ನಿಮ್ಮ ಮುದ್ದು ಕಂದಮ್ಮನ ಹಲ್ಲು ಹುಳುಕಾಗಿದೆಯೇ? ಹಾಗಾದ್ರೆ ಈ ಮಿಲ್ಕ್‌ ಬಾಟಲ್‌ ಕ್ಯಾವಿಟಿಯ ಬಗ್ಗೆ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮ ಮುದ್ದು ಕಂದಮ್ಮನ ಹಲ್ಲು ಹುಳುಕಾಗಿದೆಯೇ? ಹಾಗಾದ್ರೆ ಈ ಮಿಲ್ಕ್‌ ಬಾಟಲ್‌ ಕ್ಯಾವಿಟಿಯ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಮುದ್ದು ಕಂದಮ್ಮನ ಹಲ್ಲು ಹುಳುಕಾಗಿದೆಯೇ? ಹಾಗಾದ್ರೆ ಈ ಮಿಲ್ಕ್‌ ಬಾಟಲ್‌ ಕ್ಯಾವಿಟಿಯ ಬಗ್ಗೆ ತಿಳಿದುಕೊಳ್ಳಿ

Milk Bottle Cavity: ಬಾಯಿಯ ಆರೋಗ್ಯದಲ್ಲಿನ ಸಮಸ್ಯೆಯು ಹಲ್ಲು ಹುಳುಕಾಗುವುದು ಮತ್ತು ವಸಡಿನ ಕಾಯಿಲೆಗೆ ಕಾರಣವಾಗುತ್ತದೆ. ಇದು ಹೃದ್ರೋಗ, ಕ್ಯಾನ್ಸರ್‌ ಮತ್ತು ಮಧುಮೇಹದಂತಹ ಗಂಭಿರ ಕಾಯಿಲೆಗಳಿಗೆ ನೇರವಾಗಿ ಸಂಬಂಧಿಸಿದೆ. ಚಿಕ್ಕ ಮಕ್ಕಳಲ್ಲಿ ಕಂಡುಬರುವ ಹಲ್ಲು ಹುಳುಕಾಗುವ ಸಮಸ್ಯೆಗೆ ಕಾರಣಗಳೇನು? ಇಲ್ಲಿದೆ ಓದಿ.

ನಿಮ್ಮ ಮುದ್ದು ಕಂದಮ್ಮನ ಹಲ್ಲು ಹುಳುಕಾಗಿದೆಯೇ? ಹಾಗಾದ್ರೆ ಈ ಮಿಲ್ಕ್‌ ಬಾಟಲ್‌ ಕೆವಿಟಿಯ ಬಗ್ಗೆ ತಿಳಿದುಕೊಳ್ಳಿ
ನಿಮ್ಮ ಮುದ್ದು ಕಂದಮ್ಮನ ಹಲ್ಲು ಹುಳುಕಾಗಿದೆಯೇ? ಹಾಗಾದ್ರೆ ಈ ಮಿಲ್ಕ್‌ ಬಾಟಲ್‌ ಕೆವಿಟಿಯ ಬಗ್ಗೆ ತಿಳಿದುಕೊಳ್ಳಿ (PC: Freepik)

ಬಾಯಿಯ ಆರೋಗ್ಯ ಬಹಳ ಮುಖ್ಯವಾಗಿದೆ. ಮಕ್ಕಳಿರಲಿ, ದೊಡ್ಡವರಿರಲಿ ಪ್ರತಿಯೊಬ್ಬರೂ ತಮ್ಮ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಆದರೆ ಚಿಕ್ಕ ಮಕ್ಕಳಿಗೆ ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳುವುದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಇದರ ಪರಿಣಾಮವೇ ಮಕ್ಕಳಲ್ಲಿ ಕಂಡುಬರುವ ಹಾಲು ಹಲ್ಲಿನ ಕುಳಿ ಸಮಸ್ಯೆ. ಇದನ್ನು ಮಿಲ್ಕ್‌ ಬಾಟಲ್‌ ಕ್ಯಾವಿಟಿ ಎಂದೂ ಕರೆಯುತ್ತಾರೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಮಾಡದಿದ್ದರೆ ಮುಂದೆ ಬಹಳ ತೊಂದರೆಗಳನ್ನು ಅನುಭವಿಸಬೇಕಾಗುತ್ತಾದೆ. ಹಲ್ಲು ಹುಳುಕು ಮತ್ತು ವಸಡಿನ ಕಾಯಿಲೆಗಳು ಹೃದ್ರೋಗ, ಕ್ಯಾನ್ಸರ್‌ ಮತ್ತು ಮಧುಮೇಹದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಬಗ್ಗೆ ಡಾ. ಪ್ರೀತಿ ಅರೋರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಮಿಲ್ಕ್‌ ಬಾಟಲ್‌ ಕ್ಯಾವಿಟಿ ಎಂದರೇನು? ತಜ್ಞರ ಪ್ರಕಾರ ಈ ಸಮಸ್ಯೆಗೆ ಪರಿಹಾರಗಳೇನು ಎಂದು ತಿಳಿಯೋಣ.

