ರತನ್ ಟಾಟಾ ಅವರ ಕಾರು ಕ್ರೇಜ್‌; ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳ ಸಂಗ್ರಹ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರತನ್ ಟಾಟಾ ಅವರ ಕಾರು ಕ್ರೇಜ್‌; ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳ ಸಂಗ್ರಹ

ರತನ್ ಟಾಟಾ ಅವರ ಕಾರು ಕ್ರೇಜ್‌; ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳ ಸಂಗ್ರಹ

ಟಾಟಾ ಗ್ರೂಪ್‌ ಚೇರ್‌ಮನ್ ಆಗಿದ್ದ ಉದ್ಯಮ ಕ್ಷೇತ್ರದ ದಂತಕಥೆ ದಿವಂಗತ ರತನ್‌ ಟಾಟಾ ಅವರಿಗೆ ಕಾರುಗಳು ಎಂದರೆ ಪಂಚಪ್ರಾಣ. ಸಹಜವಾಗಿಯೆ ಅವರ ಬಳಿ ಬಹಳಷ್ಟು ಕಾರುಗಳ ಸಂಗ್ರಹವಿತ್ತು. ಇದರಲ್ಲಿ ಅವರದ್ದೇ ಕಂಪನಿಯ ನ್ಯಾನೋ, ನೆಕ್ಸಾನ್‌ನಿಂದ ಹಿಡಿದು ಫೆರಾರಿ ತನಕ ಹಲವು ಕಾರುಗಳಿವೆ. ಅವುಗಳಲ್ಲಿ ಆಯ್ದವುಗಳ ಚಿತ್ರನೋಟ ಇಲ್ಲಿದೆ.

ಮರ್ಸಿಡೆಸ್ 500 ಎಸ್‌ಎಲ್‌ ಕಾರು ಚಲಾಯಿಸಲು ಕುಳಿತ ಸಂದರ್ಭದ ಹಳೆಯ ಫೋಟೋ. 
icon

(1 / 10)

ಮರ್ಸಿಡೆಸ್ 500 ಎಸ್‌ಎಲ್‌ ಕಾರು ಚಲಾಯಿಸಲು ಕುಳಿತ ಸಂದರ್ಭದ ಹಳೆಯ ಫೋಟೋ. (Hormazd Sorabjee / HT News)

ಟಾಟಾ ನ್ಯಾನೋ ಇವಿ - ಟಾಟಾ ಮೋಟಾರ್ಸ್ ವಿದ್ಯುತ್ ಚಾಲಿತ ಕಾರುಗಳ ಪ್ರಯೋಗಕ್ಕೆ ಮುಂದಾದಾಗ ನ್ಯಾನೋ ಇವಿ ಕಾರು ತಯಾರಿಸಿ ಹಿಮ್ಮಾಹಿತಿ ಪಡೆಯಲು ಈ ಕಾರನ್ನು ಟಾಟಾ ಅವರಿಗೆ ನೀಡಿತ್ತು. ಚಿತ್ರದಲ್ಲಿ ಶಂತನು ನಾಯ್ಡು ಮತ್ತು ರತನ್ ಟಾಟಾ ಇದ್ದಾರೆ.
icon

(2 / 10)

ಮರ್ಸಿಡೆಸ್ ಬೆನ್ಝ್ 500 ಎಸ್‌ಎಲ್ ಕಾರು ಕೂಡ ರತನ್ ಟಾಟಾ ಅವರ ಬಳಿ ಇತ್ತು.
icon

(3 / 10)

ಮರ್ಸಿಡೆಸ್ ಬೆನ್ಝ್ 500 ಎಸ್‌ಎಲ್ ಕಾರು ಕೂಡ ರತನ್ ಟಾಟಾ ಅವರ ಬಳಿ ಇತ್ತು.

ಲ್ಯಾಂಡ್ ರೋವರ್ ಫ್ರೀಲ್ಯಾಂಡರ್ ಕಾರು ಕೂಡ ರತನ್ ಟಾಟಾ ಅವರ ಸಂಗ್ರಹದಲ್ಲಿತ್ತು. ಇದು 44 ಕೋಟಿ ರೂಪಾಯಿ ಮೌಲ್ಯದ ಕಾರು.
icon

(4 / 10)

ನೀಲಿ ಬಣ್ಣದ ಟಾಟಾ ನೆಕ್ಸಾನ್ ಕಾರನ್ನೂ ಅವರು ಬಳಸುತ್ತಿದ್ದರು. 
icon

(5 / 10)

ನೀಲಿ ಬಣ್ಣದ ಟಾಟಾ ನೆಕ್ಸಾನ್ ಕಾರನ್ನೂ ಅವರು ಬಳಸುತ್ತಿದ್ದರು. 

