ಲ್ಯಾಪ್‌ಟಾಪ್ ಬ್ಯಾಟರಿ ಚಾರ್ಜ್ ದೀರ್ಘಕಾಲ ಉಳಿಸೋದು ಹೇಗೆ? ಈ 10 ಟಿಪ್ಸ್ ಪಾಲಿಸಿದ್ರೆ ಪವರ್ ಕಟ್ ಸಮಯದಲ್ಲೂ ನಿಶ್ಚಿಂತೆ
- ಲ್ಯಾಪ್‌ಟಾಪ್ ಬ್ಯಾಟರಿ ಚಾರ್ಜ್ ಹೆಚ್ಚು ಸಮಯ ಬಾರದೇ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಾರೆ. ವಿಶೇಷವಾಗಿ ವರ್ಕ್ ಫ್ರಮ್ ಹೋಮ್ ಸಂದರ್ಭದಲ್ಲಿ ಬ್ಯಾಟರಿ ಬ್ಯಾಕಪ್ ಉತ್ತಮವಾಗಿರುವುದು ಅಗತ್ಯ. ನಿಮ್ಮ ಬ್ಯಾಟರಿ ಬ್ಯಾಕಪ್ ಹೆಚ್ಚು ಹೊತ್ತು ಇರಬೇಕಿದ್ದರೆ ಈ ಹತ್ತು ಸಲಹೆ ಪಾಲಿಸಿ.
- ಲ್ಯಾಪ್‌ಟಾಪ್ ಬ್ಯಾಟರಿ ಚಾರ್ಜ್ ಹೆಚ್ಚು ಸಮಯ ಬಾರದೇ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಾರೆ. ವಿಶೇಷವಾಗಿ ವರ್ಕ್ ಫ್ರಮ್ ಹೋಮ್ ಸಂದರ್ಭದಲ್ಲಿ ಬ್ಯಾಟರಿ ಬ್ಯಾಕಪ್ ಉತ್ತಮವಾಗಿರುವುದು ಅಗತ್ಯ. ನಿಮ್ಮ ಬ್ಯಾಟರಿ ಬ್ಯಾಕಪ್ ಹೆಚ್ಚು ಹೊತ್ತು ಇರಬೇಕಿದ್ದರೆ ಈ ಹತ್ತು ಸಲಹೆ ಪಾಲಿಸಿ.
(1 / 10)
ಸಲಹೆ 1: ಲ್ಯಾಪ್‌ಟಾಪ್‌ನಲ್ಲಿರುವ ಪರ್ಫಾಮೆನ್ಸ್ ಮ್ಯಾನೇಜ್‌ಮೆಂಟ್ ಟೂಲ್ (performance management tool) ಬಳಕೆ ಮಾಡಲು ಮರೆಯಬೇಡಿ. ಈ ಟೂಲ್ ಎಲ್ಲಿದೆ ಅಂತೀರ? ಟಾಸ್ಕ್ ಬಾರ್ ಪಕ್ಕ ಇರುವ ಬ್ಯಾಟರಿ ಐಕಾನ್ ಕ್ಲಿಕ್ ಮಾಡುವ ಮೂಲಕ ನೀವು ಇಲ್ಲಿಗೆ ಪ್ರವೇಶಿಸಬಹುದು. ಅಲ್ಲಿ ಬ್ಯಾಟರಿ ಹೆಚ್ಚು ಬಳಸುವ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿ. ಅಲ್ಲಿ ವಿವಿಧ ಬ್ಯಾಟರಿ ಮೋಡ್ ಆಯ್ಕೆಗಳು ಇರುತ್ತವೆ. ಸೂಕ್ತವಾಗಿರುವ ಮೋಡ್ ಆಯ್ಕೆ ಮಾಡಿ ಬ್ಯಾಟರಿ ಚಾರ್ಜ್ ಉಳಿತಾಯ ಮಾಡಿ.
(2 / 10)
ಸಲಹೆ 2: ಆಪಲ್ ಕಂಪನಿಯ ಮ್ಯಾಕ್ ಲ್ಯಾಪ್‌ಟಾಪ್ ಬಳಸುವಿರಾ. ಹಾಗಾದ್ರೆ ಮ್ಯಾಕ್‌ಓಎಸ್ ಬ್ಯಾಟರಿ ಸೆಟ್ಟಿಂಗ್ ಕ್ಲಿಕ್ ಮಾಡಿ. ಅಲ್ಲಿ Slightly dim the display while on battery power ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. "Enable Power Nap while on battery power" ಎಂಬ ಆಯ್ಕೆಯನ್ನು ಟಿಕ್ ಮಾಡಬೇಡಿ. ಅದು ಅನ್‌ಟಿಕ್ ಆಗಿರಲಿ.