ಏನಿದು ಮಿಲ್ಕ್‌ ಬಾಟಲ್‌ ಕ್ಯಾವಿಟಿ?

ಮಿಲ್ಕ್‌ ಬಾಟಲ್‌ ಕ್ಯಾವಿಟಿ ಅಥವಾ ಹಾಲು ಹಲ್ಲಿನ ಕುಳಿಯನ್ನು ಬೇಬಿ ಬಾಟಲ್‌ ಸಿಂಡ್ರೋಮ್‌, ನರ್ಸಿಂಗ್‌ ಬಾಟಲ್‌ ಕ್ಷಯ ಮತ್ತು ಬೇಬಿ ಬಾಟಲ್‌ ದಂತಕ್ಷಯ ಎಂದೂ ಕರೆಯಲಾಗುತ್ತದೆ. ಬಾಯಿಯ ಸ್ವಚ್ಛತೆಯ ಕಡೆಗೆ ಗಮನ ಕೊಡದೇ ಇದ್ದಾಗ ಈ ಸಮಸ್ಯೆ ಸಂಭವಿಸುತ್ತದೆ. ಈ ಸಮಸ್ಯೆ ಮೊದಲು ಉಂಟಾದಾಗ ಮಗುವಿನ ವಸಡಿನ ಮೇಲೆ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ. ಅದೇ ಮುಂದುವರೆದು ಕೊಳೆತು, ಕಂದು ಬಣ್ಣಕ್ಕೆ ತಿರುಗುತ್ತದೆ.

ಮಿಲ್ಕ್‌ ಬಾಟಲ್‌ ಕ್ಯಾವಿಟಿಗೆ ಕಾರಣಗಳೇನು?

ಚಿಕ್ಕ ಮಕ್ಕಳು ದಿನಕ್ಕೆ ಹಲವು ಬಾರಿ ಬಾಟಲಿಯಿಂದ ಹಾಲು ಕುಡಿಯುತ್ತಾರೆ. ಎಷ್ಟೋ ಸಲ ರಾತ್ರಿಯ ವೇಳೆಯಲ್ಲಿಯೂ ಅದು ಮಕ್ಕಳ ಬಾಯಿಯಲ್ಲಿಯೇ ಉಳಿಯುತ್ತದೆ. ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಸಕ್ಕರೆ ಬೆರೆಸಿದ ಸಿಹಿ ಹಾಲನ್ನು ಕುಡಿಯಲು ನೀಡುತ್ತಾರೆ. ಹಾಲಿನಲ್ಲಿರುವ ಸಕ್ಕರೆ ಅನೇಕ ಬಾರಿ ಹಲ್ಲುಗಳ ಮೇಲೆ ಅಂಟಿಕೊಳ್ಳುತ್ತದೆ. ಸಕ್ಕರೆಯು ಮಕ್ಕಳ ಹಲ್ಲುಗಳನ್ನು ಹಾಳುಮಾಡುತ್ತದೆ. ಇದನ್ನೋ ಮಿಲ್ಕ್‌ ಬಾಟಲ್‌ ಕ್ಯಾವಿಟಿ ಎಂದು ಕರೆಯುತ್ತಾರೆ.

