Chennai: ಚೆನ್ನೈನಲ್ಲಿ ತಗ್ಗಿದ ಮಳೆ, ಪ್ರವಾಹ ಪರಿಸ್ಥಿತಿ; ರಕ್ಷಣಾ ಕಾರ್ಯಾಚರಣೆ ಚುರುಕು, ಯಥಾಸ್ಥಿತಿಗೆ ಮರಳುತ್ತಿರುವ ನಗರ; ಫೋಟೊಸ್
ಚೆನ್ನೈನಲ್ಲಿ ಬಿರುಗಾಳಿ ಸಹಿತಿ ಭಾರಿ ಮಳೆ ನಿಂತಿದ್ದು, ಪ್ರವಾಹ ಪರಿಸ್ಥಿತಿಯೂ ಕಡಿಮೆಯಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಚುರುಕಿನಿಂದ ಸಾಗಿದ್ದು, ನಗರ ಯಥಾಸ್ಥಿತಿಗೆ ಮರಳುತ್ತಿದೆ.
(1 / 10)
ಮಿಚಾಂಗ್ ಚಂಡಮಾರುತದಿಂದಾಗಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಡಿಸೆಂಬರ್ 3 ರಿಂದ 5ರವೆಗೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಪರಿಣಾಮವಾಗಿ ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದಲ್ಲಿ ಮಳೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ತುಂಬಿರುವ ನೀರಿನಲ್ಲೇ ವೃದ್ಧೆಯೊಬ್ಬರು ಬರುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.(AFP)
(2 / 10)
ಚೆನ್ನೈನ ಮೈಲಾಪುರದಲ್ಲಿ ತುರ್ತು ಸೇವಾ ಸಿಬ್ಬಂದಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವ ಕಾರ್ಯವನ್ನು ಮುಂದುವರಿಸಿದ್ದಾರೆ. (PTI)
(3 / 10)
ಮಳೆ ಕಡಿಮೆಯಾದರೂ ಮಳೆ ನೀರು ಮಾತ್ರ ಕಡಿಮೆಯಾಗಿಲ್ಲ. ಕೆಲ ರಸ್ತೆಗಳಲ್ಲಿ ಮಳೆ ನೀರು ಹರಿಯುುತ್ತಲೇ ಇರುವುದರಿಂದ ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗಿದೆ.(PTI)
(4 / 10)
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಧರೆಗುರುಳಿದ್ದು, ಮರಗಳ ತೆರವು ಕಾರ್ಯಾಚರಣೆ ಮುಂದುವರಿಸಿದೆ.(PTI)
(5 / 10)
ಚೆನ್ನೈ ನಗರದಲ್ಲಿ ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಜನರ ದಿನನಿತ್ಯದ ಸರಕು ಕೊಳ್ಳಲು ತಾತ್ಕಾಲಿಕ ಬೋಟುಗಳನ್ನು ಬಳಸುವಂತಹ ಸ್ಥಿತಿ ನಿರ್ಮಾಣವಾಗಿದೆ. ವ್ಯಕ್ತಿಯೊಬ್ಬರು ತರಕಾರಿಗಳನ್ನು ಖರೀದಿಸಿ ಬೋಟ್‌ನಲ್ಲೇ ಮನೆಗೆ ತೆರಳುತ್ತಿರುವುದನ್ನ ಫೋಟೊದಲ್ಲಿ ಕಾಣಬಹುದು.(PTI)
(6 / 10)
ಮಿಚಾಂಗ್ ಚಂಡಮಾರುತದಿಂದಾಗಿ ಚೆನ್ನೈನಲ್ಲಿ ಕಳೆದ ಮಂಗಳವಾರ (ಡಿಸೆಂಬರ್ 5) ಭಾರಿ ಮಳೆಯಾಗಿರುವ ಕಾರಣ ರಸ್ತೆಗಳಲ್ಲಿ ಮಳೆ ನೀರು ಕೋಡಿಯ ರೀತಿಯಲ್ಲಿ ಹರಿಯುತ್ತಿದೆ. ವ್ಯಕ್ತಿಯೊಬ್ಬರು ಹರಿಯುತ್ತಿದ್ದ ಮೊಣಕಾಲುದ್ದದ ನೀರಿನಲ್ಲೇ ಮಗುವಿನೊಂದಿಗೆ ಸಾಗುತ್ತಿರುವ ದೃಶ್ಯ ಅಲ್ಲಿನ ಪರಿಸ್ಥಿತಿ ಹಿಡಿದ ಕೈಗನ್ನಡಿಯಂತಿದೆ.(AFP)
(7 / 10)
ಚೆನ್ನೈನಲ್ಲಿ ಸುರಿದ ಭಾರಿ ಮಳೆಗೆ ಅಲ್ಲಿನ ಜನ ಹೈರಾಣವಾಗಿದ್ದಾರೆ. ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನಗರ ನಿಧಾನವಾಗಿ ಯಥಾಸ್ಥಿತಿಗೆ ಬರುತ್ತಿದೆ.(PTI)
(8 / 10)
ಮಿಚಾಂಗ್ ಚಂಡಮಾರುತದ ಪರಿಣಾಮವಾಗಿ ಚೆನ್ನೈನ ಮರೀನಾ ಬೀಚ್‌ನಲ್ಲಿ ದೊಡ್ಡ ಅಲೆಗಳು ಉಂಟಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಎಸೆದಿದ್ದ ತ್ಯಾಜ್ಯ ವಸ್ತುಗಳು ಸಮುದ್ರದ ತಟ್ಟಕ್ಕೆ ತೇಲಿ ಬಂದಿವೆ.(AFP)
(9 / 10)
ರಸ್ತೆಗಳು ಜಲಾವೃತವಾಗಿದ್ದ ಪರಿಣಾಮ ಮನೆಗಳಲ್ಲೇ ಸಿಲುಕಿದ್ದವರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಬೋಟ್‌ಗಳನ್ನು ಬಳಿಸಿ ರಕ್ಷಿಸಿದ್ದಾರೆ.(PTI)
(10 / 10)
Stranded passengers gather at a railway station while waiting for their trains after heavy rains in Chennai on December 6, 2023. Chest-high water surged down the streets of India's southern city Chennai on December 5, with eight people killed in intense floods as Cyclone Michaung made landfall on the southeast coast. (Photo by AFP)(AFP)
ಇತರ ಗ್ಯಾಲರಿಗಳು