Zakir Hussain: ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದ್ದ ಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ ಅವರ ಅಪರೂಪದ ಫೋಟೊಗಳು ಇಲ್ಲಿವೆ
- ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ 73ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ತಮ್ಮ ಸಂಗೀತದಿಂದ 4 ಗ್ರ್ಯಾಮಿ ಪ್ರಶಸ್ತಿಗಳು ಹಾಗೂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದ ಜಾಕಿರ್ ಹುಸೇನ್ ಅವರು ಭಾರತದಿಂದ ಜಗತ್ತಿಗೆ ಸಂಗೀತದ ರಾಯಭಾರಿಯಾಗಿದ್ದವರು. ತಬಲಾ ಮಾಂತ್ರಿಕ ಹುಸೇನ್ ಅವರ ಅಪರೂಪದ ಫೋಟೊಗಳು ಇಲ್ಲಿವೆ.
- ವಿಶ್ವವಿಖ್ಯಾತ ತಬಲಾ ವಾದಕ ಜಾಕಿರ್ ಹುಸೇನ್ 73ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ತಮ್ಮ ಸಂಗೀತದಿಂದ 4 ಗ್ರ್ಯಾಮಿ ಪ್ರಶಸ್ತಿಗಳು ಹಾಗೂ ಪದ್ಮವಿಭೂಷಣ ಗೌರವಕ್ಕೆ ಪಾತ್ರರಾಗಿದ್ದ ಜಾಕಿರ್ ಹುಸೇನ್ ಅವರು ಭಾರತದಿಂದ ಜಗತ್ತಿಗೆ ಸಂಗೀತದ ರಾಯಭಾರಿಯಾಗಿದ್ದವರು. ತಬಲಾ ಮಾಂತ್ರಿಕ ಹುಸೇನ್ ಅವರ ಅಪರೂಪದ ಫೋಟೊಗಳು ಇಲ್ಲಿವೆ.
(1 / 6)
ತಬಲಾ ಅಂದರೆ ಜಾಕಿರ್ ಹುಸೇನ್, ಜಾಕಿರ್ ಹುಸೇನ್ ಅಂದರೆ ತಬಲಾ ಎನ್ನುವ ಮಟ್ಟಿಗೆ ಭಾರತ ಮಾತ್ರವಲ್ಲದೆ, ಜಾಗತಿಕವಾಗಿಯೂ ಜನಪ್ರಿಯವಾಗಿದ್ದ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಅವರು ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದ್ದವರು. 6 ದಶಕಗಳ ಕಾಲ ತಬಲಾ ನುಡಿಸಿರುವ ಕೀರ್ತಿಗೆ ಭಾಜನವಾಗಿರುವ ಹುಸೇನ್ ಅವರ ಬಲು ಅಪರೂಪದ ಫೋಟೊಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.(Photo: Dayanita Singh | via: livemint.com)
(2 / 6)
ಪ್ರಸಿದ್ಧ ತಬಲಾ ವಾದಕರಾಗಿದ್ದ ಉಸ್ತಾದ್ ಅಲ್ಲಾ ರಖಾ ಅವರ ಪುತ್ರ ಜಾಕೀರ್ ಹುಸೇನ್ ಅವರು ತಮ್ಮ 3ನೇ ವಯಸ್ಸಿಗೆ ತಬಲಾ ನುಡಿಸಾಣಿಕೆಯನ್ನು ಆರಂಭಿಸಿದರು. ತಮ್ಮ 7ನೇ ವಯಸ್ಸಿಗೆ ತಂದೆ ಅಲ್ಲಾ ರಖಾ ಅವರ ನೇತೃತ್ವದಲ್ಲಿ ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದ್ದರು.(Photo: Dayanita Singh | via: livemint.com)
(3 / 6)
ಛಾಯಾಗ್ರಾಹಕರಾದ ದಯಾನಿತಾ ಸಿಂಗ್ ಅವರ ಕೇಶ ವಿನ್ಯಾಸಕ್ಕೆ ಜಾಕೀರ್ ಹುಸೇನ್ ಅವರು ನೆರವಾಗುತ್ತಿರುವ ದೃಶ್ಯ. 1980ರ ದಶಕದಲ್ಲಿ ಅಪರಿಚಿತ ಛಾಯಾಗ್ರಾಹಕರೊಬ್ಬರು ಇದನ್ನು ಸೆರೆ ಹಿಡಿದಿದ್ದರು.(Photo: Dayanita Singh | via: livemint.com)
(4 / 6)
ಜಾಕಿರ್ ಹುಸೇನ್ ಅವರು ಆಂಟೋನಿಯಾ ಮಿನ್ನೆಕೋಲಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಅನಿಸಾ ಖುರೇಷಿ, ಇಸಾಬೆಲ್ಲಾ ಖುರೇಷಿ ಎಂಬ ಇಬ್ಬರು ಪುತ್ರಿಯರು ಇದ್ದಾರೆ.(Photo: Dayanita Singh | via: livemint.com)
(5 / 6)
ತಬಲಾ ನುಡಿಸುವುದನ್ನು ಜೀವವನ್ನಾಗಿಸಿಕೊಂಡಿದ್ದ ಜಾಕಿರ್ ಹುಸೇನ್ ಅವರು ಸಂಗೀತ ಸಂಯೋಜಕರಾಗಿಯೂ ಖ್ಯಾತಿಯನ್ನು ಗಳಿಸಿದ್ದಾರೆ. ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.(Photo: Dayanita Singh | via: livemint.com)
ಇತರ ಗ್ಯಾಲರಿಗಳು