Fish cooking Tips: ನೀವು ಮೀನುಪ್ರಿಯರಾ..? ಹಾಗಿದ್ರೆ ಮೀನು ಖರೀದಿಸುವಾಗ, ಅಡುಗೆ ಮಾಡುವಾಗ ಈ ಅಂಶಗಳನ್ನು ತಿಳಿದುಕೊಳ್ಳಲೇಬೇಕು!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Fish Cooking Tips: ನೀವು ಮೀನುಪ್ರಿಯರಾ..? ಹಾಗಿದ್ರೆ ಮೀನು ಖರೀದಿಸುವಾಗ, ಅಡುಗೆ ಮಾಡುವಾಗ ಈ ಅಂಶಗಳನ್ನು ತಿಳಿದುಕೊಳ್ಳಲೇಬೇಕು!

Fish cooking Tips: ನೀವು ಮೀನುಪ್ರಿಯರಾ..? ಹಾಗಿದ್ರೆ ಮೀನು ಖರೀದಿಸುವಾಗ, ಅಡುಗೆ ಮಾಡುವಾಗ ಈ ಅಂಶಗಳನ್ನು ತಿಳಿದುಕೊಳ್ಳಲೇಬೇಕು!

  • ನಾನ್‌ ವೆಜ್‌ ಎಂದಾಕ್ಷಣ ಚಿಕನ್‌, ಮಟನ್‌ ಮಾತ್ರವಲ್ಲ ಅದರಲ್ಲಿ ಸೀ ಫುಡ್‌ ಕೂಡಾ ಸೇರಿದೆ. ಬಹಳಷ್ಟು ಜನರು ಸೀ ಫುಡ್‌ ಇಷ್ಟಪಡುತ್ತಾರೆ. ವಾರಕೊಮ್ಮೆ ಪ್ರಾನ್ಸ್‌, ಮೀನು ಅಥವಾ ಇನ್ನಿತರ ಸೀ ಫುಡ್‌ ತಿನ್ನಲು ಬಯಸುತ್ತಾರೆ. ಅದರಲ್ಲೂ ಮೀನು ಬಹುತೇಕ ಎಲ್ಲರಿಗೂ ಇಷ್ಟ.

ಮೀನು ಸೇವಿಸುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ಕೆಲವರು ರೆಸ್ಟೋರೆಂಟ್‌ಗಳಿಗೆ ತೆರಳಿ ತಮಗಿಷ್ಟವಾದ ಸೀ ಫುಡ್‌ ತಿಂದು ಬರುತ್ತಾರೆ. ಇನ್ನೂ ಕೆಲವರಿಗೆ ಮನೆಯಲ್ಲೇ ಮಾಡಿದ ಅಡುಗೆ ಇಷ್ಟ. ಆದರೆ ನೀವು ಮೀನು ಖರೀದಿಸುವಾಗ ಆಗಲೀ, ಅಡುಗೆ ಮಾಡುವಾಗ ಆಗಲೀ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಡಬೇಕು.  
icon

(1 / 7)

 ಮೀನಿನ ಅಡುಗೆ ರುಚಿಯಾಗಿ ಇರಬೇಕೆಂದರೆ ಮೊದಲಿಗೆ ಅದನ್ನು ಖರೀದಿಸುವಾಗ ಸರಿಯಾದ ಮೀನುಗಳನ್ನು ಆರಿಸುವುದು ಬಹಳ ಮುಖ್ಯ. ಮೀನು ಖರೀದಿಸುವಾಗ ಸ್ಪಷ್ಟ ಮತ್ತು ಸ್ವಚ್ಛವಾದ ಕಣ್ಣುಗಳು, ಕೆಂಪು ಅಥವಾ ಗುಲಾಬಿ ಕಿವಿರುಗಳನ್ನು ಹೊಂದಿರುವ ಮೀನುಗಳನ್ನು ಆರಿಸಿ. ಮೀನು ತಾಜಾವಾಗಿದೆ ಮತ್ತು ಅದಕ್ಕೆ ಯಾವುದೇ ರಾಸಾಯನಿಕಗಳನ್ನು ಸೇರಿಸಲಾಗಿಲ್ಲ ಎಂಬುದು ಇದರ ಅರ್ಥ. ಮೀನಿನ ಕಣ್ಣುಗಳು ಹೊಳೆಯುತ್ತಿದ್ದರೆ ಅದು ತಾಜಾ ಮೀನು, ಅಥವಾ ಅದರ ಕಣ್ಣು ಮಬ್ಬಾಗಿದ್ದರೆ, ಕಣ್ಣಿನ ಸುತ್ತಲಿನ ಚರ್ಮ ಹಳದಿ ಬಣ್ಣಕ್ಕೆ ತಿರುಗಿದ್ದರೆ ಅದು ಬಹಳ ದಿನಗಳಿಂದ ಶೇಖರಿಸಿದ ಮೀನು ಎಂದರ್ಥ.   
icon

