ಪೂಜಿಸುವ ವಿಗ್ರಹವಾಗಿ ಕಾಣಲಿಲ್ಲ. ಆತ ಒಂದು ವಿಶೇಷ ದೈವಿಕ ಕಲೆಯಂತೆ ಕಂಡ. ಈ ವಿಚಾರದಲ್ಲಿ ಮೂರ್ತಿ ನಿರ್ಮಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಜೀವಂತ ದಂತಕಥೆಯಾಗಿ ಉಳಿದಿದ್ದಾರೆ. ತಲೆ ತಲೆಮಾರುಗಳಿಗೂ ಅವರು ನೆನಪಿನಲ್ಲಿ ಉಳಿಯುತ್ತಾರೆ"
icon

(6 / 11)

"ನಾನು ಯೋಗಿರಾಜ್‌ ಅವರ ಈ ದೈವಿಕ ಕೆಲಸವನ್ನು ನೋಡಿದಾಗ, ಅವರನ್ನು ಭೇಟಿ ಮಾಡಿ ನಮ್ಮ ಆರಾಧ್ಯ ದೈವ ರಾಮನನ್ನು ಕೆತ್ತಿದ ಬಗೆ ಮತ್ತವರ ಅನುಭವದ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ. ಜೈ ಸಿಯಾ ರಾಮ್, ಜೈ ಶ್ರೀ ರಾಮ್" ಎಂದಿದ್ದಾರೆ 
icon

(7 / 11)

"ಲಾಕ್‌ಡೌನ್ ಸಮಯದಲ್ಲಿ, 504 ಚಂದ್ರನ ಪರಿಭ್ರಮಣೆಯನ್ನು ಲೆಕ್ಕಹಾಕಿ ಇಟ್ಟಿದ್ದೆ. ಆದರೆ, ದಿನಕಳೆದಂತೆ, ನಾನು ಆ ದಿನಾಂಕವನ್ನು ಸಂಪೂರ್ಣವಾಗಿ ಮರೆತಿದ್ದೆ. ಅದಾದ ಬಳಿಕ ಕಾಕತಾಳೀಯವೆಂಬಂತೆ, ಅದೇ ದಿನ ನಾನು ಕೃಷ್ಣ ಪಕ್ಷ ದಶಮಿಯಂದು ಪ್ರಯಾಗ್‌ರಾಜ್‌ನಲ್ಲಿದ್ದೆ"
icon

(8 / 11)

"ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಾ ಕಾಶಿಗೆ ಭೇಟಿ ನೀಡಿದ್ದೆ. ಮರುದಿನ, ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಉತ್ಸವ ಮೂರ್ತಿಯ ಮುಂದೆ ಕೂತು ನನ್ನ ಭವಿಷ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಸಂಕಲ್ಪ ಮಾಡಿದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ"
icon

(9 / 11)

 "ಆವತ್ತೇ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡುವುದು ಕೂಡ ಒಂದು ಸುಂದರ ಅನುಭವ. ಅಲ್ಲಿನ ಟ್ರಸ್ಟಿಗಳಿಂದಲೂ ಒಳ್ಳೆಯ ಸ್ವಾಗತ ಸಿಕ್ಕಿತು. ಈ ಅನುಭವಕ್ಕಾಗಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಮಹೇಶ್ ಠಾಕೂರ್ ಅವರಿಗೆ ಧನ್ಯವಾದಗಳು"
icon

(10 / 11)

"ಈ ಸುಂದರ ಪ್ರವಾಸದಲ್ಲಿ ನನ್ನ ಜೊತೆಗಿದ್ದ ನನ್ನ ಸಹೋದರ ರಂಜಿತ್, ಸೋದರ ಸಂಬಂಧಿ ಶ್ರೀನಿಶ್ ಮತ್ತು ನನ್ನ ಸ್ನೇಹಿತರಾದ ಸಂದೇಶ್ ಅಣ್ಣ ಮತ್ತು ದೇವಿ ಚರಣ್ ಕಾವಾ ಅವರಿಗೂ ಧನ್ಯವಾದಗಳು. ಇದು ನಿಜವಾಗಿಯೂ ವಿಶೇಷ ಕ್ಷಣ. ಜೈ ಆಂಜನೇಯ... ಜೈ ಶ್ರೀ ರಾಮ್" ಎಂದು ಬರೆದುಕೊಂಡಿದ್ದಾರೆ ರಕ್ಷಿತ್‌ ಶೆಟ್ಟಿ. 
icon

(11 / 11)

IPL_Entry_Point

ಇತರ ಗ್ಯಾಲರಿಗಳು