TVS Ronin 225: ಮಾಡಿಫೈಡ್ ಟಿವಿಎಸ್ ರೋನಿನ್ 225: ಗೋವಾದಲ್ಲಿ ಅನಾವರಣಗೊಂಡ ಈ 'ಬ್ಯೂಟಿ ಬೈಕ್' ಲುಕ್, ಡಿಸೈನ್ ಸೂಪರ್
TVS Ronin 225: ಟಿವಿಎಸ್ ಸ್ಪೋರ್ಟ್ಸ್ ವೆರಿಯೆಂಟ್ ಬೈಕ್‌ಗಳಲ್ಲಿ ಒಂದಾದ ರೋನಿನ್ 225ನ ಮಾಡಿಫೈಡ್ ವರ್ಷನ್ ಅನಾವರಣಗೊಂಡಿದೆ. ಗೋವಾದಲ್ಲಿ ನಡೆದ ಮೋಟೋ ಸೋಲ್ 2023 ರಲ್ಲಿ ಈ ಮಾಡಿಫೈಡ್ ಬೈಕ್‌ನ್ನು ಅನಾವರಣಗೊಳಿಸಲಾಯಿತು. ಇದನ್ನು ಫ್ಲ್ಯಾಟ್ ಟ್ರ್ಯಾಕರ್‌ನಂತೆ 4 ಇತರ ಕಸ್ಟಮೈಸ್ ಮಾಡಲಾದ ಮಾದರಿಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ..
(2 / 5)
ಈ ಮಾಡಿಫೈಡ್ ಮಾದರಿಯಲ್ಲಿ ಬೈಕ್‌ನ ತೂಕವನ್ನು ಕಡಿಮೆ ಮಾಡಲು ಟೇಲ್ ಲ್ಯಾಂಪ್, ಹೆಡ್ ಲ್ಯಾಂಪ್ ಮತ್ತು ಇನ್‌ಸ್ಟ್ರುಮೆಂಟ್ ಪ್ಯಾನೆಲ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಅಲ್ಲದೆ, ಮುಂಭಾಗದ ಬ್ರೇಕ್ ಅನ್ನು ಸಹ ತೆಗೆದುಹಾಕಲಾಗಿದೆ. ಏಕೆಂದರೆ ಫ್ಲ್ಯಾಟ್ ಟ್ರ್ಯಾಕರ್‌ಗಳಲ್ಲಿ ಫ್ರಂಟ್ ಬ್ರೇಕ್ ಇರುವುದಿಲ್ಲ.(HT)
(3 / 5)
ಇದರಲ್ಲಿ 225.9 ಸಿಸಿ ಸಾಮಾನ್ಯ ಎಂಜಿನ್ ಅನ್ನು ಮುಂದುವರಿಸಲಾಗಿದೆ. ಹೊಸ ಎಕ್ಸಾಸ್ಟ್ ಸಿಸ್ಟಮ್ ಅನ್ನು ಸ್ಥಾಪಿಸಲಾಗಿದೆ.(HT)
(4 / 5)
ಹ್ಯಾಂಡಲ್‌ಬಾರ್ ಅನ್ನು ಅಗಲಗೊಳಿಸಲಾಗಿದೆ ಮತ್ತು ಹ್ಯಾಂಡಲ್‌ಬಾರ್ ಎತ್ತರವನ್ನು ಸಹ ಹೆಚ್ಚಿಸಲಾಗಿದೆ. ನೀಲಿ, ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣದ ಮಿಶ್ರಣ ಒಟ್ಟಾರೆ ಬೈಕ್‌ನ ಅಂದವನ್ನು ಹೆಚ್ಚಿಸಿದೆ.(HT)
ಇತರ ಗ್ಯಾಲರಿಗಳು