(2 / 7)

 ಮೀನು ಬೇಗನೆ ಕೊಳೆಯುತ್ತದೆ. ಆದ್ದರಿಂದ ಖರೀದಿಸಿದ ನಂತರ ಸಾಧ್ಯವಾದಷ್ಟು ಬೇಗ ಅಡುಗೆ ಮಾಡಿ. ಅಥವಾ ಅಡುಗೆಗೆ ಸಮಯ ಬೇಕಿದ್ದಲ್ಲಿ ಮೀನುಗಳನ್ನು ಐಸ್‌ ಕ್ಯೂಬ್‌ ಮೇಲೆ ಇಟ್ಟು ಅದನ್ನು ರೆಫ್ರಿಜರೇಟರ್‌ನಲ್ಲಿ ಇಡಿ. ಅಥವಾ ಹರಳು ಉಪ್ಪಿನ ಜೊತೆ ಸಂಗ್ರಹಿಸಿ ಇಟ್ಟರೆ, ಬಹಳ ಸಮಯ ಇಟ್ಟರೂ ಮೀನು ಕೆಡುವುದಿಲ್ಲ.   
icon

(3 / 7)

 ನೆನಪಿಡಿ, ರುಚಿ ಹೆಚ್ಚಾಗಬೇಕೆಂಬ ಕಾರಣಕ್ಕೆ ನೀವು ಬಹಳ ಸಮಯ ಮ್ಯಾರಿನೇಟ್ ಮಾಡಿದರೂ ಮೀನು ರುಚಿಯನ್ನು ಕಳೆದುಕೊಳ್ಳುತ್ತದೆ. ಗರಿಷ್ಠ ಎರಡು ಗಂಟೆಗಳ ಕಾಲ  ಮಸಾಲೆಯೊಂದಿಗೆ ಮೀನನ್ನು ಮ್ಯಾರಿನೇಟ್ ಮಾಡಿ ಅಷ್ಟು ಸಮಯ ಆಗದಿದ್ದರೆ ಕನಿಷ್ಠ 30 ನಿಮಿಷ ಸಾಕು.  
icon

(4 / 7)

 ಮೀನುಗಳನ್ನು ಎಣ್ಣೆಯಲ್ಲಿ ಫ್ರೈ ಮಾಡುವಾಗ ಅಥವಾ ಬೇಯಿಸುವ ಮೊದಲು ನೀರಿನ ಅಂಶ ಹೋಗುವಂತೆ ಚೆನ್ನಾಗಿ ಒರೆಸಿ. ಇಲ್ಲದಿದ್ದರೆ ಮೀನಿನ ರುಚಿ ಕಳೆದುಕೊಳ್ಳುತ್ತದೆ. ಮಸಾಲೆ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. 
icon

(5 / 7)

 ಮೀನಿನ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಬೇಕು. ಆದ್ದರಿಂದ ಮೀನುಗಳನ್ನು ಬೇಯಿಸುವಾಗ ಆಗ್ಗಾಗ್ಗೆ ಅದನ್ನು ತಿರುಗಿಸಬೇಕು. ಅದನ್ನು ಉಲ್ಟಾ ಮಾಡುವಾಗ ಮೀನು ಮುರಿಯುವ ಸಾಧ್ಯತೆ ಇದೆ. ಈ ಸಮಸ್ಯೆ ತಪ್ಪಿಸಲು ಮೀನಿನ ಸ್ಪಾಟುಲಾ ಬಳಸಿ. ಈ ರೀತಿಯ ಚಮಚವು ಮೀನು ಒಡೆಯುವುದನ್ನು ತಪ್ಪಿಸುತ್ತದೆ. 
icon

(6 / 7)

 ಒಂದು ವೇಳೆ ನೀವು ಮೀನನ್ನು ಗ್ರಿಲ್‌ ಅಥವಾ ಬೇಕ್‌ ಮಾಡಬೇಕು ಎಂದುಕೊಂಡಿದ್ದರೆ ಅದಕ್ಕೂ ಮುನ್ನ, ನೀವು ಸ್ವಲ್ಪ ಮಯೋನಿಸ್‌ ಹಚ್ಚಿ. ಇದರಿಂದ ಮೀನು ಗ್ರಿಲ್‌ಗೆ ಅಂಟುವುದಿಲ್ಲ. ಮೀನು ಕೂಡ ತಿನ್ನಲು ರುಚಿಕರವಾಗಿರುತ್ತದೆ.  
icon

(7 / 7)

ಇತರ ಗ್ಯಾಲರಿಗಳು