ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rishab Shetty: ರಿಷಬ್‌ ಶೆಟ್ಟಿ ಮಗಳು ರಾಧ್ಯಾಳಿಗೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ; ಕಾಂತಾರ ಅಪ್‌ಡೇಟ್‌ ನೀಡಿ ಅಂದ್ರು ಫ್ಯಾನ್ಸ್‌

Rishab Shetty: ರಿಷಬ್‌ ಶೆಟ್ಟಿ ಮಗಳು ರಾಧ್ಯಾಳಿಗೆ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ; ಕಾಂತಾರ ಅಪ್‌ಡೇಟ್‌ ನೀಡಿ ಅಂದ್ರು ಫ್ಯಾನ್ಸ್‌

  • ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮಗಳಿಗೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರ ಅಭ್ಯಾಸ ನಡೆಸಲಾಗಿದೆ. ಈ ಸುಂದರ ಕ್ಷಣಗಳ ಫೋಟೋಗಳನ್ನು ರಿಷಬ್‌ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರಿನ ಶಾರದಾ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ರಿಷಬ್‌ ಶೆಟ್ಟಿ ತಮ್ಮ ಮಗಳಿಗೆ ಅಕ್ಷರಾಭ್ಯಾಸ ಮಾಡಿಸಿದ್ದಾರೆ.

ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮಗಳಿಗೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರ ಅಭ್ಯಾಸ ನಡೆಸಲಾಗಿದೆ. ಈ ಸುಂದರ ಕ್ಷಣಗಳ ಫೋಟೋಗಳನ್ನು ರಿಷಬ್‌ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
icon

(1 / 11)

ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಯ ಎರಡನೇ ಮಗು ರಾಧ್ಯಾಳಿಗೆ ಎರಡು ವರ್ಷ ಕಳೆದಿದೆ. ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ.
icon

(2 / 11)

ಪುಟ್ಟ ಮಕ್ಕಳಿಗೆ ಶಾರದಾಂಬೆಯ ಸನ್ನಿಧಿಯಲ್ಲಿ ಅಥವಾ ದೇವಾಲಯಗಳಲ್ಲಿ ಅಕ್ಷರಾಭ್ಯಾಸ ನಡೆಸಲಾಗುತ್ತದೆ. ಶಾಲೆಗಳಲ್ಲಿ ನಡೆಯುವ ಶಾರದಾಪೂಜಾ ಕಾರ್ಯಕ್ರಮಗಳಲ್ಲಿಯೂ ಅಕ್ಷರಾಭ್ಯಾಸ ನಡೆಸಲಾಗುತ್ತದೆ. ಅಕ್ಷಿ ಮೇಲೆ ಅಕ್ಷರ ಬರೆಯುವ ಕ್ರಮವಿದೆ. 
icon

(3 / 11)

ಇದೀಗ ರಿಷಬ್‌ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ತಮ್ಮ ಮುದ್ದಿನ ಮಗಳು ರಾಧ್ಯಾಳಿಗೆ ಅಕ್ಷರಾಭ್ಯಾಸ ನಡೆಸಿದ್ದಾರೆ. ದೇವಿ ಶಾರದಾಂಬೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ನಡೆಸಿದ್ದಾರೆ. 
icon

(4 / 11)

ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. ಈ ಮಕ್ಕಳಿಗೆ ದೇವರು ನಿಮ್ಮಷ್ಟೇ ಬುದ್ಧಿವಂತಿಕೆ ನೀಡಿ ಹರಸಲಿ ಎಂದು ಹಾರೈಸಿದ್ದಾರೆ. 
icon

(5 / 11)

ಇದೇ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು ಕಾಂತಾರದ ಕುರಿತು ಏನಾದ್ರೂ ಅಪ್‌ಡೇಟ್‌ ನೀಡಿ ಶೆಟ್ರೆ ಎಂದು ಕೇಳಿದ್ದಾರೆ. 
icon

(6 / 11)

ಕಾಂತಾರ ಸಿನಿಮಾದ ಮೂಲಕ ದೇಶ-ವಿದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ರಿಷಬ್‌ ಶೆಟ್ಟಿಗೆ ಇಬ್ಬರು ಮಕ್ಕಳು. ಮಗನ ಹೆಸರು ರಣ್ವಿತ್‌ ಶೆಟ್ಟಿ. ಮಗಳು ರಾಧ್ಯಾ. 
icon

(7 / 11)

ಸದ್ಯ ರಿಷಬ್‌ ಶೆಟ್ಟಿ ಕಾಂತಾರ ಚಾಪ್ಟರ್‌ 1ರ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ.  ಕಾಂತಾರ ಸಿನಿಮಾದ ಯಶಸ್ಸಿನ ಬಳಿಕ ಕಾಂತಾರದ ಪ್ರೀಕ್ವೆಲ್‌ ಕುರಿತು ನಿರೀಕ್ಷೆ ಹೆಚ್ಚಾಗಿದೆ.
icon

(8 / 11)

ಇತ್ತೀಚಿನ ಅಪ್‌ಡೇಟ್‌ ಪ್ರಕಾರ ಕಾಂತಾರ ಸಿನಿಮಾದ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೃಹತ್‌ ಸೆಟ್‌ ಹಾಕಲಾಗುತ್ತಿದೆ. ಇಲ್ಲಿ ಮೊದಲ ಹಂತದ ಶೂಟಿಂಗ್‌ ನಡೆಸಲಾಗುತ್ತಿದೆ.
icon

(9 / 11)

ಕಾಂತಾರ ಸಿನಿಮಾ ಚಾಪ್ಟರ್‌ ಒಂದರಲ್ಲಿ ರಿಷಬ್‌ ಶೆಟ್ಟಿ ಎಂದಿನಂತೆ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಫಸ್ಟ್‌ ಲುಕ್‌ ಝಲಕ್‌ನಲ್ಲಿ ರಿಷಬ್‌ ಶೆಟ್ಟಿ ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ವಿಭಿನ್ನ ರೂಪದಲ್ಲಿ ಕಾಣಿಸಿದ್ದಾರೆ.
icon

(10 / 11)

ಕಾಂತಾರ ಸಿನಿಮಾಕ್ಕೆ ನಟಿ ರುಕ್ಮಿಣಿ ವಸಂತ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಚಿತ್ರತಂಡ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಚಿತ್ರದಲ್ಲಿ ನಟಿಸುವ ಕಲಾವಿದರ ಕುರಿತು ಮತ್ತು ಚಿತ್ರದ ಕಥೆಯ ಕುರಿತು ಸಾಧ್ಯವಿರುವಷ್ಟು ಗೌಪ್ಯತೆ ಕಾಯ್ದುಕೊಳ್ಳಲು ಯತ್ನಿಸಲಾಗುತ್ತಿದೆ.  
icon

(11 / 11)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು