Salaar Shooting: ಎಷ್ಟು ದಿನ ಎಲ್ಲೆಲ್ಲಿ ನಡೆದಿತ್ತು ಸಲಾರ್‌ ಶೂಟಿಂಗ್‌, ಸಲಾರ್‌ ಅಧ್ಯಾಯ 1 ಚಿತ್ರೀಕರಣದ ವಿವರ ನೀಡಿದ ಪ್ರಶಾಂತ್‌ ನೀಲ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Salaar Shooting: ಎಷ್ಟು ದಿನ ಎಲ್ಲೆಲ್ಲಿ ನಡೆದಿತ್ತು ಸಲಾರ್‌ ಶೂಟಿಂಗ್‌, ಸಲಾರ್‌ ಅಧ್ಯಾಯ 1 ಚಿತ್ರೀಕರಣದ ವಿವರ ನೀಡಿದ ಪ್ರಶಾಂತ್‌ ನೀಲ್‌

Salaar Shooting: ಎಷ್ಟು ದಿನ ಎಲ್ಲೆಲ್ಲಿ ನಡೆದಿತ್ತು ಸಲಾರ್‌ ಶೂಟಿಂಗ್‌, ಸಲಾರ್‌ ಅಧ್ಯಾಯ 1 ಚಿತ್ರೀಕರಣದ ವಿವರ ನೀಡಿದ ಪ್ರಶಾಂತ್‌ ನೀಲ್‌

  • Salaar Movie News: ಪ್ಯಾನ್‌ ಇಂಡಿಯಾ ನಟ ಪ್ರಬಾಸ್‌ ಅಭಿನಯದ ಸಲಾರ್‌ ಭಾಗ 1 ಕೇಸ್‌ಫೈರ್‌ ಟ್ರೈಲರ್‌ ನಿನ್ನೆ ಬಿಡುಗಡೆಯಾಗಿದ್ದು, ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದೆ. ಕನ್ನಡ ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಈ ಸಿನಿಮಾದ ಕೆಲವು ಶೂಟಿಂಗ್‌ ವಿವರಗಳನ್ನು ನೋಡಿದ್ದಾರೆ. ಸಲಾರ್‌ ಸಿನಿಮಾವು ಡಿಸೆಂಬರ್‌ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಡಿಸೆಂಬರ್‌ 22ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಸಲಾರ್‌ ಸಿನಿಮಾದ ಕುರಿತು ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ನಿನ್ನೆ ಬಿಡುಗಡೆಯಾದ ಟ್ರೈಲರ್‌ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಲಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಸಲಾರ್‌ ಚಿತ್ರೀಕರಣದ ಒಂದಿಷ್ಟು ವಿವರ ನೀಡಿದ್ದಾರೆ. 
icon

(1 / 5)

ಡಿಸೆಂಬರ್‌ 22ರಂದು ದೇಶಾದ್ಯಂತ ಬಿಡುಗಡೆಯಾಗಲಿರುವ ಸಲಾರ್‌ ಸಿನಿಮಾದ ಕುರಿತು ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ನಿನ್ನೆ ಬಿಡುಗಡೆಯಾದ ಟ್ರೈಲರ್‌ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸಲಾರ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಸಲಾರ್‌ ಚಿತ್ರೀಕರಣದ ಒಂದಿಷ್ಟು ವಿವರ ನೀಡಿದ್ದಾರೆ. (Twitter)

ಕನ್ನಡ ನಟ ಯಶ್‌ ನಟಿಸಿದ್ದ ಕೆಜಿಎಫ್‌ ಅನ್ನು ಇದೇ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ. ಸಲಾರ್‌ ಸಿನಿಮಾವೂ ಪೂರ್ಣ ಪ್ರಮಾಣದ ಗ್ಯಾಂಗ್‌ಸ್ಟಾರ್‌ ಸಿನಿಮಾ. ಟ್ರೈಲರ್‌ ಬಿಡುಗಡೆಯಾದ ಬಳಿಕ ಈ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. 
icon

(2 / 5)

ಕನ್ನಡ ನಟ ಯಶ್‌ ನಟಿಸಿದ್ದ ಕೆಜಿಎಫ್‌ ಅನ್ನು ಇದೇ ಪ್ರಶಾಂತ್‌ ನೀಲ್‌ ನಿರ್ದೇಶಿಸಿದ್ದಾರೆ. ಸಲಾರ್‌ ಸಿನಿಮಾವೂ ಪೂರ್ಣ ಪ್ರಮಾಣದ ಗ್ಯಾಂಗ್‌ಸ್ಟಾರ್‌ ಸಿನಿಮಾ. ಟ್ರೈಲರ್‌ ಬಿಡುಗಡೆಯಾದ ಬಳಿಕ ಈ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. 

ಶೂಟಿಂಗ್‌ ನಡೆದಿರುವುದು ಎಲ್ಲಿ?: ನಿರ್ದೇಶಕ ಪ್ರಶಾಂತ್ ನೀಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಸಲಾರ್ ಭಾಗ 1ರ ಶೂಟಿಂಗ್‌ಗೆ ಸುಮಾರು 114 ದಿನ ಬೇಕಾಯಿತು ಎಂದು ಹೇಳಿದ್ದಾರೆ.  ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
icon

(3 / 5)

ಸಲಾರ್‌ ಚಿತ್ರದ ಕೆಲವು ದೃಶ್ಯಗಳನ್ನು ಸಿಂಗರೇಣಿ ಗಣಿಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇದಲ್ಲದೆ ವಿಶಾಖಪಟ್ಟಣ ಬಂದರು, ಮಂಗಳೂರು ಬಂದರು ಮುಂತಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಕೆಲವು ಭಾಗಗಳನ್ನು ಯುರೋಪ್‌ನಲ್ಲಿ ಶೂಟಿಂಗ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. 
icon

(4 / 5)

ಸಲಾರ್‌ ಚಿತ್ರದ ಕೆಲವು ದೃಶ್ಯಗಳನ್ನು ಸಿಂಗರೇಣಿ ಗಣಿಯಲ್ಲಿ ಚಿತ್ರೀಕರಿಸಲಾಗಿದೆಯಂತೆ. ಇದಲ್ಲದೆ ವಿಶಾಖಪಟ್ಟಣ ಬಂದರು, ಮಂಗಳೂರು ಬಂದರು ಮುಂತಾದ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಕೆಲವು ಭಾಗಗಳನ್ನು ಯುರೋಪ್‌ನಲ್ಲಿ ಶೂಟಿಂಗ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. (Twitter)

ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾ ಇದೇ ಡಿಸೆಂಬರ್‌ 22ರಂದು ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಕನ್ನಡದ ರವಿ ಬಸ್ರೂರು ಸಂಗೀತವಿದೆ. ಇದು ಹೊಂಬಾಳೆ ಫಿಲಂಸ್‌ನ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿದೆ. 
icon

(5 / 5)

ಇತರ ಗ್ಯಾಲರಿಗಳು