Rajkumar Ayyappa Songs: ವರನಟ ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಸುಮಧುರ ಕನ್ನಡ ಭಕ್ತಿ ಗೀತೆಗಳು ಇಲ್ಲಿವೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rajkumar Ayyappa Songs: ವರನಟ ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಸುಮಧುರ ಕನ್ನಡ ಭಕ್ತಿ ಗೀತೆಗಳು ಇಲ್ಲಿವೆ

Rajkumar Ayyappa Songs: ವರನಟ ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಸುಮಧುರ ಕನ್ನಡ ಭಕ್ತಿ ಗೀತೆಗಳು ಇಲ್ಲಿವೆ

ವರನಟ ಡಾ ರಾಜ್ ಕುಮಾರ್ ಅವರು ಸಿನಿಮಾಗಳ ಜೊತೆಗೆ ಸಾಕಷ್ಟು ಭಕ್ತಿ ಗೀತೆಗಳನ್ನೂ ಹಾಡಿದ್ದಾರೆ. ಅಯ್ಯಪ್ಪ ಸ್ವಾಮಿಗೆ ಸಂಬಂಧಿಸಿದಂತೆ ಅಣ್ಣಾವ್ರ ಹಲವಾರು ಭಕ್ತಿ ಗೀತೆಗಳು ಸಖತ್ ಹಿಟ್ ಆಗಿವೆ. ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ 10 ಹಾಡುಗಳು ಇಲ್ಲಿವೆ.

ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿಗೀತೆಗಳು ಇಲ್ಲಿವೆ
ಡಾ ರಾಜ್ ಕುಮಾರ್ ಹಾಡಿರುವ ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿಗೀತೆಗಳು ಇಲ್ಲಿವೆ

ಮಂಡಲ ಮಕರ ಜ್ಯೋತಿ ಪೂಜೆಗಾಗಿ ಶಬರಿಮಲೆಯಲ್ಲಿ 2024ರ ನವೆಂಬರ್ 15 ರಿಂದ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಲಕ್ಷಾಂತರ ಮಂದಿ ಭಕ್ತರು ಈಗಾಗಲೇ ಮಾಲೆಯನ್ನು ಧರಿಸಿ ಅಯ್ಯಪ್ಪನ ದರ್ಶನ ಪಡೆಯಲು ಶಬರಿಮಲೆಗೆ ತೆರೆಳುತ್ತಿದ್ದಾರೆ. ಮಾಲಾಧಾರಿಗಳು ಪ್ರತಿನಿತ್ಯ ಅಯ್ಯಪ್ಪನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಭಜನೆ ಮಾಡುತ್ತಿದ್ದಾರೆ. ಸ್ವಾಮಿ ಶರಣಂ, ಅಯ್ಯಪ್ಪ ಶರಣಂ, ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪನ ಭಕ್ತರು ಭಕ್ತಿ ಗೀತೆಗಳನ್ನು ಕೇಳುವುದು ಸಹಜ. ಇಂತಹ ಭಕ್ತರಿಗಾಗಿ ಡಾ ರಾಜ್ ಕುಮಾರ್ ಅವರು ಹಾಡಿರುವ ಪ್ರಮುಖ 10 ಅಯ್ಯಪ್ಪ ಸ್ವಾಮಿಯ ಕನ್ನಡ ಭಕ್ತಿ ಗೀತೆಗಳನ್ನು ಇಲ್ಲಿ ನೀಡಲಾಗಿದೆ. ಈ ಸುಮಧುರ ಗೀತೆಗಳನ್ನು ಪ್ರತಿಯೊಬ್ಬ ಅಯ್ಯಪ್ಪನ ಭಕ್ತರು ಇಷ್ಟಪಡುತ್ತಾರೆ.

ಕೆಳಗೆ ನೀಡಲಾಗಿರುವ ಲಿಂಕ್ ನಲ್ಲಿರುವ ಅಯ್ಯಪ್ಪನ ಹಾಡುಗಳ ಪಟ್ಟಿ

  1. ಶಬರಿಗಿರಿ
  2. ಏನು ಶಕ್ತಿ ಅಡಗಿದೆಯೋ
  3. ಈ ಕಾಡಿಗೇಕೆ ನೀನು ಬಂದೆ
  4. ನೀನೆಲ್ಲೊ ನಾನಲ್ಲೇ
  5. ಸುಮ್ಮನೆ ಏತಕ್ಕೆ
  6. ಬೇರೆ ಏನು ಕೇಳಲಾರೆ
  7. ಏನು ಅನುಬಂಧ
  8. ಸಾಲದೇ ಎರಡು ಕಣ್ಣು ಸಾಲದೇ
  9. ಬಿಡಬೇಡ ನೀ ಬಿಡಬೇಡ
  10. ಏನೇ ಮಾಡು ನಿನ್ನನು ನಾನು ಬಿಡೆನು

ಡಾ ರಾಜ್ ಕುಮಾರ್ ಹಾಡಿರುವ ಈ ಹಾಡುಗಳಿಗೆ ಎಂ ರಂಗ ರಾವ್ ಅವರು ಸಂಗೀತವನ್ನು ನೀಡಿದ್ದಾರೆ. ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಹೆಸರಿನಲ್ಲಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆ ಈ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದೆ. ಹಾಡುಗಳ ಲಿಂಕ್ ಇಲ್ಲಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.