(3 / 10)
ಸಲಹೆ 3: ಬ್ಯಾಟರಿ ಚಾರ್ಜ್‌ಉಳಿತಯ ಮಾಡಲು ಇನ್ನೊಂದು ಪ್ರಮುಖ ಸಲಹೆ ಇದೆ. ಗ್ರಾಫಿಕ್ಸ್ ಮತ್ತು ಡಿಸ್‌ಪ್ಲೇ ಸೆಟ್ಟಿಂಗ್ ಹೊಂದಾಣಿಕೆಯ ಮೂಲಕವೂ ಲ್ಯಾಪ್‌ಟಾಪ್‌ನಲ್ಲಿ ವಿದ್ಯುತ್ ಉಳಿತಾಯ ಮಾಡಬಹುದು. ವಿಂಡೋಸ್ 11 ಬಳಸುತ್ತಿದ್ದರೆ Settings > System > Display > Graphicsಗೆ ಪ್ರವೇಶಿಸಿ. ಅಲ್ಲಿ ಪ್ರತಿಯೊಂದು ಆಪ್‌ಗೂ ಗ್ರಾಫಿಕ್ ಪ್ರೊಸೆಸರ್ ಹೊಂದಾಣಿಕೆ ಮಾಡಬಹುದು. ಕೆಲವೊಂದು ಲ್ಯಾಪ್‌ಟಾಪ್‌ಗಳಲ್ಲಿ ಹಳೆಯ ವಿಂಡೋಸ್ ವರ್ಷನ್‌ಗಳಲ್ಲಿ ಈ ಆಯ್ಕೆ ಇರದೆಯೂ ಇರಬಹುದು.
(4 / 10)
ಸಲಹೆ 4: ಹೆಚ್ಚು ಪವರ್ ಬಳಸುವ ನಿರ್ದಿಷ್ಟ ಅಪ್ಲಿಕೇಷನ್ ಅನ್ನು ಡಿಲೀಟ್ ಅಥವಾ ಕ್ಲೋಸ್ ಮಾಡಿ. ಕೆಲವೊಂದು ಅನಗತ್ಯ ಆಪ್‌ಗಳು ಹೆಚ್ಚು ಬ್ಯಾಟರಿ ಬಳಸಬಹುದು. ಇಂಟರ್‌ನೆಟ್ ಕೆಲಸ ಮಾಡುತ್ತಿರುವಾಗ ಏರೋಪ್ಲೇನ್ ಮೋಡ್‌ನಲ್ಲಿಟ್ಟು ಕೆಲಸ ಮಾಡಬಹುದು.
(5 / 10)
ಸಲಹೆ 5: ಲ್ಯಾಪ್‌ಟಾಪ್‌ಗೆ ಸರಿಯಾಗಿ ಗಾಳಿ ಪ್ರವೇಶಿಸಲಿ. ಈಗ ಹೆಚ್ಚಿನ ಲ್ಯಾಪ್‌ಟಾಪ್‌ಗಳು ಲೀಥಿಯಂ ಪಾಲಿಮಾರ್ ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುತ್ತವೆ. ಇದರಿಂದ ಲ್ಯಾಪ್‌ಟಾಪ್ ನಿರ್ವಹಣೆ ಹಳೆ ಕಾಲದಷ್ಟು ಕಷ್ಟವಿಲ್ಲ. ಕೆಲವೊಮ್ಮೆ ಲ್ಯಾಪ್‌ಟಾಪ್ ಬಿಸಿಯಾಗುವ ಅನುಭವ ಆಗಬಹುದು. ಇದು ಲ್ಯಾಪ್‌ಟಾಪ್‌ಗೆ ಸರಿಯಾಗಿ ಗಾಳಿಯಾಡುತ್ತಿಲ್ಲ ಎನ್ನುವುದರ ಸೂಚನೆ. ದಿಂಬಿನ ಮೇಲೆ, ಹಾಸಿಗೆ ಮೇಲೆ ಲ್ಯಾಪ್‌ಟಾಪ್ ಇಟ್ಟು ಕೆಲಸ ಮಾಡಿದರೆ ಲ್ಯಾಪ್‌ಟಾಪ್‌ನ ಹಿಂಬದಿ ಬ್ಲಾಕ್ ಆಗಿ ಒಳಗೆ ಗಾಳಿ ಹೋಗದು.
