ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾದಿಂದ ಕದ್ದದ್ದ? ಯುವ ರಾಜ್‌ಕುಮಾರ್‌ ಸಿನಿಮಾದ ಕುರಿತು ಹೀಗೊಂದು ಪ್ರಶ್ನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾದಿಂದ ಕದ್ದದ್ದ? ಯುವ ರಾಜ್‌ಕುಮಾರ್‌ ಸಿನಿಮಾದ ಕುರಿತು ಹೀಗೊಂದು ಪ್ರಶ್ನೆ

ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾದಿಂದ ಕದ್ದದ್ದ? ಯುವ ರಾಜ್‌ಕುಮಾರ್‌ ಸಿನಿಮಾದ ಕುರಿತು ಹೀಗೊಂದು ಪ್ರಶ್ನೆ

  • ಬಹುನಿರೀಕ್ಷಿತ ಯುವ ಸಿನಿಮಾ ಬಿಡುಗಡೆಯಾಗಿದೆ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಯುವ ರಾಜ್‌ಕುಮಾರ್‌ ನಟನೆಯ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರು ದಂಗಲ್‌ ಸಿನಿಮಾದಿಂದ ಪಡೆದಿದ್ದಾರ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷಿತ ಯುವ ಸಿನಿಮಾ ಬಿಡುಗಡೆಯಾಗಿದೆ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಯುವ ರಾಜ್‌ಕುಮಾರ್‌ ನಟನೆಯ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರು ದಂಗಲ್‌ ಸಿನಿಮಾದಿಂದ ಪಡೆದಿದ್ದಾರ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. 
icon

(1 / 10)

ಯುವ ಸಿನಿಮಾ ಇಂದು ಬಿಡುಗಡೆಯಾಗಿದೆ. ದಂಗಲ್‌ ಸಿನಿಮಾದಿಂದ ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ತೆಗೆದಿರುವುದೇ? ಎಂಬ ಪ್ರಶ್ನೆಗೆ ಉತ್ತರ ಕಂಡುಹಿಡಿಯಬೇಕಿದ್ದರೆ ಆ ಸೀನ್‌ ಮತ್ತು ಈ ಸೀನ್‌ ನಡುವೆ ಹೋಲಿಕೆ ಮಾಡಬೇಕಾಗುತ್ತದೆ. ಸಿನಿಮಾದ ಪ್ರಮುಖ ಜೀವಾಳವಾಗಿರುವ ಕ್ಲೈಮ್ಯಾಕ್ಸ್‌ ಕುರಿತು ಹೆಚ್ಚಿನ ಮಾಹಿತಿ ತಿಳಿಸುವುದು ಈಗ ಸೂಕ್ತವಲ್ಲ.  
icon

(2 / 10)

 ದಂಗಲ್‌ ಸಿನಿಮಾದ ಕ್ಲೈಮ್ಯಾಕ್ಸ್‌ಗೂ ಯುವ ಸಿನಿಮಾದ ಕ್ಲೈಮ್ಯಾಕ್ಸ್‌ಗೂ ಹೋಲಿಕೆ ಉಂಟು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಇವೆರಡು ವಿಭಿನ್ನ ಕಥಾಹಂದರದ ಸಿನಿಮಾವಾಗಿರುವುದರಿಂದ "ಕ್ಲೈಮ್ಯಾಕ್ಸ್‌ ದೃಶ್ಯ ಕದ್ದದ್ದು" ಎಂಬ ಆರೋಪ ಸೂಕ್ತವಾಗದು. ಆದರೆ, ಕೆಲವೊಂದು ಕುಸ್ತಿಯ ಪಟುಗಳು ದಂಗಲ್‌ ಅಥವಾ ಇತರೆ ಕುಸ್ತಿ ಸ್ಪರ್ಧೆಗಳ ವಿಡಿಯೋಗಳಿಗೆ ಹೋಲಿಕೆಯಾಗಬಹುದು.
icon

(3 / 10)

ಅಮಿರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾವು ಕುಸ್ತಿಪಟುವೊಬ್ಬರ ಬದುಕಿನ ಪೂರ್ಣ ಕಥೆ. ಅಲ್ಲಿ ಬೇರೆ ಕಥೆಗಳಿಗೆ ಅಷ್ಟೇನೂ ಮಹತ್ವವಿಲ್ಲ. ಕ್ರೀಡಾಪಟುವಿನ ಬದುಕು, ಸಾಧನೆಗಳ ಕುರಿತು ಬೆಳಕು ಬೀರುವ ಪ್ರಯತ್ನ ದಂಗಲ್‌ ಸಿನಿಮಾದಲ್ಲಿ ಕಾಣಬಹುದು.
icon

(4 / 10)

