Chennai Rains: ಅಲ್ಲಲ್ಲಿ ನೀರಿನ ಅಬ್ಬರ, ಕೆಲವೆಡೆ ನಿರಾಳ: ಚೆನ್ನೈನಲ್ಲಿ ಮಳೆ ನಿಂತ ನಂತರ ಚಿತ್ರಣ ಹೀಗಿದೆ.
- Chennai Rains ಚೆನ್ನೈ ಮಹಾನಗರದಲ್ಲಿ ಎರಡು ದಿನ ಭಾರೀ ಮಳೆ. ಸೋಮವಾರವಂತೂ ಇಡೀ ಚೆನ್ನೈ ನಗರಿ ದ್ವೀಪ ಸ್ವರೂಪವನ್ನೇ ಪಡೆದಿತ್ತು. ಚಂಡಮಾರುತ ಚದುರಿದ ಬಳಿಕ ಮಳೆ ಕಡಿಮೆಯಾಗಿದೆ. ಆದರೂ ಮಹಾಮಳೆಯ ಭಯ ಇನ್ನೂ ಜನರಲ್ಲಿದೆ. ಮಳೆ ನಿಂತ ಮೇಲೆ ಚೆನ್ನೈ ನಗರದ ಸ್ಥಿತಿ ಗತಿ ನೋಡಿದರೆ ಹೀಗೆ ಮಳೆಬಂದಿತ್ತಾ ಅನ್ನಿಸದೇ ಇರದು. ಮಂಗಳವಾರ ಬೆಳಗಿನ ಚೆನ್ನೈ ಚಿತ್ರಣ ಇಲ್ಲಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 7)
ಚೆನ್ನೈನಲ್ಲಿ ಮಳೆ ನಿಂತರೂ ಮನೆಯ ಅಕ್ಕಪಕ್ಕ ನಿಂತಿರುವ ನೀರು ಇನ್ನೂ ಹಾಗೆಯೇ ಇದೆ, ಇದು ರೋಗ ಭೀತಿಗೂ ಕಾರಣವಾಗಿದೆ. ಚೆನ್ನೈನ ಮಡಿ ಪಕ್ಕಂ ಎಂಬಲ್ಲಿ ಕಂಡು ಬಂದ ಚಿತ್ರಣವಿದು.
(2 / 7)
ಚೆನ್ನೈನ ನೀರು ಶುದ್ದೀಕರಣ ಘಟಕವೊಂದರ ಬಳಿ ನೀರು ಭಾರೀ ಪ್ರಮಾಣದಲ್ಲೀ ಈಗಲೂ ನಿಂತಿದೆ. ಇದರಲ್ಲಿ ಸಿಲುಕಿರುವ ಮಹಾನಗರ ಪಾಲಿಕೆಗೆ ಸೇರಿದ ಲಾರಿ.
(3 / 7)
ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿ ಈಗಲೂ ನೀರು ಹರಿದು ಬರುತ್ತಲೇ ಇದೆ. ಇದರಿಂದ ಮನೆಯಿಂ ಹೊರಬರಲು ಜನರು ದೋಣಿ ಆಶ್ರಯಿಸುವ ಸ್ಥಿತಿ ಇನ್ನೂ ಇದೆ. ಮಂಗಳವಾರವೂ ಈ ಪ್ರದೇಶದಲ್ಲಿ ನೀರು ಹರಿದು ಹೋಗುತ್ತಲೇ ಇತ್ತು.
(4 / 7)
ಇದು ಚೆನ್ನೈನ ಅಬ್ದುಲ್ ಕಲಾಂ ನಗರ. ಇಲ್ಲಿನ ಹಲವಾರು ಮನೆಗಳು ನೀರಿನಿಂದ ಆವೃತವಾಗಿವೆ. ರಸ್ತೆಯಲ್ಲೂ ನೀರು ನಿಂತಿರುವುದರಿಂದ ಜನ ನೀರು ಕರಗಲು ಕಾಯುತ್ತಲೇ ಇದ್ದಾರೆ. ಮನೆಗಳಿಗೂ ನೀರು ನುಗ್ಗಿರುವುದರಿಂದ ಜನ ಮಳೆಯನ್ನು ಶಪಿಸಿಕೊಳ್ಳುತ್ತಲೇ ಇದ್ದಾರೆ.
(5 / 7)
ಮಂಗಳವಾರ ಮಳೆ ನಿಂತ ನಂತರ ಚೆನ್ನೈನಲ್ಲಿ ಎರಡು ದಿನದಿಂದ ಕಷ್ಟಕ್ಕೆ ಸಿಲುಕಿದ ಪ್ರಾಣಿಗಳಿಗೂ ಕೊಂಚ ನಿರಾಳ. ಬಡಾವಣೆಯೊಂದರಲ್ಲಿ ನಾಯಿಯೊಂದು ನಿಂತಿದ್ದು ಕಂಡು ಬಂದಿದ್ದು ಹೀಗೆ.
(6 / 7)
ಚೆನ್ನೈನ ಮೈಲಾಪುರ ಪ್ರದೇಶದ ಮುಖ್ಯ ರಸ್ತೆಯಿದು. ಭಾರೀ ಮಳೆಯಿಂದ ಇದೇ ರಸ್ತೆಯಲ್ಲ ಸೋಮವಾರ ಭಾರೀ ನೀರು ನಿಂತಿತ್ತು. ಮಳೆ ನಿಂತಿದ್ದರಿಂದ ನೀರು ಹರಿದು ಹೋಗಿ ಬಡಾವಣೆ ರಸ್ತೆ ಈಗ ಈ ರೀತಿ ಕಾಣಿಸುತ್ತಿದೆ.
ಇತರ ಗ್ಯಾಲರಿಗಳು