iPhone 16 Prices In India: ಭಾರತದಲ್ಲಿ ಐಫೋನ್ 16 ಸೀರಿಸ್ ದರ ಎಷ್ಟಿದೆ? ಯಾವಾಗ ಖರೀದಿಗೆ ಲಭ್ಯವಿರಲಿದೆ?
- iPhone 16 Prices In India: ಆಪಲ್ ಕಂಪನಿಯು ಐಫೋನ್ 16 ಸೀರಿಸ್ ಬಿಡುಗಡೆ ಮಾಡಿದೆ. ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಎಐ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ಐಫೋನ್ 16 ಬೆಲೆ ಎಷ್ಟು? ಇದು ಯಾವಾಗ ಲಭ್ಯವಿರುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
- iPhone 16 Prices In India: ಆಪಲ್ ಕಂಪನಿಯು ಐಫೋನ್ 16 ಸೀರಿಸ್ ಬಿಡುಗಡೆ ಮಾಡಿದೆ. ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಎಐ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ ಐಫೋನ್ 16 ಬೆಲೆ ಎಷ್ಟು? ಇದು ಯಾವಾಗ ಲಭ್ಯವಿರುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗಿದೆ.
(1 / 6)
iPhone 16 Prices In India: ಪ್ರತಿವರ್ಷ ನಡೆಯುವ ಆಪಲ್ ಇವೆಂಟ್ ಮೇಲೆ ಐಫೋನ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟಿರುತ್ತಾರೆ. ಈ ಬಾರಿಯ ಇವೆಂಟ್‌ನಲ್ಲಿ ಅಂತಹ ಅಚ್ಚರಿಯ ಸುದ್ದಿಯೇನೂ ಇರಲಿಲ್ಲ. ಐಫೋನ್ 15ಗಿಂತ ತುಸು ಅಪ್‌ಡೇಟ್ ಆಗಿರುವ ಐಫೋನ್ 16 ಅನ್ನು ಆಪಲ್ ಬಿಡುಗಡೆ ಮಾಡಿತ್ತು. ಕೃತಕ ಬುದ್ಧಿಮತ್ತೆ 'ಪವರ್' ಹೊಂದಿರುವ ಐಫೋನ್ 16 ಬಿಡುಗಡೆಯ ಸಂದರ್ಭದಲ್ಲಿ "ಹೊಸ ಯುಗ ಪ್ರಾರಂಭವಾಗಿದೆ" ಎಂದು ಐಫೋನ್ ಬಿಡುಗಡೆ ಸಮಯದಲ್ಲಿ ಆಪಲ್ ನ ಮುಖ್ಯ ಕಾರ್ಯನಿರ್ವಾಹಕ ಟಿಮ್ ಕುಕ್ ಹೇಳಿದ್ದಾರೆ.
(2 / 6)
ಆಪಲ್‌ನ ಕೃತಕ ಬುದ್ಧಿಮತ್ತೆ ಪರೀಕ್ಷಾ ಆವೃತ್ತಿಯು ಮುಂದಿನ ತಿಂಗಳಿನಿಂದ ಯುಎಸ್ ಸ್ಪೋಕನ್ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ. ಮುಂದಿನ ವರ್ಷದ ಡಿಸೆಂಬರ್ ತಿಂಗಳ ಬಳಿಕ ಸ್ಥಳೀಯ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ. 2025 ರಲ್ಲಿ ಇತರ ಭಾಷೆಗಳಲ್ಲಿಯೂ ಲಭ್ಯವಿರುತ್ತದೆ.
(3 / 6)
ಐಫೋನ್ ತುಂಬಾ ಬಿಸಿಯಾಗುತ್ತಿದೆ ಎಂದು ಅನೇಕ ಜನರು ದೂರುತ್ತಾರೆ. ಈಗ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆಪಲ್ ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ. ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಕೂಡ ಸುಧಾರಿತ ಕೂಲಿಂಗ್ ಚೇಂಬರ್ ಅನ್ನು ಹೊಂದಿವೆ. ಪರಿಣಾಮವಾಗಿ, ಫೋನ್ ತುಂಬಾ ಬಿಸಿಯಾಗದು.
(4 / 6)
ಭಾರತದಲ್ಲಿ ಐಫೋನ್ ಗಳ ಬೆಲೆ ಎಷ್ಟು?: ಐಫೋನ್ 16 (128 ಜಿಬಿ) ಬೆಲೆ 79,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಐಫೋನ್ 16 ಪ್ಲಸ್ (128 ಜಿಬಿ) ಬೆಲೆ 89,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಐಫೋನ್ 16 ಪ್ರೊ (128 ಜಿಬಿ) ಬೆಲೆ 1,19,000 ರೂ.ಗಳಿಂದ ಪ್ರಾರಂಭವಾಗುತ್ತದೆ. ಐಫೋನ್ 16 ಪ್ರೊ (ಮ್ಯಾಕ್ಸ್ 256 ಜಿಬಿ) ಬೆಲೆ 1,44,900 ರೂ.ಗಳಿಂದ ಪ್ರಾರಂಭವಾಗುತ್ತದೆ.
(5 / 6)
ಭಾರತದಲ್ಲಿ ಹೊಸ ಐಫೋನ್ ಗಳು ಸೆಪ್ಟೆಂಬರ್ 20 ರಿಂದ ಖರೀದಿಗೆ ಲಭ್ಯವಿರುತ್ತವೆ. ಭಾರತ, ಫ್ರಾನ್ಸ್, ಜಪಾನ್ ಮತ್ತು ಜರ್ಮನಿ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಸೆಪ್ಟೆಂಬರ್ 13 ರಂದು (ಶುಕ್ರವಾರ) ಪ್ರಿ-ಆರ್ಡರ್ ಮಾಡಿರುವವರಿಗೆ ಲಭ್ಯವಿರುತ್ತದೆ ಎಂದು ಆಪಲ್ ಕಂಪನಿ ಘೋಷಿಸಿದೆ.
ಇತರ ಗ್ಯಾಲರಿಗಳು