Sharanya Shetty: ಕೃಷ್ಣಂ ಪ್ರಣಯ ಸಖಿ ನೆನಪಲ್ಲಿ ನಟಿ ಶರಣ್ಯ ಶೆಟ್ಟಿ; ಅಪರೂಪದ ಫೋಟೋಗಳನ್ನು ಹಂಚಿಕೊಂಡ ಜಾನು-sandalwood news krishnam pranaya sakhi actress sharanya shetty shared momorable photos of ganesh movie pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sharanya Shetty: ಕೃಷ್ಣಂ ಪ್ರಣಯ ಸಖಿ ನೆನಪಲ್ಲಿ ನಟಿ ಶರಣ್ಯ ಶೆಟ್ಟಿ; ಅಪರೂಪದ ಫೋಟೋಗಳನ್ನು ಹಂಚಿಕೊಂಡ ಜಾನು

Sharanya Shetty: ಕೃಷ್ಣಂ ಪ್ರಣಯ ಸಖಿ ನೆನಪಲ್ಲಿ ನಟಿ ಶರಣ್ಯ ಶೆಟ್ಟಿ; ಅಪರೂಪದ ಫೋಟೋಗಳನ್ನು ಹಂಚಿಕೊಂಡ ಜಾನು

  • Sharanya Shetty: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ನೆನಪುಗಳನ್ನು ನಟಿ ಶರಣ್ಯ ಶೆಟ್ಟಿ ಹಂಚಿಕೊಂಡಿದ್ದಾರೆ. ಗಣೇಶ್‌, ಅವಿನಾಶ್‌, ಶ್ರುತಿ ಜತೆಗಿನ ಫೋಟೋಗಳ ಜತೆಗೆ ತನ್ನ ಒಂದಿಷ್ಟು ಆಕರ್ಷಕ ಫೋಟೋಗಳನ್ನೂ ಶೇರ್‌ ಮಾಡಿದ್ದಾರೆ.

sacnilk ಬಾಕ್ಸ್‌ ಆಫೀಸ್‌ ರಿಪೋರ್ಟ್‌ ಪ್ರಕಾರ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕಳೆದ 14 ದಿನಗಳಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 13.37 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಈ ಸಿನಿಮಾದ ಎರಡನೇ ನಾಯಕಿ ಶರಣ್ಯ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಕೃಷ್ಣಂ ಪ್ರಣಯ ಸಖಿ ಸಮಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
icon

(1 / 7)

ಈ ಫೋಟೋದಲ್ಲಿ ಶರಣ್ಯ ಮಾದಕ ಲುಕ್‌ ನೀಡಿದ್ದಾರೆ. ತನ್ನ ಫೋಟೋಗಳಿಗೆ ಬೀಯಿಂಗ್‌ ಜಾಹ್ನವಿ (ಜಾನು) ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.  
icon

(2 / 7)

ಕೃಷ್ಣಂ ಪ್ರಣಯ ಸಖಿ ಜತೆ ನಟಿಸಿದ ಪ್ರಮುಖ ನಟರ ಜತೆಗಿನ ಫೋಟೋಗಳನ್ನು ಶರಣ್ಯ ಹಂಚಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಈ ತಿಂಗಳು ಮೊದಲು ಭೀಮ ಸಿನಿಮಾ  ಬಿಡುಗಡೆಯಾಗಿತ್ತು. ಇದಾದ ಬಳಿಕ ಬಿಡುಗಡೆಯಾದ ಕೃಷ್ಣಂ ಪ್ರಣಯ ಸಖಿ ಸಿನಿಮಾವು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದಿತ್ತು.
icon

(3 / 7)

