Lava Blaze 2: ಲಾವಾ ಬ್ಲೇಜ್ 2 5G ಮೊದಲ ನೋಟಕ್ಕೆ ಸಿಕ್ಕ ಫ್ಯೂಚರಿಸ್ಟಿಕ್ ಡಿಸೈನ್, ಬಜೆಟ್ ಫೋನ್‌ನ ಫೀಚರ್ಸ್ ವಿವರ ಹೀಗಿದೆ ನೋಡಿ
ಲಾವಾ ಬ್ಲೇಜ್ 2 5G ಸ್ಮಾರ್ಟ್‌ಫೋನ್ ತನ್ನ ವೃತ್ತಾಕಾರದ ಕ್ಯಾಮೆರಾ ಸೆಟಪ್ ಮತ್ತು ರಿಂಗ್ ಲೈಟ್‌ನೊಂದಿಗೆ ಗಮನ ಸೆಳೆಯುತ್ತದೆ. ನಮ್ಮ ಲಾವಾ ಬ್ಲೇಜ್ 2 5G ಮೊದಲ ಇಂಪ್ರೆಶನ್‌ನಲ್ಲಿ ಕಂಡ ವಿವರ ಹೀಗಿದೆ..
(1 / 5)
ಲಾವಾ ಬ್ಲೇಜ್ 2 5G ಯ ಮೊದಲ ನೋಟಕ್ಕೆ ಅದರ ವಿನ್ಯಾಸ ಗಮನಸೆಳೆದಿದೆ. ಇದು ಬೃಹತ್ 6.5 ಇಂಚ್ HD+ ಡಿಸ್‌ಪ್ಲೇ ಹೊಂದಿದ್ದು, 90Hz ರಿಫ್ರೆಶ್ ರೇಟ್ ಹೊಂದಿರುವ ಕಾರಣ ಮುದ ನೀಡುವ ನೋಟದ ಅನುಭವ ಕೊಡುತ್ತದೆ. 10,000 ರೂಪಾಯಿ ಒಳಗಿನ ವಿಭಾಗದ ಫೋನ್‌ಗಳ ಪೈಕಿ ಇದರ ವಿನ್ಯಾಸ ಗಮನಾರ್ಹ. ಹೊಳಪುಳ್ಳ ಗ್ಲಾಸ್ ಹೊಂದಿರುವ ಹಿಂಬದಿ ವಿನ್ಯಾಸದೊಂದಿಗೆ ವೃತ್ತಾಕಾರ ಕ್ಯಾಮೆರಾ ಸೆಟಪ್ ಕೂಡ ಇರುವುದು ವಿಶೇಷ.(Aishwarya Panda/HT Tech)
(2 / 5)
ಈ ಬಜೆಟ್ ಫೋನ್ 2.2GHz ಮೀಡಿಯಾಟೆಕ್ ಡಿಮ್ನೆಸ್ಟಿ 6020 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 13ಒಎಸ್‌ನಲ್ಲಿ ಕಾರ್ಯಾಚರಿಸುತ್ತದೆ. ಈ ಆಪರೇಟಿಂಗ್ ಸಿಸ್ಟಮ್ ಇತ್ತೀಚಿನ ಆಂಡ್ರಾಯ್ಡ್ 14ಗೆ ಅಪ್ಡೇಟ್ ಆಗುವುದಕ್ಕೂ ಹೊಂದುವಂತೆ ಇದೆ. 12 GB ರಾಮ್ (6GB +6GB ವರ್ಚುವಲ್) ಜತೆಗೆ 128GB ಆಂತರಿಕ ಸ್ಟೋರೇಜ್ ಹೊಂದಿದೆ. ಇದು ಅಗತ್ಯಕ್ಕೆ ಬೇಕಾದಷ್ಟು ಆಪ್‌ಗಳನ್ನು ಮತ್ತು ಬಿಜಿಎಂಐ ಗೇಮ್ಸ್ ಅನ್ನು ಸ್ಟೋರ್ ಮಾಡುವುದಕ್ಕೆ ಅನುಕೂಲ ಒದಗಿಸುತ್ತದೆ. ಇದರ ಸ್ಟೋರೇಜ್ ಅನ್ನು 1 ಟಿಬಿ ತನಕ ವಿಸ್ತರಿಸುವುದಕ್ಕೆ ಅವಕಾಶವಿದೆ.(Aishwarya Panda/HT Tech)
