ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸೇವಿಸಿ ರುಚಿಕರವಾದ ಬ್ರೊಕೊಲಿ ಸೂಪ್; ದೇಹವನ್ನು ಬೆಚ್ಚಗಿಡಲು ಸಹಕಾರಿ
ಈ ಚಳಿಗೆ ವಿಶೇಷವಾಗಿ ಬ್ರೊಕೊಲಿಯಿಂದ ತಯಾರಿಸಿದ ಸೂಪ್ ಅನ್ನು ಸೇವಿಸಬಹುದು. ಬ್ರೊಕೊಲಿಯು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಾಗೂ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ. ಈ ಶೀತ ಋತುವಿನಲ್ಲಿ ಬ್ರೊಕೊಲಿ ಸೂಪ್ ಸೇವಿಸುವುದು ಉತ್ತಮ. ಇಲ್ಲಿದೆ ರೆಸಿಪಿ.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಬಹುತೇಕ ಮಂದಿ ರಾತ್ರಿಯ ಊಟಕ್ಕೆ ಸೂಪ್ ಅನ್ನು ಹೆಚ್ಚಾಗಿ ಸೇವಿಸುತ್ತಾರೆ. ಹಲವಾರು ಬಗೆಯ ಸೂಪ್‍ಗಳನ್ನು ತಯಾರಿಸಬಹುದು. ಈ ಚಳಿಗೆ ವಿಶೇಷವಾಗಿ ಬ್ರೊಕೊಲಿಯಿಂದ ತಯಾರಿಸಿದ ಸೂಪ್ ಅನ್ನು ಸೇವಿಸಬಹುದು. ಈ ಪಾಕವಿಧಾನ ಬಹಳ ಸರಳವಾಗಿದೆ. ಬ್ರೊಕೊಲಿಯು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದೆ. ಇದರಲ್ಲಿ ಫೈಬರ್, ವಿಟಮಿನ್ಸ್, ಮಿನರಲ್ಸ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಇರುತ್ತವೆ. ಇದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಹೀಗಾಗಿ ಈ ಶೀತ ಋತುವಿನಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ, ಬ್ರೊಕೊಲಿ ಸೂಪ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ತಯಾರಿಸುವ ಮೂಲಕ, ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಬಹುದು. ಟೇಸ್ಟಿ ಬ್ರೊಕೊಲಿ ಸೂಪ್ ರೆಸಿಪಿ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಬಹುದು.
ಬ್ರೊಕೊಲಿ ಸೂಪ್ ರೆಸಿಪಿ ತಯಾರಿಸುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಬ್ರೊಕೊಲಿ- ಒಂದು, ಜೀರಿಗೆ (ಒರಟಾಗಿ ಪುಡಿಮಾಡಿದ)- 1 ಟೀ ಚಮಚ, ಕಾಳುಮೆಣಸು ಪುಡಿ- 1 ರಿಂದ 2 ಟೀ ಚಮಚ, ಕ್ರೀಮ್- 2 ಟೀ ಚಮಚ, ಕೊತ್ತಂಬರಿ ಸೊಪ್ಪು- 2 ಟೀ ಚಮಚ, ಎಣ್ಣೆ- 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು
ಸೂಪ್ ತಯಾರಿಸುವ ವಿಧಾನ: ಮೊದಲ ಹಂತ- ಬ್ರೊಕೊಲಿ ಸೂಪ್ ಮಾಡಲು, ಮೊದಲು ಬ್ರೊಕೊಲಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಇನ್ನೊಂದೆಡೆ ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಸಿ. ಅವುಗಳನ್ನು ಲಘುವಾಗಿ ಬೇಯಿಸಿದಾಗ, ಹೊರತೆಗೆಯಿರಿ.
ಎರಡನೇ ಹಂತ: ಈಗ ಬಾಣಲೆಯಲ್ಲಿ 1 ಟೀ ಚಮಚ ಎಣ್ಣೆಯನ್ನು ಹಾಕಿ, ನುಣ್ಣಗೆ ರುಬ್ಬಿದ ಜೀರಿಗೆ ಮತ್ತು ಕರಿಮೆಣಸಿನ ಪುಡಿಯನ್ನು ಸೇರಿಸಿ, ಲಘುವಾಗಿ ಹುರಿಯಿರಿ. ಅದರ ನಂತರ ಬೇಯಿಸಿದ ಹಸಿರು ಕೋಸುಗಡ್ಡೆ ಅಥವಾ ಬ್ರೊಕೊಲಿ ಸೇರಿಸಿ ಸುಮಾರು 5 ನಿಮಿಷಗಳ ಕಾಲ ಬೇಯಿಸಿ. ಈಗ ಸುಮಾರು 2 ಕಪ್ ನೀರು ಸೇರಿಸಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಬ್ರೊಕೊಲಿ ಚೆನ್ನಾಗಿ ಬೇಯುವವರೆಗೆ ಬೇಯಿಸಿ. ಅದು ಸಂಪೂರ್ಣವಾಗಿ ಬೆಂದಾಗ ಸ್ಟೌವ್ ಅನ್ನು ಆಫ್ ಮಾಡಿ.
ಮೂರನೇ ಹಂತ: ಎಲ್ಲವೂ ತಣ್ಣಗಾದ ನಂತರ, ಅದನ್ನು ಬ್ಲೆಂಡರ್‌ನಲ್ಲಿ ಹಾಕಿ ಮಿಶ್ರಣ ಮಾಡಿ. (ಕೋಸುಗಡ್ಡೆಯ ಕೆಲವು ಭಾಗವನ್ನು ಹೊರತೆಗೆಯಿರಿ). ಈಗ ನಿಮ್ಮ ಪೌಷ್ಟಿಕ ಬ್ರೊಕೋಲಿ ಸೂಪ್ ಸೇವಿಸಲು ಸಿದ್ಧವಾಗಿದೆ. ನಂತರ ಅದನ್ನು ಕೊತ್ತಂಬರಿ ಸೊಪ್ಪು, ಸ್ವಲ್ಪ ಬೇಯಿಸಿದ ಬ್ರೊಕೊಲಿ ಮತ್ತು ಚಿಟಿಕೆ ಕರಿಮೆಣಸಿನಿಂದ ಅಲಂಕರಿಸಿ, ಬಿಸಿ ಬಿಸಿಯಾಗಿ ಬಡಿಸಿ.
ಇದನ್ನು ಬಿಸಿ ಬಿಸಿಯಾಗಿಯೇ ಸವಿಯಲು ಬಹಳ ರುಚಿಕರವಾಗಿರುತ್ತದೆ. ಚಳಿಗಾಲವಾಗಿರುವುದರಿಂದ ಬಹುತೇಕರು ಚಳಿಗೆ ನಡುಗಿ ಹೋಗಿದ್ದಾರೆ. ಚಳಿ ಹೆಚ್ಚಿದ್ದು, ಜನತೆ ಬಿಸಿ ಬಿಸಿ ಪಾನೀಯ, ಬಿಸಿ ಆಹಾರಗಳತ್ತ ಮೊರೆ ಹೋಗುತ್ತಿದ್ದಾರೆ. ಹೀಗಿರುವಾಗ ಆರೋಗ್ಯಕರವಾದ ಆಹಾರ ಸೇವಿಸುವುದು ಬಹಳ ಮುಖ್ಯ. ಈ ಚಳಿಗಾಲಕ್ಕೆ ಈ ರೀತಿಯ ಸೂಪ್ ಮಾಡಿ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. ದೇಹವನ್ನು ಬೆಚ್ಚಗಿರಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.