ಕೃಷ್ಣಂ ಪ್ರಣಯ ಸಖಿಯಲ್ಲಿ ಶರಣ್ಯ ಒಂದಿಷ್ಟು ಮಾದಕವಾಗಿ ನಟಿಸಿದ್ದರು. ಇರುವಷ್ಟು ದೃಶ್ಯಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಅನಾಥಶ್ರಮದ ಪ್ರಣಯಳ ಮೇಲೆ ಲವ್‌ ಆಗುತ್ತದೆ. ಆಕೆಯನ್ನು ಪಡೆಯಲು ತಾನು ಬಡವನ ವೇಷ ಧರಿಸುತ್ತಾನೆ. ಅಂದ್ರೆ, ಕ್ಯಾಬ್‌ ಡ್ರೈವರ್‌ ಆಗಿ ಆಕೆಯ ಅನಾಥಶ್ರಮದಲ್ಲಿ ಬಳಿ ಕೆಲಸಕ್ಕೆ ಸೇರುತ್ತಾನೆ. 
icon

(4 / 7)

ಮದುವೆ ಹಂತಕ್ಕೆ ತಲುಪುವಾಗ ಗಣೇಶ್‌ಗೆ ನೆನಪಿನ ಶಕ್ತಿ ಕಳೆದುಹೋಗುತ್ತದೆ. ಗಣೇಶ್‌ನ ಈ ಹಿಂದಿನ ಯಾವುದಾದರೂ ಸಿನಿಮಾದ ಇದೇ ರೀತಿಯ ನೆನಪಿನ ಶಕ್ತಿಯ ಕಥೆ ನೆನಪಾದರೆ ಅಚ್ಚರಿಯಿಲ್ಲ. ಬಳಿಕ ಇನ್ನೊಬ್ಬಳು ನಾಯಕಿ ಶರಣ್ಯ ಶೆಟ್ಟಿ ಆಗಮಿಸುತ್ತಾಳೆ. ತನಗೆ ನೀಡಿರುವ ಪಾತ್ರಕ್ಕೆ ಶರಣ್ಯ ಜೀವಂತಿಕೆ ತುಂಬಿ ನಟಿಸಿದ್ದರು. ಈಕೆಯ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
icon

(5 / 7)

ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಗೆ ಮುನ್ನ ತನ್ನ ಹಾಡುಗಳ ಮೂಲಕ ಸದ್ದು ಮಾಡಿತ್ತು. ಚಿನ್ನಮ್ಮ ಚಿನ್ನಮ್ಮ ಹಾಡು ಸಾಕಷ್ಟು ಜನಪ್ರಿಯವಾಗಿತ್ತು. ಇದಾದ ಬಳಿಕ ದ್ವಾಪರ ದಾಟಲು ಹಾಡು ಯೂಟ್ಯೂಬ್‌ನಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿ ಹಲವು ದಿನಗಳ ಕಾಲ ಇತ್ತು. 
icon

(6 / 7)

ಹಾಡಿನ ಗುಂಗಿನಲ್ಲಿ ಹೋದ ಅನೇಕರಿಗೆ ಈ ಸಿನಿಮಾ ಇಷ್ಟವಾಗಿತ್ತು. ಕೆಲವರಿಗೆ ಈ ಸಿನಿಮಾದಲ್ಲಿ ಹಳೆಯ ಗಣೇಶ ಕಾಣಿಸಿದ್ದ. ಕಥೆ ಅಷ್ಟೇನೂ ವಿಶೇಷವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಚಿತ್ರಮಂದಿರಗಳಿಗೆ ಜನ ಕಡಿಮೆ ಬರುತ್ತಿದ್ದಾರೆ ಎಂಬ ಸಮಯದಲ್ಲಿ ತಂಗಾಳಿಯಂತೆ ಕೃಷ್ಣಂ ಪ್ರಣಯ ಸಖಿ ಆಗಮಿಸಿದೆ. ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ದಾಖಲಿಸಿದೆ. ಈ ವಾರ ಪೆಪೆ, ಲಾಫಿಂಗ್‌ ಬುದ್ಧ ಮುಂತಾದ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ.  
icon

(7 / 7)

ಇತರ ಗ್ಯಾಲರಿಗಳು