ವರ್ಷದ ಬಳಿಕ ಬುಧ–ಶುಕ್ರ ಗ್ರಹಗಳ ಸಂಯೋಗ, ಸದ್ಯದಲ್ಲೇ ಈ 2 ರಾಶಿಯವರನ್ನ ಹುಡುಕಿ ಬರಲಿದೆ ಅದೃಷ್ಟ, ಲಕ್ಷ್ಮೀದೇವಿ ಒಲಿಯುವ ಕಾಲ
- ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಮತ್ತು ಶುಕ್ರನ ಸಂಯೋಜನೆಯನ್ನು ಅದೃಷ್ಟ ಎಂದು ಹೇಳಲಾಗುತ್ತದೆ. ಸದ್ಯದಲ್ಲೇ ಬುಧ ಹಾಗೂ ಶುಕ್ರ ಒಂದೇ ರಾಶಿಯಲ್ಲಿ ಸಂಧಿಸಲಿದ್ದಾರೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಹಣಕಾಸಿನ ಸಮಸ್ಯೆಗಳು ದೂರಾಗಲಿವೆ.
- ಜ್ಯೋತಿಷ್ಯಶಾಸ್ತ್ರದಲ್ಲಿ ಬುಧ ಮತ್ತು ಶುಕ್ರನ ಸಂಯೋಜನೆಯನ್ನು ಅದೃಷ್ಟ ಎಂದು ಹೇಳಲಾಗುತ್ತದೆ. ಸದ್ಯದಲ್ಲೇ ಬುಧ ಹಾಗೂ ಶುಕ್ರ ಒಂದೇ ರಾಶಿಯಲ್ಲಿ ಸಂಧಿಸಲಿದ್ದಾರೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಹಣಕಾಸಿನ ಸಮಸ್ಯೆಗಳು ದೂರಾಗಲಿವೆ.
(1 / 9)
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಜನೆಗೆ ವಿಶೇಷ ಮಹತ್ವವಿದೆ. ಅದರಲ್ಲೂ ಬುಧ ಹಾಗೂ ಶುಕ್ರ ಒಂದೇ ರಾಶಿಯಲ್ಲಿ ಸಂಧಿಸುವುದು ಅದೃಷ್ಟ ಎಂದು ಹೇಳಲಾಗುತ್ತದೆ. ಇದರಿಂದ ದ್ವಾದಶ ರಾಶಿಗಳ ಮೇಲೆ ವಿಶೇಷ ಪರಿಣಾಮ ಉಂಟಾಗಲಿದ್ದು ಕೆಲವು ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ,
(2 / 9)
ಅಕ್ಟೋಬರ್ 13 ರಂದು ಬೆಳಿಗ್ಗೆ 5:49ಕ್ಕೆ ಶುಕ್ರನು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧನು ಅಕ್ಟೋಬರ್ 29ರಂದು ರಾತ್ರಿ 10:24ಕ್ಕೆ ವೃಶ್ಚಿಕ ರಾಶಿಯನ್ನು ಸಂಕ್ರಮಿಸುತ್ತಾನೆ.
(3 / 9)
ಇದರಿಂದ ಒಂದೇ ರಾಶಿಯಲ್ಲಿ ಬುಧ-ಶುಕ್ರರ ಸಂಯೋಗವಾಗುತ್ತದೆ. ನವೆಂಬರ್ 07ರವರೆಗೆ ವೃಶ್ಚಿಕ ರಾಶಿಯಲ್ಲಿರುತ್ತಾರೆ. ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒಲಿಯಲಿದೆ. ಬದುಕಿನ ಸಂಕಷ್ಟಗಳು ದೂರಾಗಲಿವೆ.
(4 / 9)
ವೃಶ್ಚಿಕ ರಾಶಿಯಲ್ಲಿ ಬುಧ ಮತ್ತು ಶುಕ್ರ ಸಂಯೋಗ ಇರುವುದರಿಂದ ಈ ರಾಶಿಯವರಿಗೆ ಪ್ರಯೋಜನವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಘನತೆ ಹೆಚ್ಚುತ್ತದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರುತ್ತದೆ ಮತ್ತು ಆ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ.
(5 / 9)
ವೃಶ್ಚಿಕ ರಾಶಿಯ ವ್ಯಾಪಾರಸ್ಥರಿಗೆ ಲಾಭವಾಗಲಿದೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರುತ್ತದೆ. ಗಂಡ–ಹೆಂಡತಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಬದುಕುತ್ತಾರೆ. ನಿಮ್ಮ ನಡುವಿನ ಯಾವುದೇ ಭಿನ್ನಾಭಿಪ್ರಾಯಗಳನ್ನು ಪರಿಹರಿವಾಗುತ್ತದೆ. ಒಟ್ಟಾರೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
(6 / 9)
ಮಕರ ರಾಶಿಯವರಿಗೆ ಬುಧ-ಶುಕ್ರ ಸಂಯೋಗ ಅದ್ಭುತವಾಗಿದೆ. ಈ ಅವಧಿಯಲ್ಲಿ ನೀವು ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ವೃತ್ತಿ ಜೀವನದಲ್ಲಿ ಸಮಸ್ಯೆ ಬಗೆಹರಿಯುತ್ತದೆ.
(7 / 9)
ಆರ್ಥಿಕವಾಗಿ ಬಹಳ ಲಾಭದಾಯಕ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೀರಿ. ಹಿಂದಿನ ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕುಟುಂಬ ಜೀವನವು ಉತ್ತಮವಾಗಿರುತ್ತದೆ.
(8 / 9)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು