Kavya Gowda: ಅದ್ಧೂರಿಯಾಗಿ ನೆರವೇರಿತು ಕಾವ್ಯಾ ಗೌಡ ಸೀಮಂತ; ಇಲ್ಲಿವೆ ನಟಿಯ ಖುಷಿ ಕ್ಷಣದ ಕಲರ್‌ಫುಲ್ ಫೋಟೋ ಆಲ್ಬಂ
- Kavya Gowda Seemantha: ಕಿರುತೆರೆ ಜತೆಗೆ ಸ್ಯಾಂಡಲ್‌ವುಡ್‌ನಲ್ಲೂ ಗುರುತಿಸಿಕೊಂಡ ನಟಿ ಕಾವ್ಯಾ ಗೌಡ, ಕಳೆದ ತಿಂಗಳಷ್ಟೇ ಇಬ್ಬರಿದ್ದವರು ಮೂವರಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಬೇಬಿ ಬಂಪ್ ಫೋಟೋಶೂಟ್ ಸಹ ಹಂಚಿಕೊಂಡಿದ್ದರು. ಇದೀಗ ಇದೇ ನಟಿಯ ಅದ್ಧೂರಿ ಸೀಮಂತ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಸೀಮಂತ ನಡೆದಿದೆ. ಇಲ್ಲಿದೆ ಅದರ ಫೋಟೋ ಝಲಕ್.

(1 / 11)
ಕನ್ನಡ ಕಿರುತೆರೆ ಮತ್ತು ಸಿನಿಮಾ ಎರಡಲ್ಲೂ ಗುರುತಿಸಿಕೊಂಡವರು ನಟಿ ಕಾವ್ಯಾ ಗೌಡ. ಈಗ ಇದೇ ಕಾವ್ಯಾ ಗೌಡ ಸೀಮಂತದ ಸಂಭ್ರಮದಲ್ಲಿದ್ದಾರೆ.
(2 / 11)
ಬೆಂಗಳೂರಿನ ತಾಜ್ ವೆಸ್ಟ್‌ಎಂಡ್‌ನಲ್ಲಿ ಅದ್ಧೂರಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಸೋಮಶೇಖರ್ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ.
(5 / 11)
ಮದುವೆಯಾದ ನಾಲ್ಕು ವರ್ಷದ ಬಳಿಕ ಅಂದರೆ ಡಿ. 2ರಂದು ಈ ಜೋಡಿಯ ಮದುವೆಯ ಎರಡನೇ ವಾರ್ಷಿಕೋತ್ಸವನ್ನು ಆಚರಿಸಿಕೊಂಡು, ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳ ಮುಂದೆ ಹಂಚಿಕೊಂಡಿತ್ತು.
(6 / 11)
ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಸಾಲು ಸಾಲು ಬೇಬಿ ಬಂಪ್ ಫೋಟೋಗಳನ್ನು ಕಾವ್ಯಾ ಗೌಡ ಶೇರ್ ಮಾಡಿಕೊಂಡಿದ್ದರು.
(7 / 11)
‘ಇದುವರೆಗೂ ನಾವು ಮುಚ್ಚಿಟ್ಟಿದ ಬೆಸ್ಟ್ ಸೀಕ್ರೆಟ್ ಇದು ಎಂದು ಬರೆದುಕೊಂಡು, ಮದುವೆ ಆ್ಯನಿವರ್ಸರಿ ದಿನವೇ ಗುಡ್‌ನ್ಯೂಸ್ ಕೊಟ್ಟಿದ್ದರು ಕಾವ್ಯಾ ಗೌಡ
(8 / 11)
ಜೀ ಕನ್ನಡದಲ್ಲಿ 2015ರಲ್ಲಿ ಪ್ರಸಾರವಾಗುತ್ತಿದ್ದ ಶುಭ ವಿವಾಹ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ಕಾವ್ಯಾ, ಅದಾದ ಬಳಿಕ ರಾಧಾ ರಮಣ ಸೀರಿಯಲ್ ಮೂಲಕ ಮನೆ ಮಾತಾದರು.
(9 / 11)
ಸೀರಿಯಲ್‌ನ ಖ್ಯಾತಿಯನ್ನೇ ಹೊತ್ತು ಹಿರಿತೆರೆಗೆ ಕಾಲಿಟ್ಟು ಅದೃಷ್ಟ ಪರೀಕ್ಷೆಗಿಳಿದರು. 2018ರಲ್ಲಿ ಬಕಾಸುರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು.
ಇತರ ಗ್ಯಾಲರಿಗಳು