ಮಿಲ್ಕ್ ಬಾಟಲ್‌ ಕ್ಯಾವಿಟಿ ಸಮಸ್ಯೆಗೆ ಪರಿಹಾರಗಳು

ಮಲಗುವಾಗ ಹಾಲಿನ ಬಾಟಲಿ ಬಾಯಿಯಲ್ಲಿಟ್ಟುಕೊಳ್ಳುವುದನ್ನು ತಪ್ಪಿಸಿ: ನಿಮ್ಮ ಮಗು ಊಟ ಮಾಡಲು ಪ್ರಾರಂಭಿಸಿದ್ದರೆ, ಮಲಗುವ ಸಮಯದಲ್ಲಿ ಹಾಲಿನ ಬಾಟಲಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವ ಅಭ್ಯಾಸವನ್ನು ಮಾಡಬೇಡಿ. ಮಲಗುವಾಗ ಹಾಲಿನ ಬಾಟಲಿಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಹಾಲಿನಲ್ಲಿರುವ ಸಕ್ಕರೆಯು ಹಲ್ಲುಗಳ ಮೇಲೆ ಶೇಖರಣೆಗೊಳ್ಳುತ್ತದೆ. ಇದರಿಂದಾಗಿ ಹಲ್ಲುಗಳನ್ನು ಹುಳುಕು ಮಾಡುವ ಬ್ಯಾಕ್ಟೀರಿಯಾಗಳು ಹಲ್ಲುಗಳ ಮೇಲೆ ಶೇಖರಣೆಯಾಗಿ ಹಲ್ಲು ಕೊಳೆಯಲು ಪ್ರಾರಂಭಿಸುತ್ತದೆ. ಮತ್ತು ವಸಡಿನ ಕಾಯಿಲೆಗಳು ಬರುತ್ತವೆ.

ಬಟ್ಟೆಯಿಂದ ಹಲ್ಲುಜ್ಜಿರಿ: ಚಿಕ್ಕ ಮಕ್ಕಳಿಗೆ ಬ್ರೆಷ್‌ ಮಾಡುವಂತಿಲ್ಲ. ಅಂತಹ ಪರಿಸ್ಥಿಯಲ್ಲೂ ಬಾಯಿಯ ಸ್ವಚ್ಛತೆ ಕಾಪಾಡುವುದು ಪೋಷಕರ ಜವಾಬ್ದಾರಿಯಾಗಿದೆ. ಹಲ್ಲಿನ ಮೇಲೆ ಅಂಟಿಕೊಂಡ ಸಕ್ಕರೆಯನ್ನು ಸ್ವಚ್ಛಗೊಳಿಸಲು, ಮಗುವಿಗೆ ಆಹಾರ ನೀಡಿದ ನಂತರ ಶುದ್ಧವಾದ, ತೆಳುವಾದ ಹಾಗೂ ಮೃದುವಾದ ಬಟ್ಟೆಯನ್ನು ತೆಗೆದುಕೊಂಡು ದಿನಕ್ಕೆ ಎರಡು ಬಾರಿ ಮಗುವಿನ ವಸಡು ಮತ್ತು ಹಲ್ಲುಗಳನ್ನು ಒರೆಸಿ. ಇದರಿಂದ ಹಲ್ಲುಗಳ ಮೇಲೆ ಸಕ್ಕರೆ ಶೇಖರಣೆಯಾಗುವುದನ್ನು ತಪ್ಪಿಸಬಹುದು.

ಸಿಪ್ಪರ್‌ ಬಳಸಿ: ನಿಮ್ಮ ಮಗುವಿಗೆ ಹಾಲು ಕುಡಿಯಲು ಬಾಟಲ್‌ ಉಪಯೋಗಿಸುವ ಬದಲು ಬೇಬಿ ಕಪ್‌ ಅಥವಾ ಟಂಬ್ಲರ್‌ಗಳನ್ನು ಬಳಸಿ. ಒಮ್ಮೆ ಹಾಲು ಕುಡಿಸಿ ಬಾಯಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ಮಿಲ್ಕ್‌ ಬಾಟಲ್‌ ಕೆವಿಟಿಯನ್ನು ತಡೆಯಬಹುದು.

Whats_app_banner