(6 / 10)
ಸಲಹೆ 6: ಎಲ್ಲಾ ಬ್ಯಾಟರಿಗಳಿಗೂ ನಿರ್ದಿಷ್ಟ ಆಯಸ್ಸು ಇರುತ್ತದೆ. ಅದರ ಬ್ಯಾಟರಿ ಚಾರ್ಜಿಂಗ್ ಸಾಮರ್ಥ್ಯ ಕಡಿಮೆಯಾಗಬಹುದು. ಇದಕ್ಕಾಗಿ ಬ್ಯಾಟರಿ ಹೆಲ್ತ್ ಚೆಕ್ ಅಪ್ ಅನ್ನು ಆಪರೇಟಿಂಗ್ ಸಿಸ್ಟಮ್ ಮೂಲಕವೇ ಮಾಡಬಹುದು. ಆಪಲ್ ಮ್ಯಾಕ್‌ಬುಕ್ ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿ ಆಯಸ್ಸು ತಿಳಿಯುತ್ತದೆ. ರಿಪ್ಲೇಸ್ ನೌ, ಸರ್ವೀಸ್ ಬ್ಯಾಟರಿ ಇತ್ಯಾದಿ ಸಂದೇಶಗಳು ಬರುತ್ತವೆ. ವಿಂಡೋಸ್ ಲ್ಯಾಪ್‌ಟಾಪ್‌ಗಳಲ್ಲಿ ವಿವಿಧ ಕಮಾಂಡ್ ಪ್ರಾಂಪ್ಟ್ ಮೂಲಕ ಬ್ಯಾಟರಿ ಆಯಸ್ಸು ತಿಳಿದುಕೊಳ್ಳಬಹುದು. ಆ ತಾಂತ್ರಿಕ ಜ್ಞಾನ ಇದ್ದರೆ ಪರಿಶೀಲಿಸಿ.
(7 / 10)
ಸಲಹೆ 7: ಬ್ಯಾಟರಿ ಮ್ಯಾನೇಜ್‌ಮೆಂಟ್ ಸೆಟ್ಟಿಂಗ್ ಪರಿಶೀಲಿಸಿ. ಈಗಿನ ಲ್ಯಾಪ್‌ಟಾಪ್‌ಗಳು ಲ್ಯಾಪ್‌ಟಾಪ್‌ನ ಟೆಂಪರೇಚರ್ ಇತಿಹಾಸ, ಚಾರ್ಜಿಂಗ್ ಪ್ಯಾಟರ್ನ್ ಇತ್ಯಾದಿಗಳನ್ನು ಹೊಂದಿರುತ್ತವೆ. ದಿನವಿಡೀ ಲ್ಯಾಪ್‌ಟಾಪ್‌ಗೆ ಪ್ಲಗ್ ಹಾಕಿರುವುದು ಒಳ್ಳೆಯದಲ್ಲ. ಮೊಬೈಲ್ ಚಾರ್ಜಿಂಗ್ ಯಾವ ರೀತಿ ಮಾಡುವಿರೋ ಅದೇ ರೀತಿ ಚಾರ್ಜ್ ಮಾಡುವುದು ಉತ್ತಮ.
(8 / 10)
ಸಲಹೆ 8: ಎನರ್ಜಿ ರೆಕೊಮೊಡೇಷನ್ ಫೀಚರ್ ಬಳಸಿ. ಈ ಫೀಚರ್ ವಿಂಡೋಸ್ 11 ಲ್ಯಾಪ್‌ಟಾಆಪ್‌ನಲ್ಲಿದೆ. ಸೆಟ್ಟಿಂಗ್‌ಗೆ ಹೋಗಿ ಎನರ್ಜಿ ರೆಕೊಮೊಡೇಷನ್‌ಗೆ ಹೋಗಬಹುದು. System > Power & battery > Energy recommendations ಎಂಬ ಆಯ್ಕೆಯನ್ನು ಪರಿಶೀಲಿಸಿ.
(9 / 10)
ಸಲಹೆ 9: ಲ್ಯಾಪ್‌ಟಾಪ್ ಬಳಕೆಯ ಮೇಲೆ ಗಮನವಿರಲಿ. ಅಗತ್ಯವಿದೆಯೋ ಇಲ್ಲವೋ ಹತ್ತಿಪ್ಪತ್ತು ಬ್ರೌಸರ್ ಟ್ಯಾಬ್‌ಗಳನ್ನು ತೆರೆದು ಇಡಬೇಡಿ. ಏನು ಕೆಲಸ ಮಾಡುವಿರೋ ಆ ಒಂದು ಪ್ರೋಗ್ರಾಂ ಮಾತ್ರ ತೆರೆದಿರಲಿ. ಉಳಿದ ಆಪ್‌ಗಳೆಲ್ಲವನ್ನೂ ಕ್ಲೋಸ್ ಮಾಡಿ. ಇದರಿಂದ ಸಾಕಷ್ಟು ಬ್ಯಾಟರಿ ಉಳಿತಾಯವಾಗುತ್ತದೆ.
ಇತರ ಗ್ಯಾಲರಿಗಳು