ಚೆನ್ನೈಗೆ ಮರಳಿದ ಡಿ ಗುಕೇಶ್; ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್‌ಗೆ ಭಾರತದಲ್ಲಿ ಭವ್ಯ ಸ್ವಾಗತ
- ಸಿಂಗಾಪುರದಲ್ಲಿ ನಡೆದ ಫಿಡೆ (FIDE) ವಿಶ್ವ ಚೆಸ್ ಚಾಂಪಿಯನ್‌ಪ್‌ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಡಿ ಗುಕೇಶ್ ಭಾರತಕ್ಕೆ ಮರಳಿದ್ದಾರೆ. ಚೀನಾದ ಡಿಂಗ್ ಲಿರೆನ್ ವಿರುದ್ಧ ಅಮೋಘ ಗೆಲುವು ಸಾಧಿಸಿದ ಗುಕೇಶ್, ಚೆಸ್ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

(1 / 7)
ಸಿಂಗಾಪುರದಲ್ಲಿ ಎರಡು ವಾರಗಳ ಕಾಲ ನಡೆದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ಚಾಂಪಿಯನ್ ಡಿಂಗ್ ಅವರನ್ನು ಸೋಲಿಸುವ ಮೂಲಕ ಗುಕೇಶ್ ಇತಿಹಾಸ ನಿರ್ಮಿಸಿದರು. ಆ ಮೂಲಕ ವಿಶ್ವನಾಥನ್ ಆನಂದ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು.(AFP)
(2 / 7)
ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರ ಹೆಜ್ಜೆಗಳನ್ನು ಅನುಸರಿಸಿದ ಗುಕೇಶ್, ಭಾರತದ ಎರಡನೇ ವಿಶ್ವ ಚೆಸ್ ಚಾಂಪಿಯನ್ ಆದರು.(PTI)
(3 / 7)
ಕೇವಲ 18 ನೇ ವಯಸ್ಸಿನಲ್ಲಿಯೇ ಗುಕೇಶ್ ಇತಿಹಾಸ ನಿರ್ಮಿಸಿದ್ದಾರೆ. ಕ್ಯಾಂಡಿಡೇಟ್ಸ್ ಪಂದ್ಯಾವಳಿಯಲ್ಲಿ ತಮ್ಮ ಸಾಧನೆಯಿಂದಾಗಿ ಭಾರತದಲ್ಲಿ ಹೀರೋ ಆಗಿದ್ದಾರೆ.(PTI)
(4 / 7)
ಐತಿಹಾಸಿಕ ಗೆಲವಿನ ಬಳಿಕ ಗುಕೇಶ್ ತಮ್ಮ ಹುಟ್ಟೂರಾದ ಚೆನ್ನೈಗೆ ಮರಳಿದ್ದಾರೆ. ದೇಶಕ್ಕೆ ಹಲವಾರು ಚೆಸ್ ಗ್ರಾಂಡ್ ಮಾಸ್ಟರ್‌ಗಳನ್ನು ಕೊಟ್ಟ ಊರಾದ ಚೆನ್ನೈನಲ್ಲಿ, ಗುಕೇಶ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.(PTI)
(5 / 7)
ಚೆನ್ನೈನ ವಿಮಾನ ನಿಲ್ದಾಣದಲ್ಲಿ ನೂತನ ವಿಶ್ವ ಚಾಂಪಿಯನ್‌ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಅವರನ್ನು ಅಭಿನಂದಿಸಲಿ ಮತ್ತು ಸ್ವಾಗತಿಸಲು ಹಲವಾರು ಅಭಿಮಾನಿಗಳು ಕಾಯುತ್ತಿದ್ದರು. ಇದೇ ವೇಳೆ ಮಾಧ್ಯಮಗಳ ಕ್ಯಾಮೆರಾಗಳು ಕೂಡಾ ಅವರತ್ತ ಜೂಮ್ ಹಾಕಿದವು.(PTI)
(6 / 7)
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಟ್ರೋಫಿಯನ್ನು ಭಾರತಕ್ಕೆ ಮರಳಿ ತರುವುದು ತುಂಬಾ ಅರ್ಥಪೂರ್ಣ ಕ್ಷಣವಾಗಿದೆ. ಈ ಸ್ವಾಗತಕ್ಕಾಗಿ ಧನ್ಯವಾದಗಳು" ಎಂದು ಅವರು ಹೇಳಿದ್ದಾರೆ.(PTI)
ಇತರ ಗ್ಯಾಲರಿಗಳು