ರತನ್ ಟಾಟಾ ಅವರು ಹಿಂದೆ ಹೋಂಡಾ ಸಿವಿಕ್ ಕಾರನ್ನು ಕೂಡ ಬಳಸುತ್ತಿದ್ದರು. ಹಿಂದೊಮ್ಮೆ ಹೋಂಡಾ ಸಿವಿಕ್ ಕಾರನ್ನು ಬಹಳ ಜನ ಇಷ್ಟಪಟ್ಟಿದ್ದರು. ಈ ಕಾರನ್ನು ಸ್ವತಃ ಅವರೇ ಚಲಾಯಿಸುತ್ತಿದ್ದರು.
icon

(6 / 10)

ಮರ್ಸಿಡೆಸ್ ಬೆನ್ಝ್‌ ಎಸ್‌ ಕ್ಲಾಸ್‌ ಕಾರು ಕೂಡ ರತನ್ ಟಾಟಾ ಬಳಿ ಇತ್ತು. ಕಪ್ಪು ಬಣ್ಣದ ಈ ಕಾರಿನಲ್ಲಿ ಅವರು ಹಿಂಬದಿ ಸೀಟಿನಲ್ಲಿ ಕುಳಿತು ಮುಂಬಯಿಯಲ್ಲಿ ಪ್ರಯಾಣಿಸಿದ್ದು ಅನೇಕ ಬಾರಿ ಗಮನಸೆಳೆದಿದೆ.
icon

(7 / 10)

ಫೆರಾರಿ ಕ್ಯಾಲಿಫೋರ್ನಿಯಾ ಕಾರು ಕೂಡ ರತನ್‌ ಟಾಟಾ ಅವರ ಬಳಿ ಇತ್ತು. ಇದು ಅವರ ಕಾರು ಸಂಗ್ರಹದಲ್ಲಿ ಎದ್ದು ಕಾಣುವಂತೆ ಇತ್ತು.
icon

(8 / 10)

ಫೆರಾರಿ ಕ್ಯಾಲಿಫೋರ್ನಿಯಾ ಕಾರು ಕೂಡ ರತನ್‌ ಟಾಟಾ ಅವರ ಬಳಿ ಇತ್ತು. ಇದು ಅವರ ಕಾರು ಸಂಗ್ರಹದಲ್ಲಿ ಎದ್ದು ಕಾಣುವಂತೆ ಇತ್ತು.(Hormazd Sorabjee/ HT News)

ರತನ್ ಟಾಟಾ ಅವರ ಕಾರು ಸಂಗ್ರಹದಲ್ಲಿದ್ದ ಇನ್ನೊಂದು ಐಷಾರಾಮಿ ಕಾರು. ಮಸೆರಟಿ ಕ್ವಾಟ್ರೋಪೋರ್ಟೆ. ಇದು 5ನೇ ತಲೆಮಾರಿನ ಸೆಡಾನ್ ಕಾರು. ಎಂ139 ಎಂದೇ ಜನಪ್ರಿಯವಾಗಿದ್ದ ಕಾರು ಇದು.
icon

(9 / 10)

ಕಾಡಿಲ್ಯಾಕ್‌ ಎಲ್‌ಎಚ್‌ಡಿ ಕಾರು ರತನ್ ಟಾಟಾ ಅವರ ಐಷಾರಾಮಿ ಕಾರುಗಳ ಪಟ್ಟಿಯಲ್ಲಿದೆ. ಅಮೆರಿಕದ ಈ ಕಾರು ಕೂಡ ಗಮನಸೆಳೆಯುವಂತೆ ಇದೆ. ಇದೇ ರೀತಿ ಇನ್ನೂ ಹತ್ತಾರು ಐಷಾರಾಮಿ ಕಾರುಗಳು ವಿಶೇಷವಾಗಿ, ಪಾಂಟಿಯಾಕ್ ಫೈರ್‌ ಬರ್ಡ್‌ 400, ಜಾಗ್ವಾರ್ ಎಫ್‌ ಟೈಪ್‌ ಎಸ್‌ ಕೂಡ ಇವೆ. 
icon

(10 / 10)

ಇತರ ಗ್ಯಾಲರಿಗಳು