(3 / 5)
ಲಾವಾ ಬ್ಲೇಜ್ 2 ರಲ್ಲಿ ಹೆಚ್ಚು ಗಮನ ಸೆಳೆಯುವ ವಿಷಯವೆಂದರೆ ಎಐ ಕ್ಯಾಮೆರಾದೊಂದಿಗೆ ಅದರ ವೃತ್ತಾಕಾರದ 50 MP ಮೇನ್ ಕ್ಯಾಮೆರಾ ಸೆಟಪ್ ಆಗಿದೆ. ಕ್ಯಾಮೆರಾ ನಿಯೋಜನೆಯು ಸ್ಮಾರ್ಟ್‌ಫೋನ್ ಅನ್ನು ಕ್ಲಾಸಿ ಮತ್ತು ಪ್ರೀಮಿಯಂ ಆಗಿ ಕಾಣುವಂತೆ ಮಾಡುತ್ತದೆ. ಇದು ರಿಂಗ್ ಲೈಟ್ ಅನ್ನು ಸಹ ಹೊಂದಿದೆ, ಅದು ಚಾರ್ಜಿಂಗ್ ಮಾಡಿದಾಗ ಅಥವಾ ಅಧಿಸೂಚನೆಗಳನ್ನು ಸ್ವೀಕರಿಸಿದಾಗ ನೀಲಿ ಬಣ್ಣಕ್ಕೆ ತಿರುಗುವ ಮೂಲಕ ಗಮನಸೆಳೆಯುತ್ತದೆ.(Aishwarya Panda/HT Tech)
(4 / 5)
ಲಾವಾ ಬ್ಲೇಜ್ 2 5Gಗೆ ಬೃಹತ್ 5000mAh ಬ್ಯಾಟರಿಯ ಸಪೋರ್ಟ್ ಇದೆ. ದೀರ್ಘಕಾಲ ಚಾರ್ಜಿಂಗ್ ಹೊಂದಿರುವುದು ವಿಶೇಷ. ಈ ಸ್ಮಾರ್ಟ್‌ಫೋನ್ 18W ಚಾರ್ಜಿಂಗ್ ಅಡಾಪ್ಟರ್‌ನಲ್ಲಿ ಚಾರ್ಜಿಂಗ್ ಮಾಡಬಹುದು. ಇದು 10 ಪ್ರತಿಶತ ಚಾರ್ಜ್ ಹೊಂದಿರುವ ಫೋನ್ ಅನ್ನು 100 ಪ್ರತಿಶತದವರೆಗೆ ಚಾರ್ಜ್ ಮಾಡಲು ಕೇವಲ ಒಂದು ಗಂಟೆ ತೆಗೆದುಕೊಳ್ಳುತ್ತದೆ.(Aishwarya Panda/HT Tech)
(5 / 5)
ಲಾವಾ ಬ್ಲೇಜ್ 2 5Gನ ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುವುದು ಮತ್ತೊಂದು ಆಕರ್ಷಕ ಫೀಚರ್. ಇದು ಸ್ಮಾರ್ಟ್‌ಫೋನ್ ಅನ್ನು ಮಿಲಿಸೆಕೆಂಡ್‌ಗಳಲ್ಲಿ ತ್ವರಿತವಾಗಿ ಅನ್‌ಲಾಕ್ ಮಾಡುತ್ತದೆ. ಲಾವಾ ಬ್ಲೇಜ್ 2 ಆರಂಭಿಕ ಬೆಲೆ 9,999 ರೂಪಾಯಿ. ಇದು ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ ಮತ್ತು ಗ್ಲಾಸ್ ಲ್ಯಾವೆಂಡರ್ ಎಂಬ ಮೂರು ಬಣ್ಣ ಆಯ್ಕೆಗಳೊಂದಿಗೆ ಬರುತ್ತದೆ(Aishwarya Panda/HT Tech)
ಇತರ ಗ್ಯಾಲರಿಗಳು