Dry Skin Care Tips: ಚಳಿಗಾಲದಲ್ಲಿ ನಿಮ್ಮ ಒಣ ತ್ವಚೆಗೆ ಜೀವ ತುಂಬಲು ಇಲ್ಲಿವೆ ಟಿಪ್ಸ್
- ಚಳಿಗಾಲದಲ್ಲಿ ನಿಮ್ಮ ಚರ್ಮವು ಸಹಾರಾ ಮರುಭೂಮಿಯಂತೆ ಒಣಗಿದೆಯೇ? ಚಳಿಗಾಲದಲ್ಲಿ ನಿಮ್ಮ ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಚರ್ಮಕ್ಕೆ ಮಾಯಿಶ್ಚರೈಸರ್ ಹಚ್ಚಬೇಕು. ನಿಮ್ಮ ಒಣ ತ್ವಚೆಗೆ ಜೀವ ತುಂಬಲು ಇಲ್ಲಿವೆ ಟಿಪ್ಸ್..

(1 / 5)
ಚಳಿಗಾಲದಲ್ಲಿ ಚರ್ಮವು ಒಣಗುವುದು ಸಹಜ. ಹಾಗಂತ ಅದನ್ನೂ ಹಾಗೇಯೇ ಬಿಟ್ಟರೆ ಚರ್ಮದಲ್ಲಿ ಬಿರುಕು ಮೂಡುತ್ತದೆ. ಚರ್ಮವು ತನ್ನ ಮೂಲರೂಪವನ್ನು ಕಳೆದುಕೊಂಡು ನಿರ್ಜೀವವಾಗಿ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಗೊತ್ತೇ?
(2 / 5)
ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯನ್ನು ಚಿಟಿಕೆ ಅರಿಶಿನ ಅಥವಾ ಪುಡಿ ಸಕ್ಕರೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿದರೆ ನಿಮ್ಮ ಒಣ ತ್ವಚೆ ನಿರ್ಮೂಲನೆಗೆ ಸಹಾಯ ಮಾಡುತ್ತದೆ.
(3 / 5)
ಮನೆಯಲ್ಲಿ ತಯಾರಿಸಿದ ಮಾಯಿಶ್ಚರೈಸರ್: ಮನೆಯಲ್ಲಿ ಅವಕಾಡೊ, ರೋಸ್ ವಾಟರ್ ಮತ್ತು ಲ್ಯಾವೆಂಡರ್ ಅನ್ನು ಬೆರೆಸಿ ನೀವು ಮಾಯಿಶ್ಚರೈಸರ್ ತಯಾರಿಸಿ ಹಚ್ಚಬಹುದು.
(4 / 5)
ಫೇಸ್ ಮಿಸ್ಟ್: ತ್ವಚೆಯನ್ನು ತೇವ ಮತ್ತು ತಾಜಾವಾಗಿಡುವಲ್ಲಿ ಫೇಸ್ ಮಿಸ್ಟ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಗುಲಾಬಿ ಫೇಸ್ ಮಿಸ್ಟ್ ಬಳಸುವುದು ಸೂಕ್ತ. ಅಕ್ಕಿ ನೀರು, ಸೌತೆಕಾಯಿ, ಮತ್ತು ಹಸಿರು ಚಹಾವನ್ನು ನೀವು ಫೇಸ್ ಮಿಸ್ಟ್ ಆಗಿ ಬಳಸಬಹುದು.
ಇತರ ಗ್ಯಾಲರಿಗಳು