ಚಿನ್ನದ ಹುಡುಗ ನೀರಜ್ ಚೋಪ್ರಾ ಟಾಪ್ 5 ಜಾವೆಲಿನ್ ಎಸೆತಗಳಿವು
- Neeraj Chopra: 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಂತಿಮ ಸುತ್ತು ಪ್ರವೇಶಿಸಿರುವ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ, ಚಿನ್ನದ ಪದಕ ಗೆಲ್ಲುವ ವಿಶ್ವಾದಲ್ಲಿದ್ದಾರೆ. ಈವರೆಗಿನ ಅವರ ವೃತ್ತಿಬದುಕಿನ ಅತ್ಯುತ್ತಮ ಐದು ಜಾವೆಲಿನ್ ಎಸೆತಗಳ ಪಟ್ಟಿ ಹೀಗಿದೆ.
- Neeraj Chopra: 2023ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಅಂತಿಮ ಸುತ್ತು ಪ್ರವೇಶಿಸಿರುವ ಭಾರತದ ಗೋಲ್ಡನ್ ಬಾಯ್ ನೀರಜ್ ಚೋಪ್ರಾ, ಚಿನ್ನದ ಪದಕ ಗೆಲ್ಲುವ ವಿಶ್ವಾದಲ್ಲಿದ್ದಾರೆ. ಈವರೆಗಿನ ಅವರ ವೃತ್ತಿಬದುಕಿನ ಅತ್ಯುತ್ತಮ ಐದು ಜಾವೆಲಿನ್ ಎಸೆತಗಳ ಪಟ್ಟಿ ಹೀಗಿದೆ.
(1 / 6)
2022ರಲ್ಲಿ ಸ್ವೀಡನ್‌ನಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ತಮ್ಮ ವೃತ್ತಿಜೀವನದ ಅತ್ಯುತ್ತಮ ಎಸೆತ ದಾಖಲಿಸಿದರು. 89.94 ಮೀಟರ್ ದೂರ ಜಾವೆಲಿನ್ ಎಸೆದು ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.(World Athletics Twitter)
(2 / 6)
ಕಳೆದ ವರ್ಷ, ಅವರು ಫಿನ್‌ಲ್ಯಾಂಡ್‌ನನಲ್ಲಿ 89 ಮೀಟರ್ ಗಡಿಯನ್ನು ದಾಟಿದರು, ಅಲ್ಲಿ 89.30 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.(Narendra Modi Twitter)
(3 / 6)
2022ರ ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ನೀರಜ್ 89 ಮೀಟರ್‌ಗಳನ್ನು ದಾಟಿದ ಏಕೈಕ ಅಥ್ಲೀಟ್. ಬರೋಬ್ಬರಿ 89.08 ಮೀಟರ್ ದೂರ ಎಸೆದು ಚಿನ್ನ ಗೆದ್ದಿದ್ದರು.(AP)
(5 / 6)
ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ನೀರಜ್ 88.77 ಮೀಟರ್ ಎಸೆದು, , ಆ ಸುತ್ತಿನಲ್ಲಿ ಅಗ್ರಸ್ಥಾನ ಪಡೆದರು. ಅಲ್ಲದೆ ಫೈನಲ್‌ಗೆ ಲಗ್ಗೆ ಇಟ್ಟರು.(REUTERS)
(6 / 6)
ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ 88.77 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ನೀರಜ್, ನೇರವಾಗಿ ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಅಲ್ಲದೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡರು. ಭಾನುವಾರ, ಆಗಸ್ಟ್ 28ರಂದು ಭಾರತದ ಜಾವೆಲಿನ್ ತಾರೆಯ ಫೈನಲ್ಸ್ ನಡೆಯುತ್ತಿದ್ದು, ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಸ್ವರ್ಣ ಗೆದ್ದರುವ ಅಥ್ಲೀಟ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮೊದಲ ಚಿನ್ನ ಗೆಲ್ಲುವ ವಿಶ್ವಾದಲ್ಲಿದ್ದಾರೆ.
ಇತರ ಗ್ಯಾಲರಿಗಳು