ಆದರೆ, ಯುವ ಸಿನಿಮಾದಲ್ಲಿ ಕುಸ್ತಿ ಒಂದು ಅಂಶವಷ್ಟೇ. ಇದರಲ್ಲಿ ಯುವನ ಕಾಲೇಜು ಸ್ಟೋರಿ, ಗ್ಯಾಂಗ್‌ಸ್ಟಾರ್‌ಗಳ ಜತೆಗಿನ ಕಾದಾಟ, ಡೆಲಿವರಿ ಬಾಯ್‌ ಕಥೆ, ಮಧ್ಯಮ ವರ್ಗದವರ ಬದುಕು, ಅಪ್ಪ ಮತ್ತು ಮಗನ ಬಾಂಧವ್ಯ ಇತ್ಯಾದಿ ವಿಚಾರಗಳು ಇವೆ. 
icon

(5 / 10)

ಯುವ ಸಿನಿಮಾದಲ್ಲಿ ಯುವನ ಅಪ್ಪ ಕುಸ್ತಿಪಟು ಅಲ್ಲ. ಯುವ ಕುಸ್ತಿಪಟುವಾಗಲು ಯಾವುದೇ ತರಬೇತಿ ಅಪ್ಪ ನೀಡಿರುವುದಿಲ್ಲ. ಆದರೆ, ದಂಗಲ್‌ನಲ್ಲಿ ಅಮೀರ್‌ ಖಾನ್‌ ಅವರು ತನ್ನ ಪುತ್ರಿಯರಿಗೆ ಸ್ವತಃ ತಾವೇ ತರಬೇತಿ ನೀಡಿದ್ದಾರೆ.  
icon

(6 / 10)

ಗೀತಾ ಪೋಗಾಟ್‌ ಮತ್ತು ಬಬೀತಾ ಕುಮಾರಿಗೆ ತರಬೇತಿಯನ್ನು ಅಮೀರ್‌ ಖಾನ್‌ ನೀಡುತ್ತಾರೆ. ಭಾರತದ ಮೊಲದ ವಿಶ್ವದರ್ಜೆಯ ಮಹಿಳಾ ಕುಸ್ತಿಪಟುಗಳ ಕಥೆಯನ್ನು ದಂಗಲ್‌ ಹೊಂದಿದೆ.
icon

(7 / 10)

ಯುವ ಸಿನಿಮಾದಲ್ಲೂ ಕುಸ್ತಿ ಇದೆ. ಕ್ಲೈಮ್ಯಾಕ್ಸ್‌ ದೃಶ್ಯಗಳ ಕೆಲವೊಂದು ಪಟುಗಳನ್ನು ನೋಡಿದರೆ ದಂಗಲ್‌ ಸಿನಿಮಾ ನೆನಪಾಗುವುದು ಸಹಜ. ಯುವ ನಿರ್ದೇಶಕರು ದಂಗಲ್‌ ಸಿನಿಮಾದಿಂದ ಸ್ಪೂರ್ತಿ ಪಡೆದಿರಬಹುದು. ಅಥವಾ ಇತರೆ ಕುಸ್ತಿ ಪಂದ್ಯಗಳಿಂದಲೂ ಸ್ಪೂರ್ತಿ ಪಡೆದಿರಬಹುದು. 
icon

(8 / 10)

ಯುವ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಭಾವನಾತ್ಮಕವಾಗಿ ಅಪ್ಪ-ಮಗನ ನಂಟು ತೋರಿಸಲಾಗಿದೆ. ಇಲ್ಲಿ ಮಗನ ಯಶಸ್ಸು ನೋಡಿ ಸಂಭ್ರಮಿಸುವ ಅಪ್ಪ ಇದ್ದಾರೆ. ದಂಗಲ್‌ನಲ್ಲೂ ಅದೇ ರೀತಿಯ ಅಪ್ಪ ಇದ್ದಾರೆ. ಅಪ್ಪ ಮಗನ ನಂಟು ತೋರಿಸುವ ಸಂದರ್ಭದಲ್ಲಿ ದಂಗಲ್‌ನ ಅಪ್ಪ-ಮಗಳ ಬಾಂಧವ್ಯವು ಯುವ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಹೋಲಿಕೆಯಾದರೆ ಅಚ್ಚರಿಯಿಲ್ಲ.     
icon

(9 / 10)

ಕನ್ನಡ ಸಿನಿಮಾ ಸುದ್ದಿ, ಸಿನಿಮಾ ವಿಮರ್ಶೆ, ಒಟಿಟಿ ಅಪ್‌ಡೇಟ್‌, ಸೀರಿಯಲ್‌ ವಿವರಗಳನ್ನು ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ. 
icon

(10 / 10)

ಇತರ ಗ್ಯಾಲರಿಗಳು