ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shimoga Politics: ಶಿವಮೊಗ್ಗದಲ್ಲಿ 3 ದಶಕದಿಂದ ಬಂಗಾರಪ್ಪ, ಯಡಿಯೂರಪ್ಪ ಕುಟುಂಬಗಳ ಸೆಣಸಾಟ, ಮೂವರು ಅಪ್ಪಮಕ್ಕಳ ಕಣವಿದು Photos

Shimoga politics: ಶಿವಮೊಗ್ಗದಲ್ಲಿ 3 ದಶಕದಿಂದ ಬಂಗಾರಪ್ಪ, ಯಡಿಯೂರಪ್ಪ ಕುಟುಂಬಗಳ ಸೆಣಸಾಟ, ಮೂವರು ಅಪ್ಪಮಕ್ಕಳ ಕಣವಿದು Photos

  • Family Fights ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ ಬಿಜೆಪಿ ನಡುವಿನ ಸ್ಪರ್ಧೆಯ ಅಖಾಡ. ಈಗಂತೂ ಎಸ್.ಬಂಗಾರಪ್ಪ ಹಾಗೂ ಬಿ.ಎಸ್‌.ಯಡಿಯೂರಪ್ಪ ಕುಟುಂಬದ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಬಂಗಾರಪ್ಪ ಇಲ್ಲಿ ನಾಲ್ಕು ಬಾರಿ ಗೆದ್ದರೆ, ಯಡಿಯೂರಪ್ಪ ಒಮ್ಮೆ, ಬಿ.ವೈ.ರಾಘವೇಂದ್ರ ಮೂರು ಬಾರಿ ಗೆದ್ದಿದ್ದಾರೆ. ಬಂಗಾರಪ್ಪ ಮಕ್ಕಳು ಒಮ್ಮೆಯೂ ಗೆದ್ದಿಲ್ಲ. 

ಮಾಜಿ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಇಲ್ಲಿಂದ 1967 ರಲ್ಲಿ ಶಿವಮೊಗ್ಗ ಕೇತ್ರದಿಂದ ಗೆದ್ದು ಸಂಸತ್‌ನಲ್ಲಿ ಕನ್ನಡದಲ್ಲಿ  ಮಾತನಾಡಿ ಗಮನ ಸೆಳೆದಿದ್ದರು. ಅವರ ಪುತ್ರ, ಚನ್ನಗಿರಿ ಮಾಜಿ ಶಾಸಕ ಮಹಿಮಾ ಪಟೇಲ್‌ ಜೆಡಿಯುನಿಂದ ಒಮ್ಮೆ 2018ರ ಮರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಆ ಚುನಾವಣೆ ಮೂವರು ಮಾಜಿ ಸಿಎಂಗಳ ಮಕ್ಕಳ ಕಣವಾಗಿತ್ತು. ಜೆಡಿಎಸ್‌ನಿಂದ ಮಧುಬಂಗಾರಪ್ಪ ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಸ್ಪರ್ಧಿಸಿದ್ದರು. ರಾಘವೇಂದ್ರ ಆ ಚುನಾವಣೆಯಲ್ಲಿ ಗೆದ್ದಿದ್ದರು.
icon

(1 / 7)

ಮಾಜಿ ಸಿಎಂ ಎಸ್.‌ ಬಂಗಾರಪ್ಪ ಅವರ ಪತ್ನಿಯ ತಂಗಿ ಗಂಡ ಕೆ.ಜೆ.ಶಿವಪ್ಪ  1991ರಲ್ಲಿ ಇಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಇವರ ಎದುರಾಳಿಯಾಗಿ ಸೋತವರು ಬಿ.ಎಸ್.ಯಡಿಯೂರಪ್ಪ, ಹಾಲಿ ಶಾಸಕ, ಮಾಜಿ ಸಚಿವ ವಿ.ಸುನೀಲ್‌ ಕುಮಾರ್‌ ಅವರು  ಶಿವಪ್ಪ ಅವರ ಅಳಿಯ. 
icon

(2 / 7)

ಇಲ್ಲಿ ಬಂಗಾರಪ್ಪ ಅವರು ನಾಲ್ಕು ಪಕ್ಷಗಳಿಂದ ಗೆದ್ದು ಇತಿಹಾಸ ನಿರ್ಮಿಸಿದರು. ಒಮ್ಮೆ ಕೆಸಿಪಿ, ನಂತರ ಕಾಂಗ್ರೆಸ್‌, ಬಳಿಕ ಬಿಜೆಪಿ, ತದ ನಂತರ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು, ವಿಧಾನಸಭೆ ಚುನಾವಣೆಯಲ್ಲಿ ಇಬ್ಬರೂ ಮುಖಾಮುಖಿಯಾದರೂ ಲೋಕಸಭೆ ಚುನಾವಣೆಯಲ್ಲಿ ಉಭಯ ನಾಯಕರು ಒಟ್ಟಿಗೆ ಸ್ಪರ್ಧಿಸಲಿಲ್ಲ.
icon

(3 / 7)

ಮಾಜಿ ಸಿಎಂ ಬಂಗಾರಪ್ಪ ಅವರನ್ನು ಮಾಜಿ ಸಿಎಂ ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ 2009ರಲ್ಲಿ ಮಣಿಸಿದ್ದರು. 
icon

(4 / 7)

2014ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಕಣಕ್ಕಿಳಿದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಂಗಾರಪ್ಪ ಪುತ್ರಿ, ನಟ ಶಿವರಾಜಕುಮಾರ್‌ ಪತ್ನಿ ಗೀತಾ ಅವರನ್ನು ಮಣಿಸಿದ್ದರು.
icon

(5 / 7)

ಬಿ.ವೈ.ರಾಘವೇಂದ್ರ ಅವರು ಎರಡು ಬಾರಿ ಅಂದರೆ 2018ರ ಉಪ ಚುನಾವಣೆ ಹಾಗೂ  2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಬಂಗಾರಪ್ಪ ಅವರ ಪುತ್ರ, ಹಾಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಸೋಲಿಸಿದ್ದರು. ಈ ಮೂಲಕ ಈ ಕ್ಷೇತ್ರದಲ್ಲಿ  ಮೂರು ಬಾರಿ ರಾಘವೇಂದ್ರ ಗೆದ್ದಿದ್ದಾರೆ. 
icon

(6 / 7)

ಈ ಬಾರಿ ಮತ್ತೆ ಇದೇ ಕುಟುಂಬಗಳ ಕುಡಿಗಳ ಸ್ಪರ್ಧೆ. ಬಿ.ವೈ.ರಾಘವೇಂದ್ರ ಹಾಗೂ ಗೀತಾ ಶಿವಕುಮಾರ್‌ ಮಧ್ಯೆ ಮೊದಲ ಸ್ಪರ್ಧೆ. ರಾಘವೇಂದ್ರ ಅವರಿಗೆ ನಾಲ್ಕನೇ ಲೋಕಸಭೆ ಚುನಾವಣೆಯಾದರೆ, ಗೀತಾ ಅವರಿಗೆ ಎರಡನೇ ಚುನಾವಣೆ. ಈ ಬಾರಿ ಗೀತಾ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಿದ್ದಾರೆ. ಇದೂ ಸೇರಿದಂತೆ ಒಟ್ಟು 33 ವರ್ಷಗಳ ಅವಧಿಯ ಎರಡು ಕುಟುಂಬಗಳ ಸ್ಪರ್ಧೆಯ ಇತಿಹಾಸ ಮುಂದುವರೆದಂತಾಗಲಿದೆ. 
icon

(7 / 7)

ಇತರ ಗ್ಯಾಲರಿಗಳು